ಭಾವನಾ ರಾವ್ 
ಸಿನಿಮಾ ಸುದ್ದಿ

'ಸತ್ಯಹರಿಶ್ಚಂದ್ರ' ದಲ್ಲಿ ಶರಣ್ ಗೆ ಭಾವನಾ ನಾಯಕಿ

ಗಾಳಿಪಟ ಚಿತ್ರದ ನಂತರ ಅಭಿನಯದಿಂದ ದೂರ ಸರಿದಿದ್ದ ನಟಿ ಭಾವನಾ ರಾವ್ ಮತ್ತೆ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ...

ಬೆಂಗಳೂರು: ಗಾಳಿಪಟ ಚಿತ್ರದ ನಂತರ ಅಭಿನಯದಿಂದ ದೂರ ಸರಿದಿದ್ದ ನಟಿ ಭಾವನಾ ರಾವ್ ಮತ್ತೆ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಸದ್ಯ ಭಾವನಾ ಲಿಸ್ಟ್ ನಲ್ಲಿ ಮೂರು ಸಿನಿಮಾಗಳಿವೆ. ಪ್ರೇಮ್ ಅವರ ಗಾಂಧಿಗಿರಿಯಲ್ಲಿ ರಾಗಿಣಿ ದ್ವಿವೇದಿ ಜೊತೆ ಅಭಿನಯಿಸುತ್ತಿದ್ದಾರೆ. ರೋಹಿತ್ ಪಡಕಿ ಅವರ ದಯವಿಟ್ಟು ಗಮನಿಸಿ ಚಿತ್ರದಲ್ಲಿ ರಘು ಮುಖರ್ಜಿಗೆ ನಾಯಕಿಯಾಗಿ ಭಾವನಾರಾವ್ ಅಭಿನಯಿಸುತ್ತಿದ್ದಾರೆ.

ದಯಾಳ್ ಪದ್ಮನಾಭನ್ ಅವರ ನಿರ್ದೇಶನದಲ್ಲಿ ಬರುತ್ತಿರುವ ಶರಣ್ ಅಭಿನಯದ ಸತ್ಯ ಹರಿಶ್ಚಂದ್ರ ಚಿತ್ರದಲ್ಲಿ ಭಾವನಾರಾವ್ ನಟಿಸುತ್ತಿದ್ದಾರೆ.

ಈ ಸಂಬಂಧ ಸಿಟಿ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಭಾವನಾರಾವ್ ನಾನು ಅಭಿನಯದಿಂದ ಬ್ರೇಕ್ ತೆಗೆದುಕೊಂಡಿಲ್ಲ, ಉತ್ತಮ ಪಾತ್ರಕ್ಕಾಗಿ ಕಾಯುತ್ತಿದ್ದೆ ಎಂದು ಹೇಳಿದ್ದಾರೆ.

ಗಾಂಧಿಗಿರಿ ಚಿತ್ರದ ಮೊದಲ ಹಂತದ ಚಿತ್ರೀಕರಣದಲ್ಲಿ ಪಾಲ್ಗೊಂಡು ಮುಗಿಸಿದ್ದೇನೆ. ರೋಹಿತ್ ಅವರ ದಯವಿಟ್ಟು ಗಮನಿಸಿ ಚಿತ್ರ, ಈ ತಿಂಗಳ ಅಂತ್ಯದಲ್ಲಿ ಶೂಟಿಂಗ್ ಮುಗಿಯುತ್ತೆ. ಹೀಗಾಗಿ ಸತ್ಯ ಹರಿಶ್ಚಂದ್ರ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಅಕ್ಟೋಬರ್ ಮೊದಲ ವಾರದಲ್ಲಿ ಸತ್ಯ ಹರಿಶ್ಚಂದ್ರ ಸಿನಿಮಾ ಶೂಟಿಂಗ್ ಆರಂಭವಾಗಲಿದ್ದು, ಅದಕ್ಕಾಗಿ ಕಾಯುತ್ತಿರುವುದಾಗಿ ಭಾವನಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT