ಸಿನಿಮಾ ಸುದ್ದಿ

'ದೊಡ್ಮನೆ' ಪುನೀತ್ ಗೆ ಬೆಳ್ಳಿ ಹಬ್ಬ; ಅಭಿಮಾನಿಗಳ ಕಾತರಕ್ಕೆ ನಾಳೆ ಉತ್ತರ

Guruprasad Narayana
ಬೆಂಗಳೂರು: ಸೂರಿ ನಿರ್ದೇಶನದ 'ದೊಡ್ಮನೆ ಹುಡುಗ' ಸಿನೆಮಾದ ಮೂಲಕ ಪುನೀತ್ ರಾಜಕುಮಾರ್ ತಮ್ಮ ನಟನೆಯ ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಿನೆಮಾ ಈಗಾಗಲೇ ಅಪಾರ ನಿರೀಕ್ಷೆಯನ್ನು ಹುಟ್ಟಿಸಿದ್ದು, ಎಲ್ಲ ಥಿಯೇಟರ್ ಗಳಲ್ಲಿ ಟಿಕೆಟ್ ಗಳು ಭರದಿಂದ ಮಾರಾಟವಾಗುತ್ತಿವೆ ಎನ್ನಲಾಗಿದೆ. 
1976 ರಲ್ಲಿ ಬಿಡುಗಡೆಯಾದ 'ಪ್ರೇಮದ ಕಾಣಿಕೆ' ಪುನೀತ್ ರಾಜಕುಮಾರ್ ಅವರ ಚೊಚ್ಚಲ ಚಿತ್ರ. ಅದರಲ್ಲಿ ಅವರು ಬಾಲನಟನಾಗಿ ಕಾಣಿಸಿಕೊಂಡಿದ್ದರು. 2002 ರ 'ಅಪ್ಪು' ಸಿನೆಮಾ ಪುನೀತ್ ರಾಜಕುಮಾರ್ ಅವರು ಹೀರೊ ಆಗಿ ಕಾಣಿಸಿಕೊಂಡ ಚೊಚ್ಚಲ ಚಿತ್ರ. ಇದನ್ನು ತೆಲುಗಿನ ಪೂರಿ ಜಗನ್ನಾಥ್ ನಿರ್ದೇಶಿಸಿದ್ದರು. ಚೊಚ್ಚಲ ಸಿನಿಮಾದಲ್ಲೇ ಪುನೀತ್ ಸೆಂಚ್ಯುರಿ ಭಾರಿಸಿದ್ದರು. ಅವರು ಕೊನೆಯ ಬಾರಿಗೆ ಕಾಣಿಸಿಕೊಂಡ ಸಿನೆಮಾ 2016 ರ 'ಚಕ್ರವ್ಯೂಹ'. 
"ಪುನೀತ್ ಅವರು ಬಹಳ ಸರಳ ಮನುಷ್ಯ. ಅವರ ಬಳಿ ತೆರಳಿ ಯಾವುದೇ ಸಾಮಾನ್ಯ ಮನುಷ್ಯ ಮಾತಾಡಬಹುದು. 'ಅಪ್ಪು' ವಿನಿಂದ 'ದೊಡ್ಮನೆ..' ವರೆಗೂ ಅವರು ಅತ್ಯದ್ಭುತ ಪಾತ್ರಗಳನ್ನು ಮಾಡಿದ್ದಾರೆ. 'ದೊಡ್ಮನೆ...' ಟ್ರೇಲರ್ ನಾನು ನೋಡಿದ್ದು ಇದು 'ಜಾಕಿ'ಯ ದಾಖಲೆಗಳನ್ನು ಮುರಿಯಲಿದೆ" ಎನ್ನುತ್ತಾರೆ ಅವರ ಅಭಿಮಾನಿ ಸೋಮಣ್ಣ. 
ರಾಧಿಕಾ ಪಂಡಿತ್ ನಾಯಕನಟಿಯಾಗಿ ಕಾಣಿಸಿಕೊಂಡಿದ್ದು, ಅಂಬರೀಷ್, ಸುಮಲತಾ, ಭಾರತಿ ವಿಷ್ಣುವರ್ಧನ್ ಹೀಗೆ ಹಿರಿಯ ನಂತರ ತಾರದಂಡೆ ಸಿನಿಮಾದಲ್ಲಿದೆ. 
SCROLL FOR NEXT