ಬೆಂಗಳೂರು: ಕನ್ನಡದ ನಟಿ, ನಿರ್ದೇಶಕಿ ಪ್ರಿಯಾ ಹಾಸನ್ ರಿಯಲ್ ಎಸ್ಟೇಟ್ ಉದ್ಯಮಿ ರಾಮು ಎಂಬುವರ ಜತೆ ಸಪ್ತಪದಿ ತುಳಿದಿದ್ದಾರೆ.
ಬೆಂಗಳೂರಿನ ಯಶವಂತಪುರದ ಗಾಯತ್ರಿ ದೇವಿ ಸನ್ನಿದಾನದಲ್ಲಿ ಆತ್ಮೀಯರ ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.
ಅರಮನೆ ಮೈದಾನದಲ್ಲಿ ಸೆಪ್ಟೆಂಬರ್ 13ರಂದು ಅರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಸ್ಯಾಂಡಲ್ವುಡ್ ಗಣ್ಯರು ಭಾಗವಹಿಸಲಿದ್ದಾರೆ.