ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ನಟ ಶ್ರೀಮುರಳಿ ಜೋಡಿ ಅಭಿನಯ ಮಫ್ತಿ ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಂಡಿದೆ.
ಫಲ್ಟ್ ಲುಕ್ ನಲ್ಲಿ ಶ್ರೀಮುರಳಿ ಗಂಭೀರವಾಗಿ ಕುಳಿತ್ತಿದ್ದು, ಶಿವರಾಜ್ ಕುಮಾರ್ ಅವರ ಗಂಭೀರ ಮುಖವದನರಾಗಿದ್ದಾರೆ. ಇಲ್ಲಿ ಶಿವಣ್ಣ ಯಾವ ಪಾತ್ರದಲ್ಲಿ ಮಿಂಚಿದ್ದಾರೆ ಎಂಬ ಮಾಹಿತಿಯನ್ನು ರಥಾವರ ಚಿತ್ರ ಖ್ಯಾತಿಯ ನಿರ್ದೇಶಕರಾದ ನರ್ತನ್ ಗುಪ್ತವಾಗಿ ಇಟ್ಟಿದ್ದಾರೆ.
ಜಯಣ್ಣ ಕಂಬೈನ್ಸ್ ನಿರ್ಮಾಣ ಸಂಸ್ಥೆ ನಿರ್ಮಾಣದಲ್ಲಿ ಚಿತ್ರ ತಯಾರಾಗುತ್ತಿದ್ದು ಚಿತ್ರಕ್ಕೆ ಜಯಣ್ಣ ಮತ್ತು ಬೋಗೇಂದ್ರ ಹಣ ಹೂಡುತ್ತಿದ್ದಾರೆ.