ಸಿನಿಮಾ ಸುದ್ದಿ

ನಿಖಿಲ್ ಮುಂದಿನ ಸಿನೆಮಾಗೆ ಲತಾ ಹೆಗಡೆ ನಾಯಕಿ?

Guruprasad Narayana
ಬೆಂಗಳೂರು: ನಟ ನಿಖಿಲ್ ಕುಮಾರ್ ಅವರ ಮುಂದಿನ ಚಿತ್ರದ ಮುಹೂರ್ತ ಭಾನುವಾರ ನೆರವೇರಿದೆ. ಚೇತನ್ ಕುಮಾರ್ ನಿರ್ದೇಶನದ ಈ ಸಿನೆಮಾದ ತಂತ್ರಜ್ಞರನ್ನು ಅಂದು ಪರಿಚಯಿಸಲಾಯಿತು. ನಿಖಿಲ್ ಅವರ ತಂದೆ ಮಾಜಿ ಮುಖ್ಯಮಂತ್ರಿ-ನಿರ್ಮಾಪಕ ಎಚ್ ಡಿ ಕುಮಾರಸ್ವಾಮಿ ಕೂಡ ಪೂಜೆಯಲ್ಲಿ ಭಾಗವಹಿಸಿದ್ದು, ಈಗ ಸಿನೆಮಾದ ಹೀರೋಯಿನ್ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬಿವೆ. 
ಕನ್ನಡ ಹುಡುಗಿಯ ಶೋಧದಲ್ಲಿದ್ದ ತಂಡ ಆಡಿಷನ್ ನಡೆಸಿ ಹಲವರನ್ನು ಅಂತಿಮವಾಗಿ ಪಟ್ಟಿ ಮಾಡಿತ್ತು. ಮೂಲಗಳ ಪ್ರಕಾರ ಲತಾ ಹೆಗಡೆಯನ್ನು ಈ ಸಿನೆಮಾಗೆ ನಾಯಕನಟಿಯಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ. ಆಕ್ಲ್ಯಾಂಡ್ ನ ಈ ಹೊಸ ಪ್ರತಿಭೆಯನ್ನು ಇನ್ನು ಹೆಸರಿಡದ ಚಿತ್ರದಲ್ಲಿ ನಿರ್ದೇಶಕ ಮಹೇಶ್ ಬಾಬು ಪರಿಚಯಿಸಿದ್ದರು. ಆ ಪಾದಾರ್ಪಣೆ ಚಿತ್ರದಲ್ಲಿ ಅವರು ಚೇತನ್ ಎದುರು ನಟಿಸಿದ್ದಾರೆ. 
ಮಹೇಶ್ ಬಾಬು ನಿರ್ದೇಶನದ ಚಿತ್ರ ಬಹುತೇಕ ಸಂಪೂರ್ಣಗೊಂಡಿದ್ದು, ಒಂದು ಹಾಡಿನ ಚಿತ್ರೀಕರಣವಷ್ಟೇ ಬಾಕಿಯುಳಿದಿದೆ. ಈ ಸಿನೆಮಾದ ಬಿಡುಗಡೆಗೆ ಮುಂಚೆಯೇ ನಟಿ ಮತ್ತೆರಡು ಸಿನೆಮಾಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವುಗಳು 'ಗೆಳೆಯನ ಗೆಳತಿ' ಮತ್ತು  'ಉತ್ಸವ್'. ಎರಡೂ ಚಿತ್ರಗಳು ಚಿತ್ರೀಕರಣದ ಹಂತದಲ್ಲಿದ್ದು, 'ಉತ್ಸವ್'ನಲ್ಲಿ ದಿಗಂತ್ ನಾಯಕ ನಟ. "ಲತಾ ಜೊತೆಗೆ ಚಿತ್ರತಂಡ ಮಾತುಕತೆ ನಡೆಸಿದೆ ಮತ್ತು ರಾಯಧನದ ಬಗ್ಗೆ ಚರ್ಚೆ ನಡೆಯಿದೆ" ಎನ್ನುತ್ತವೆ ಮೂಲಗಳು. 
"ನಟಿ ಒಪ್ಪಿಕೊಂಡರೆ ಅವರು ಸಿನೆಮಾಗ ಭಾಗವಾಗಿರುತ್ತಾರೆ ಮತ್ತು ನಂತರ ಅಧಿಕೃತ ಘೋಷಣೆ ಮಾಡಲಾಗುತ್ತದೆ" ಎನ್ನತ್ತವೆ ಮೂಲಗಳು. ಮೇ ಮಧ್ಯಭಾಗದಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು, ವಿ ಹರಿಕೃಷ್ಣ ಅವರ ಸಂಗೀತ ಮತ್ತು ಶ್ರೀಶ ಕುಡುವಲ್ಲಿ ಅವರ ಛಾಯಾಗ್ರಹಣ ಇದೆ. ದೀಪು ಸಂಕಲಕಾರನಾಗಿ, ಹರ್ಷ ನೃತ್ಯ ನಿರ್ದೇಶಕರಾಗಿ ಮತ್ತು ರವಿ ಸಂತೇಹೈಕ್ಳು ಕಲಾ ನಿರ್ದೇಶಕರಾಗಿ ಕೆಲಸ ಮಾಡಲಿದ್ದಾರೆ. 
SCROLL FOR NEXT