ಬೆಂಗಳೂರು: ಯಶಸ್ವಿ ನಿರ್ದೇಶಿಕ-ನಟ ಜೋಡಿ ಯೋಗರಾಜ್ ಭಟ್ ಮತ್ತು ಗಣೇಶ್ ಮತ್ತೆ ಕನ್ನಡ ಸಿನೆ-ಪ್ರೇಕ್ಷಕರಿಗೆ ಮೋಡಿ ಮಾಡಲು ಒಂದಾಗಿದ್ದಾರೆ. ಈಗ ಗಾಂಧಿನಗರದ ಮೂಲಗಳನ್ನು ನಂಬುವುದಾದರೆ ಗಣೇಶ್ ಎದುರು ನಟಿಸುತ್ತಿರುವ ನಾಯಕನಟಿಯರು ಒಬ್ಬರಲ್ಲ, ಇಬ್ಬರಲ್ಲ ಬದಲಿಗೆ ನಾಲ್ಕು ಜನ!
ಈಗ ಆಯ್ಕೆ ಪ್ರಕ್ರಿಯೆ ಜಾರಿಯಲ್ಲಿದ್ದು, ಇಬ್ಬರು ಹೊಸ ಮತ್ತು ಇನ್ನಿಬ್ಬರು ಜನಪ್ರಿಯ ನಟಿಯರು ಸಿನೆಮಾದ ಭಾಗವಾಗಲಿದ್ದಾರೆ ಎಂದು ತಿಳಿದುಬಂದಿದೆ.
"ಸದ್ಯಕ್ಕೆ ನಾಯಕ ನಟಿಯರ ಆಯ್ಕೆ ಜಾರಿಯಲ್ಲಿದೆ ನಮ್ಮ ಮುಂದೆ ಹಲವಾರು ಆಯ್ಕೆಗಳಿವೆ. ದುನಿಯಾ ವಿಜಯ್ ಮತ್ತು ಪ್ರಿಯಾಮಣಿ ನಟನೆಯ ಯೋಗರಾಜ್ ನಿರ್ದೇಶನದ 'ದನ ಕಾಯೋನು' ಬಿಡುಗಡೆಯ ನಂತರ ಈ ಆಯ್ಕೆ ಅಂತಿಮವಾಗಲಿದೆ" ಎನ್ನುತ್ತವೆ ಮೂಲಗಳು.
ಈ ಸಿನೆಮಾ ಗೋಲ್ಡನ್ ಫಿಲಂಸ್ ಮತ್ತು ಯೋಗರಾಜ್ ಭಟ್ ಫಿಲಂಸ್ ಜಂಟಿಯಾಗಿ ನಿರ್ಮಿಸಲಿದ್ದು, ಅಕ್ಟೋಬರ್ ಅಂತ್ಯಕ್ಕೆ ಚಿತ್ರೀಕರಣ ಪ್ರಾರಂಭವಾಗಲಿದೆ. ಹಾಗೆಯೇ ಶೀರ್ಷಿಕೆಗೆ ಕೂಡ ಚಿತ್ರತಂಡ ಮಂಥನ ನಡೆಸಿದ್ದು, ವಿ ಹರಿಕೃಷ್ಣ ಸಂಗೀತ ನೀಡಲಿದ್ದಾರಂತೆ. ಸುಜ್ಞಾನ್ ಸಿನಿಮಾಟೋಗ್ರಾಫರ್ ಆಗಿ ಆಯ್ಕೆಯಾಗಿದ್ದಾರೆ, ಜಯಂತ್ ಕಾಯ್ಕಿಣಿ ಮತ್ತು ಯೋಗರಾಜ್ ಗೀತರಚನಾಕಾರರು.
ಯೋಗರಾಜ್ ಅವರ ಮತ್ತೊಂದು ಚಿತ್ರ 'ನನ್ನ ಹೆಸರು ಅನುರಾಗಿ' ಈಗ ಜನವರಿ 2017 ಕ್ಕೆ ಮುಂದೂಡಲಾಗಿದೆಯಂತೆ. ಇದರಲ್ಲಿ ಹೊಸ ನಟ ಆಕಾಶ್ ನಾಗಪಾಲ್ ಮತ್ತು ಮೂವರು ಹೀರೋಯಿನ್ ಗಳು ನಟಿಸಬೇಕಿತ್ತು.
ಈಮಧ್ಯೆ ರಮೇಶ್ ಅರವಿಂದ್ ನಿರ್ದೇಶನದ ಗಣೇಶ್ ಚಲನಚಿತ್ರ ಚಿತ್ರೀಕರಣದ ನಂತರದ ಕೆಲಸಗಳಲ್ಲಿ ನಿರತವಾಗಿದೆ. ರಾಕಲೈನ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಚಿತ್ರದಲ್ಲಿ ಶಾನ್ವಿ ಶ್ರೀವತ್ಸ ನಾಯಕನಟಿ. ಹಾಗೆಯೇ ಮುಂಗಾರು ಮಳೆ ನಟ ಸದ್ಯಕ್ಕೆ 'ಪಟಾಕಿ' ಚಿತ್ರೀಕರಣದಲ್ಲಿಯೂ ನಿರತರಾಗಿದ್ದಾರೆ. ಈ ಸಿನೆಮಾವನ್ನು ಮಂಜು ಸ್ವರಾಜ್ ನಿರ್ದೇಶಿಸುತ್ತಿದ್ದು, ಎಸ್ ವಿ ಬಾಬು ನಿರ್ಮಾಪಕ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics