'ನೀರ್ ದೋಸೆ' ಸಿನೆಮಾದ ಸ್ಟಿಲ್ 
ಸಿನಿಮಾ ಸುದ್ದಿ

ವಿಶ್ವ ಪರ್ಯಟನೆಗೆ ಹೊರಟ 'ನೀರ್ ದೋಸೆ'

ಕರ್ನಾಟಕದಾದ್ಯಂತ ಅಚ್ಚರಿಯ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ನೀರ್ ದೋಸೆ' ಈಗ ವಿಶ್ವದಾದ್ಯಂತ ಬಿಡುಗಡೆಗೆ ಸಜ್ಜಾಗಿದೆ. ಬೆವಿನ್ ಎಕ್ಸ್ಪೋರ್ಟ್ಸ್ ಇಂಡಿಯಾ ಈ ಸಿನೆಮಾವನ್ನು ಹೊರದೇಶಗಳಲ್ಲಿ

ಬೆಂಗಳೂರು: ಕರ್ನಾಟಕದಾದ್ಯಂತ ಅಚ್ಚರಿಯ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ನೀರ್ ದೋಸೆ' ಈಗ ವಿಶ್ವದಾದ್ಯಂತ ಬಿಡುಗಡೆಗೆ ಸಜ್ಜಾಗಿದೆ. ಬೆವಿನ್ ಎಕ್ಸ್ಪೋರ್ಟ್ಸ್ ಇಂಡಿಯಾ ಈ ಸಿನೆಮಾವನ್ನು ಹೊರದೇಶಗಳಲ್ಲಿ ಬಿಡುಗಡೆ ಮಾಡುತ್ತಿದೆ. ಪ್ರಾದೇಶಿಕ ಕನ್ನಡ ಚಿತ್ರಗಳನ್ನು ವಿದೇಶಗಳಲ್ಲಿ ಬಿಡುಗಡೆ ಮಾಡುವ ಛಾತಿಯ ಜೋಯೆಲ್ ಸಮಂತ್ ಜೆ ಈ ಸುದ್ದಿಯನ್ನು ಧೃಢೀಕರಿಸಿದ್ದಾರೆ.    
ಆಸ್ಟ್ರೇಲಿಯಾ, ಸಿಂಗಾಪುರ, ಹಾಂಕಾಂಗ್, ನ್ಯೂಜಿಲ್ಯಾಂಡ್, ಕೆನಡಾ, ಅಮೆರಿಕಾ, ಯುರೋಪ್, ನೆದರ್ ಲ್ಯಾಂಡ್ಸ್, ಐರ್ ಲ್ಯಾಂಡ್, ಸ್ವೀಡನ್, ಫಿನ್ ಲ್ಯಾಂಡ್, ಸ್ವಿಟ್ಸರ್ ಲ್ಯಾಂಡ್, ಜಪಾನ್, ಮಲೇಷಿಯಾ ಮತ್ತು ಬ್ಯಾಂಗ್ಕಾಕ್ ನಲ್ಲಿ ಈ ಸಿನೆಮಾ ಬಿಡುಗಡೆಯಾಗಲಿದೆಯಂತೆ. 
ವಿಜಯ್ ಪ್ರಸಾದ್ ನಿರ್ದೇಶನದ 'ನೀರ್ ದೋಸೆ' ಬಿಡುಗಡೆಗೆ ಮುಂಚಿತವಾಗಿಯೇ ಹಲವಾರು ವಿವಾದಗಳಿಂದ ಭಾರಿ ಪ್ರಚಾರ ಪಡೆದು, ಬಿಡುಗಡೆಯ ನಂತರ ಅತ್ಯುತ್ತಮ ಗಳಿಕೆಯಿಂದ ಮುನ್ನುಗ್ಗಿ ಹೆಚ್ಚೆಚ್ಚು ಪ್ರದರ್ಶನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. 
ಈ ಸಿನೆಮಾದಲ್ಲಿ ಜಗ್ಗೇಶ್, ಹರಿಪ್ರಿಯಾ, ಸುಮನ್ ರಂಗನಾಥ್ ಮತ್ತು ದತ್ತಣ್ಣ ನಟಿಸಿದ್ದು, ಅನೂಪ್ ಸೀಳಿನ್ ಅವರ ಸಂಗೀತ ಇದೆ.         

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನಟ ದೇವರಾಜ್ 2ನೇ ಪುತ್ರ ನಟ ಪ್ರಣಮ್ ನಿಶ್ಚಿತಾರ್ಥ

Nepal Floods: ನೇಪಾಳದ ವಿನಾಶಕಾರಿ ಪ್ರವಾಹಕ್ಕೆ ಇದೇನಾ ಕಾರಣ? ಉಪಗ್ರಹ ಚಿತ್ರಗಳಲ್ಲಿ ಸ್ಫೋಟಕ ಸುಳಿವು!

'Chhatron Ki Goonj' ಕಾರ್ಯಕ್ರಮದ ವೇಳೆ Rahul Gandhi ಮಾಡಿದ 29 ತಪ್ಪುಗಳ ದಾಖಲೆ ನೀಡಿದ ಜೂಟ್ ಕಿ ಗೂಂಜ್ ವೆಬ್​ಸೈಟ್!

ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕಾರ್ಯಕ್ರಮಕ್ಕೆ ವಿರೋಧ: ಮೇಯರ್ ಮಮ್ದಾನಿ ವಿರುದ್ಧ ಅಮೆರಿಕದ ಖ್ಯಾತ ಗಾಯಕಿ ಕಿಡಿ!