ಸಿನಿಮಾ ಸುದ್ದಿ

'ಗೋಧಿ ಬಣ್ಣ'ದ ನಂತರ ಈಗ ಚರಣ ಸಂಗೀತದಲ್ಲಿ 'ಪುಷ್ಪಕ ವಿಮಾನ'

Guruprasad Narayana
ಬೆಂಗಳೂರು: 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾದಲ್ಲಿ ಚೊಚ್ಚಲ ಬಾರಿಗೆ ಸಂಗೀತ ನೀಡಿ ರಸಿಕರ ಗಮನ ಸೆಳೆದ ಸಂಗೀತ ನಿರ್ದೇಶಕ ಚರಣ್ ರಾಜ್ ಈಗ ಅದೇ ಯಶಸ್ಸನ್ನು ರಮೇಶ್ ಅರವಿಂದ್ ಅವರ 100 ನೇ ಚಿತ್ರ 'ಪುಷ್ಪಕ ವಿಮಾನ'ದಲ್ಲಿ ಹೊಮ್ಮಿಸಲು ಪ್ರಯತ್ನಿಸುತ್ತಿದ್ದಾರೆ.
ಜೂಹಿ ಚಾವಲಾ ಕಾಣಿಸಿಕೊಂಡಿರುವ 'ಜಿಲ್ಕಾ ಜಿಲ್ಕಾ' ಹಾಡು ಇಂದು ರೇಡಿಯೋ ವಾಹಿನಿಯಲ್ಲಿ ಬಿಡುಗಡೆಯಾಗಲಿದ್ದು ಮಾತಿಗೆ ಸಿಕ್ಕ ಚರಣ್ 'ಗೋಧಿ ಬಣ್ಣ...' ಅಪ್ಪ ಮಗನ ಸಂಬಂಧ ಕುರಿತ ಚಿತ್ರ ಈಗ 'ಪುಷ್ಪಕ ವಿಮಾನ' ಅಪ್ಪ-ಮಗಳ ಸಂಬಂಧ ಕುರಿತದ್ದು, ಆದರೆ ಈ ಸಾಮಾನ್ಯ ಅಂಶ ನನ್ನ ಕೆಲಸವನ್ನೇನು ಸುಲಭಗೊಳಿಸುವುದಿಲ್ಲ ಎನ್ನುತ್ತಾರೆ. 
"ಸಿನೆಮಾ ಸಂಬಂಧದ ಬಗ್ಗೆ ಇರುವಾಗ, ಭಾವನೆಯನ್ನು ದಾಟಿಸುವುದಕ್ಕೆ ಸಂಗೀತ ಸಶಕ್ತ ಸಾಧನ. 'ಪುಷ್ಪಕ ವಿಮಾನದಲ್ಲಿ' ನನಗೆ ಒದಗಿದ ಸವಾಲೆಂದರೆ ನನ್ನ ಕೆಲಸ ಏಕತಾನತೆಯಿಂದ ಕೂಡಿರದಂತೆ ನೋಡಿಕೊಳ್ಳುವುದು" ಎನ್ನುವ ಚರಣ್ ರಮೇಶ್ ರವಿಂದ್ ಅವರ ನಟನೆಗೆ ತಕ್ಕಂತೆ ಸಂಗೀತ ನೀಡುವುದು ಕಷ್ಟದ ಕೆಲಸವಾಗಿತ್ತು" ಎನ್ನುತ್ತಾರೆ. 
"ಇದು ಅವರಿಗೆ 100 ನೇ ಸಿನೆಮಾ ಆದರೆ ನನ್ನನು ಎರಡನೆಯದ್ದು. ಅದ್ಭುತವಾದ ಪ್ಲಾಟ್ ಇರುವ ಚಿತ್ರಕ್ಕೆ ಒಳ್ಳೆಯ ಸಂಗೀತ ನೀಡಲು ಪ್ರಯತ್ನಿಸಿದ್ದೇನೆ" ಎನ್ನುತ್ತಾರೆ ಯುವ ನಿರ್ದೇಶಕ. 
ಪುಷ್ಪಕ ವಿಮಾನ ಸಿನೆಮಾದ ಹಾಡುಗಳು ಮತ್ತು ಹಿನ್ನಲೆ ಸಂಗೀತ ಅರೆ ಶಾಸ್ತ್ರೀಯ ಸಂಗೀತದಿಂದ ಸ್ಫುರ್ತಿ ಪಡೆದಿದೆ ಎನ್ನುವ ಚರಣ್ "ಕಾಪಿ, ಬೃಂದಾವನ ಸಾರಂಗ, ಸರಸ್ವತಿ, ಹಂಸಾನಂದಿ, ಹಿಂದೋಳ ರಾಗಗಳನ್ನು ಬಳಸಿದ್ದರು, ಅವು ಕೇವಲ ಶಾಸ್ತ್ರೀಯವಾಗಿರದಂತೆ ಇರಲು ನೋಡಿಕೊಂಡಿದ್ದೇನೆ" ಎನ್ನುತ್ತಾರೆ. 
ಪವನ್ ಒಡೆಯರ್, ಕೆ ಕಲ್ಯಾಣ್, ಜಯಂತ್ ಕಾಯ್ಕಿಣಿ, ಕಿರಣ್ ಕಾವೇರಪ್ಪ ಗೀತರಚನೆ ಮಾಡಿದ್ದಾರೆ. ಹಾಗೆಯೇ ರಮೇಶ್ ಅವರಿಗೆ ಗೌರವ ಸಮರ್ಪಿಸಲು ವಿಶೇಷ ಹಾಡೊಂದರ ಮೇಲು  ಚರಣ್ ಕೆಲಸ ಮಾಡುತ್ತಿದ್ದಾರಂತೆ. 
ಎಸ್ ರವೀಂದ್ರನಾಥ್ ನಿರ್ದೇಶನದ ಈ ಚಿತ್ರದಲ್ಲಿ ಬಾಲ ನಟಿ ಯುವಿನ ಪಾರ್ಥವಿ ಮತ್ತು ರಚಿತಾ ರಾಮ್ ಕೂಡ ನಟಿಸುತ್ತಿದ್ದಾರೆ. 
SCROLL FOR NEXT