'ಸಂತು ಸ್ಟ್ರೈಟ್ ಫಾರ್ವರ್ಡ್' ಸಿನೆಮಾದ ಸ್ಟಿಲ್ 
ಸಿನಿಮಾ ಸುದ್ದಿ

ದೀಪಾವಳಿಗೆ ಧಮಾಕಾಗೆ ಸಿದ್ಧವಾಗಿರುವ 'ಸಂತು ಸ್ಟ್ರೈಟ್ ಫಾರ್ವರ್ಡ್'

'ಸಂತು ಸ್ಟ್ರೈಟ್ ಫಾರ್ವರ್ಡ್' ದೀಪಾವಳಿ ಧಮಾಕಾಗೆ ಸಿದ್ಧವಾಗಿದೆ. ನಿರ್ದೇಶಕ ಮಹೇಶ್ ರಾವ್ ಮತ್ತು ನಟ ಯಶ್ ಜೋಡಿ ಆರು ತಿಂಗಳಲ್ಲಿ ಈ ಸಿನೆಮಾ ಮಾಡಿ ಮುಗಿಸಿರುವುದು ವಿಶೇಷ.

ಬೆಂಗಳೂರು: 'ಸಂತು ಸ್ಟ್ರೈಟ್ ಫಾರ್ವರ್ಡ್' ದೀಪಾವಳಿ ಧಮಾಕಾಗೆ ಸಿದ್ಧವಾಗಿದೆ. ನಿರ್ದೇಶಕ ಮಹೇಶ್ ರಾವ್ ಮತ್ತು ನಟ ಯಶ್ ಜೋಡಿ ಆರು ತಿಂಗಳಲ್ಲಿ ಈ ಸಿನೆಮಾ ಮಾಡಿ ಮುಗಿಸಿರುವುದು ವಿಶೇಷ. ಅವರು ಮೊದಲು ತಮಿಳು ಸಿನೆಮಾ 'ವಾಲು' ರಿಮೇಕ್ ಮಾಡಲು ನಿಶ್ಚಯಿಸಿದ್ದು ನಂತರ ಸ್ವಂತ ಸ್ಕ್ರಿಪ್ಟ್ ಸಂತುವಿನೊಂದಿಗೆ ಸಿನೆಮಾ ಮುಗಿಸಿದ್ದಾರೆ. 
"ನಾವು 110 ದಿನಗಳವರೆಗೆ ಚಿತ್ರೀಕರಣ ಮಾಡಿದೆವು ಮತ್ತು ಸರಿಯಾಗಿ ಯೋಜಿಸಿಕೊಂಡು ಚಿತ್ರೀಕರಣದ ಕೆಲಸಗಳನ್ನು ಬೇಗನೆ ಮಾಡಿ ಮುಗಿಸಿದೆವು. ಯಶ್ ಅವರ ಸ್ಟಾರ್ ಗಿರಿಯ ಬಗ್ಗೆ ಚಿಂತಿಸಿ 'ವಾಲು' ರಿಮೇಕ್ ಮಾಡುವುದಕ್ಕೆ ತಿಲಾಂಜಲಿ ನೀಡಿ ಸ್ವಂತ ಸ್ಕ್ರಿಪ್ಟ್ ಮಾಡಿದೆವು. ನಿರ್ಮಾಪಕರಿಗೆ ರಿಮೇಕ್ ನಲ್ಲಿ ಒಲವಿತ್ತಾದರೂ ಆ ಪಾತ್ರ ಯಶ್ ವರಿಗೆ ಹೊಂದುತ್ತಿರಲಿಲ್ಲ" ಎನ್ನುತ್ತಾರೆ ನಿರ್ದೇಶಕ ಮಹೇಶ್. 
"ನಾನು ಯಶ್ ಮತ್ತು ರಾಧಿಕಾ ಅವರನ್ನು ಬಹಳ ವರ್ಷಗಳಿಂದ ಬಲ್ಲೆ. ಆದುದರಿಂದ ಚಿತ್ರೀಕರಣ ಅನುಭವ ಅದ್ಭುತವಾಗಿತ್ತು. ಈ ಸಿನೆಮಾ ಕನ್ನಡ ಚಿತ್ರರಂಗದಲ್ಲಿ ತಾಜಾವಾಗಿದೆ ಎಂದು ನಂಬಿದ್ದೇನೆ" ಎನ್ನುತ್ತಾರೆ 'ಕೇಸ್ ನಂ 18/9', 'ಎಂದೆಂದಿಗೂ ನಿನಗಾಗಿ'. 'ಕ್ವಾಟ್ಲೆ ಸತೀಶ' ಚಿತ್ರಗಳ ನಿರ್ದೇಶಕ. 
ಆಂಡ್ರ್ಯು ಛಾಯಾಗ್ರಹಣ ಮಾಡಿದ್ದು ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಸಿನೆಮಾದಲ್ಲಿ ಸುಮಾರು 13 ವಿಲನ್ ಗಳು ಇದ್ದಾರಂತೆ. ಅಕ್ಟೋಬರ್ 28 ಕ್ಕೆ ಸಿನೆಮಾ ಬಿಡುಗಡೆಯಾಗಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT