ನಟಿ ಹೃದಯ 
ಸಿನಿಮಾ ಸುದ್ದಿ

ಹೃದಯಾಗೆ ನಟನೆಯ ಮರುಜೀವ ನೀಡಲಿರುವ 'ತ್ರಾತಕ'

ಸುಮಾರು ಆರು ವರ್ಷಗಳ ಹಿಂದೆ ಹೃದಯ 'ಒರಟ ಐ ಲವ್ ಯು' ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ನಂತರ ಸ್ವಯಂಪ್ರೇರಿತವಾಗಿ ನಟನೆಯಿಂದ ದೂರವುಳಿದಿದ್ದವರು.

ಬೆಂಗಳೂರು: ಸುಮಾರು ಆರು ವರ್ಷಗಳ ಹಿಂದೆ ಹೃದಯ 'ಒರಟ ಐ ಲವ್ ಯು' ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ನಂತರ ಸ್ವಯಂಪ್ರೇರಿತವಾಗಿ ನಟನೆಯಿಂದ ದೂರವುಳಿದಿದ್ದವರು. ಆ ಸಿನೆಮಾದ ನಿರ್ಮಾಪಕರು ಚಿತ್ರರಂಗಕ್ಕೆ ಅವರನ್ನು 'ಸೌಮ್ಯ' ಎಂದು ಪರಿಚಯಿಸಿದ್ದರು. ಈ ನಿರ್ದೇಶಕ ಶಿವ ಗಣೇಶ ಅವರ 'ತ್ರಾತಕ' ಸಿನೆಮಾದ ಮೂಲಕ ತಮ್ಮ ನಟನೆಯ ಮರುಪ್ರಯಾಣವನ್ನು ಪ್ರಾರಂಭಿಸಲು ನಟಿ ಸಿದ್ಧರಾಗಿದ್ದಾರೆ. ಇದು ತನಿಖಾ ಥ್ರಿಲ್ಲರ್ ಅಂತೆ!
ಸಿನೆಮಾರಂಗದಿಂದ ಕಾಣೆಯಾಗಿದ್ದೇಕೆ ಎಂದು ವಿವರಿಸುವ ಹೃದಯ "ನಾನು 'ಒರಟ ಐ ಲವ್ ಯು' ಮಾಡಿದಾಗ ಮೊದಲ ವರ್ಷದ ಪಿಯುಸಿ ವ್ಯಾಸಂಗ ಪ್ರಾರಂಭಿಸಿದ್ದೆ. ನಾನು ಮೊದಲು ವಿದ್ಯಾಭ್ಯಾಸ ಮುಗಿಸಿ ನಂತರ ನಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂಬುದು ನನ್ನ ಪೋಷಕರ ಬಯಕೆಯಾಗಿತ್ತು. ನಂತರ ಮೊದಲ ಮೂರು ವರ್ಷಗಳ ಕಾಲ ವಿದ್ಯಾಭ್ಯಾಸದಲ್ಲಿ ನಿರತಳಾದೆ. ಆಮೇಲೆ ನೃತ್ಯ ಮತ್ತು ಫಿಟ್ ನೆಸ್ ತರಬೇತಿಗಳಿಗೆ ಹೋದೆ. ಈ ಮಧ್ಯೆ ನನಗೆ ಹಲವು ಅವಕಾಶಗಳು ಹುಡುಕಿ ಬಂದವು. ಆದರೆ ನಾನು ಕೇಳಿದ ಸ್ಕ್ರಿಪ್ಟ್ ಗಳಲ್ಲೆಲ್ಲಾ ಆಪ್ತವಾದದ್ದು ಶಿವ ಗಣೇಶ್ ಅವರ ಚಿತ್ರ. ಅದಕ್ಕೆ ಅದನ್ನು ಆಯ್ಕೆ ಮಾಡಿಕೊಂಡೆ" ಎನ್ನುತ್ತಾರೆ. 
ಈ ಥ್ರಿಲ್ಲರ್ ನಲ್ಲಿ ಹೃದಯ ಸೈಕಿಯಾಟ್ರಿಸ್ಟ್ ಪಾತ್ರ ನಿರ್ವಹಿಸುತ್ತಿದ್ದಾರಂತೆ. ಈ ಹಿಂದೆ ಸುನಿಲ್ ಕುಮಾರ್ ದೇಸಾಯಿ ಸಿನೆಮಾದಲ್ಲಿ ನಟಿಸಿದ್ದ ರಾಹುಲ್ ಐನಾಪುರ್ ಕೂಡ ಮತ್ತೆ ನಟಿಸಲಿದ್ದಾರಂತೆ. ಅಜಿತ್ ಜಯರಾಜ್ ಕೂಡ ಮತ್ತೊಬ್ಬ ನಾಯಕ ನಟ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೇರಳಂನ ತ್ರಿಶೂರ್‌ನಲ್ಲಿ ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ: ತಮಿಳು ನಾಡಿನ ಎಂಟು ಮಂದಿ ಸಾವು, 7 ಎಂಜಿನಿಯರಿಂಗ್ ವಿದ್ಯಾರ್ಥಿಗಳು; Video

ಮತ್ತೊಂದು ಮಹಾಯುದ್ಧದ ಭೀತಿ: ಇರಾನ್‌ನ 'Pickaxe Mountain' ಧ್ವಂಸಕ್ಕೆ ಅಮೆರಿಕ ಸ್ಕೆಚ್, "ಶೀಘ್ರದಲ್ಲೇ ದಾಳಿ" ಎಂದ ಡೊನಾಲ್ಡ್ ಟ್ರಂಪ್..!

China ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಮೆರಿಕಕ್ಕೆ; ಸೆ.24ರಂದು ಶ್ವೇತಭವನದಲ್ಲಿ ಔತಣಕೂಟ, Iran ಸಂಘರ್ಷವನ್ನು ‘ಸಣ್ಣ ವಿಚಾರ’ ಎಂದ Trump

ಒಬ್ಬ ರಾಜಿನಾಮೆ ಕೊಟ್ಟರೇನು? ನಮ್ಮ ಸರ್ಕಾರದಲ್ಲಿ 100 ನಾಗೇಂದ್ರ ಇದ್ದಾರೆ; ಸಿಎಂ ಡಿಕೆ ಶಿವಕುಮಾರ್

Park Billiಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆಕ್ಷೇಪ: ಸ್ಪಷ್ಟನೆ ಕೋರಿ ಸರ್ಕಾರಕ್ಕೆ ವಾಪಸ್..!