ಬಿಗ್ ಬಾಸ್ ಪ್ರೋಮೋದಲ್ಲಿ ನಟ ಕಿಚ್ಚ ಸುದೀಪ್ 
ಸಿನಿಮಾ ಸುದ್ದಿ

ಮತ್ತೆ ಬರಲಿರುವ ಬಿಗ್ ಬಾಸ್!

ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನ ಕನ್ನಡ ಅವತರಣಿಕೆ ಈಗಾಗಲೇ ಕನ್ನಡ ಪ್ರೇಕ್ಷಕರಿಗೆ...

ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನ ಕನ್ನಡ ಅವತರಣಿಕೆ ಈಗಾಗಲೇ ಕನ್ನಡ ಪ್ರೇಕ್ಷಕರಿಗೆ ಇಷ್ಟವಾಗಿ ಮೂರು ಸೀಸನ್ ಗಳು ಪ್ರಸಾರಗೊಂಡಿವೆ. ಇದೀಗ ನಾಲ್ಕನೇ ಸೀಸನ್ ಆರಂಭವಾಗಲಿದೆ ಎಂಬ ಸುದ್ದಿ ಕಳೆದ ಒಂದು ವಾರದಿಂದ ಹರಿದಾಡುತ್ತಿದೆ.  ಈ ಬಾರಿ ಕೂಡ ಬಿಗ್ ಬಾಸ್ ಕಾರ್ಯಕ್ರಮ ಕಲರ್ಸ್ ಕನ್ನಡದಲ್ಲೇ ಪ್ರಸಾರವಾಗಲಿದೆಯಂತೆ. ಕಾರ್ಯಕ್ರಮವನ್ನು ಈ ಹಿಂದಿನಂತೆ ಕಿಚ್ಚ ಸುದೀಪ್ ಅವರೇ ನಿರ್ವಹಿಸುತ್ತಾರಂತೆ.
ಬಿಗ್ ಬಾಸ್ ಸೀಸನ್ -3 ನಡೆದ ಬಿಡದಿಯ ಇನೋವೇಟಿವ್ ಫಿಲ್ಮ್ ಸಿಟಿಯಲ್ಲೇ ಈ ಬಾರಿಯ ಸೀಸನ್ -4 ಗೂ ಕೂಡ ಬಿಗ್ ಬಾಸ್ ಮನೆ ನಿರ್ಮಾಣವಾಗಲಿದೆಯಂತೆ. ಅಲ್ಲಿ ಈಗಾಗಲೇ ಕೆಲಸ ಆರಂಭಗೊಂಡಿದೆ. ಇನ್ನು ಸೀಸನ್ 4 ನ ಪ್ರೋಮೋ ಕೂಡ ಶೂಟಿಂಗ್ ಆಗಿದೆ. ಅಕ್ಟೋಬರ್ ಕೊನೆಯ ವೇಳೆಗೆ ಕಾರ್ಯಕ್ರಮ ಆರಂಭವಾಗುವ ಸೂಚನೆಯಿದೆ ಎನ್ನುತ್ತವೆ ಮೂಲಗಳು. 
ಇಷ್ಟೆಲ್ಲಾ ಆದ ಬಳಿಕ ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಯಾರೆಲ್ಲಾ ಪ್ರವೇಶಿಸುತ್ತಾರೆ ಎಂಬ ಮಾತುಗಳು ಸಹಜವಾಗಿ ಪ್ರೇಕ್ಷಕರಿಗೆ ಇರುತ್ತದೆ. ಕಲರ್ಸ್ ಕನ್ನಡ ವಾಹಿನಿಯ ಈ ರಿಯಾಲಿಟಿ ಶೋ ಕಾರ್ಯಕ್ರಮ ನಡೆಸುವವರು ಒಂದಷ್ಟು ಸೆಲೆಬ್ರಿಟಿಗಳನ್ನು, ಪ್ರಮುಖ ವ್ಯಕ್ತಿಗಳನ್ನು ಸಂಪರ್ಕಿಸಿದ್ದಾರಂತೆ. ಒಂದಷ್ಟು ಜನರ ಹೆಸರುಗಳನ್ನು ಕಲೆಹಾಕಿ ಪಟ್ಟಿ ಎ ಮತ್ತು ಪಟ್ಟಿ ಬಿ ಎಂದು ಮಾಡಲಾಗಿದೆಯಂತೆ. 
ಸಂಭವನೀಯ ಸೆಲೆಬ್ರಿಟಿಗಳ ಪೈಕಿ ನಟರಾದ ನವೀನ್ ಕೃಷ್ಣ. ಲೂಸ್ ಮಾದ ಯೋಗಿ, ನಟಿಯರಾದ ಐಂದ್ರಿತಾ ರೇ, ಶುಭಾ ಪೂಂಜ, ಕಾರುಣ್ಯ ರಾಮ್ ಮೊದಲಾದವರ ಹೆಸರುಗಳು ಕೇಳಿಬರುತ್ತಿವೆ. ಮೊದಲು ಟಿವಿ 9 ಆಂಕರ್ ಆಗಿದ್ದ ಶೀತಲ್ ಶೆಟ್ಟಿ, ಕಿರಿಕ್ ಕೀರ್ತಿ, ಹಿರಿಯ ನಟಿ ವನಿತಾ ವಾಸು ಮೊದಲಾದವರಿಗೂ ಕೂಡ ವಾಹಿನಿ ಕಡೆಯಿಂದ ಕರೆ ಹೋಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಆದರೆ ಇವರ್ಯಾರೂ ಫೈನಲ್ ಅಲ್ಲ.
ಇನ್ನು ಹೆಸರಾಂತ ನಟಿಯರಾದ ರಚಿತಾ ರಾಮ್, ತುಪ್ಪದ ಹುಡುಗಿ ರಾಗಿಣಿ ಮೊದಲಾದವರ ಮೇಲೂ ಬಿಗ್ ಬಾಸ್ ಮನೆ ಕಣ್ಣಿಟ್ಟಿದೆಯಂತೆ. ಆದರೆ ಇವರು ಆ ಮನೆ ಪ್ರವೇಶಿಸಲು ಒಪ್ಪುವುದು ಅನುಮಾನ ಎನ್ನಲಾಗುತ್ತಿದೆ. 
ಬಿಗ್ ಬಾಸ್ ಮನೆಯೊಳಗೆ ಕಾಲಿಡುವ ಸೆಲೆಬ್ರಿಟಿಗಳ ಪಟ್ಟಿ ವಾಹಿನಿ ಕಡೆಯಿಂದ ಹೊರಬೀಳುವವರೆಗೆ ಊಹಾಪೋಹಗಳು ಹರಿದಾಡುತ್ತಿರುತ್ತವೆ. ಒಂದಂತೂ ಸತ್ಯ, ಒಂದಷ್ಟು ವಿವಾದ ಎಬ್ಬಿಸಿದವರನ್ನು, ಕರ್ನಾಟಕದಲ್ಲಿ ಹೆಚ್ಚು ಸುದ್ದಿಯಾದವರನ್ನು ವಾಹಿನಿ ಕರೆತರುವುದಂತೂ ದಿಟ. ಅಲ್ಲಿಯವರೆಗೆ ಕುತೂಹಲ ಹಾಗೇ ಇರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಕಡಿವಾಣ: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮನೆಗೆಲಸ ಮಾಡು, ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!