ಬೆಂಗಳೂರು: ಈಗಾಗಲೇ ಹಲವು ಸಿನೆಮಾಗಳ ನಡುವೆ ಬ್ಯುಸಿಯಾಗಿರುವ ಜನಪ್ರಿಯ ನಟ ಶಿವರಾಜ್ ಕುಮಾರ್ ಅವರ ಮುಂದಿನ ಸಿನೆಮಾ ಘೋಷಣೆಯಾಗಿದೆ. ಈ ಸಿನೆಮಾ ನಿರ್ದೇಶಕನ ಸಂಬಂಧ ದಕ್ಷಿಣ ಭಾರತದ ಖ್ಯಾತ ನಟ ಕಮಲ ಹಾಸನ್ ಅವರೊಂದಿಗೆ ಬೆಸೆದುಕೊಂಡಿರುವುದರಿಂದ ಈ ಸಿನೆಮಾ ಕುತೂಹಲ ಕೆರಳಿಸಿದೆ.
ಎನ್ ಎಸ್ ರಾಜಕುಮಾರ್ ನಿರ್ಮಿಸುತ್ತಿರುವ ಈ ಸಿನೆಮಾದಲ್ಲಿ ಕಿಶೋರ್ ಜೊತೆಗೆ ಶಿವರಾಜ್ ಕುಮಾರ್ ನಟಿಸಲಿದ್ದಾರೆ. ಈ ಸಿನೆಮಾವನ್ನು ಅಶೋಕ್ ನಿರ್ದೇಶಿಸಲಿದ್ದಾರೆ. ಇವರು ಕಮಲ ಹಾಸನ್ ಅವರ ಹಲವು ಸಿನೆಮಾಗಳಿಗೆ ಸಹ ನಿರ್ದೇಶಕರಾಗಿ ದುಡಿದಿದ್ದವರು.
ಇದರ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಎನ್ ಎಸ್ ರಾಜಕುಮಾರ್ "'ಹ್ಯಾಟ್ರಿಕ್ ಹೊಡಿ ಮಗ'ದ ನಂತರ ಶಿವಣ್ಣನವರೊಂದಿಗೆ ಮತ್ತೊಂದು ಸಿನೆಮಾ ಮಾಡುತ್ತಿರುವುದಕ್ಕೆ ಸಂತಸವಾಗಿದೆ. ಈಗಿನ ಯೋಜನೆಯಂತೆ ಸಿನೆಮಾ ಸೆಪ್ಟೆಂಬರ್ ನಿಂದ ಚಿತ್ರೀಕರಣ ಪ್ರಾಂಭಿಸಲಿದೆ. ಆ ಹೊತ್ತಿಗೆ ಶಿವಣ್ಣ ತಮ್ಮ ಹಿಂದಿನ ಸಿನೆಮಾಗಳನ್ನು ಮುಗಿಸಿರುತ್ತಾರೆ" ಎನ್ನುತ್ತಾರೆ.
ಕನ್ನಡದಲ್ಲಿ ಚೊಚ್ಚಲ ಬಾರಿಗೆ ನಿರ್ದೇಶನಕ್ಕೆ ಇಳಿಸಿರುವ ಅಶೋಕ್ ಅವರ ಈ ಸಿನೆಮಾದಲ್ಲಿ ಶಿವಣ್ಣ ಶಾಲಾ ಬಾಲಕರಾಗಿ ಕೂಡ ಕಾಣಿಸಿಕೊಳ್ಳಲಿದ್ದಾರಂತೆ. ದೊಡ್ಡ ಬಜೆಟ್ ಚಿತ್ರದಲ್ಲಿ ಸಾಕಷ್ಟು ಗ್ರಾಫಿಕ್ಸ್ ಉಪಯೋಗವಾಗಲಿದೆಯಂತೆ. ಇದಕ್ಕಾಗಿ ವಿದೇಶಿ ತಂತ್ರಜ್ಞರು ಕೂಡ ಸಿನೆಮಾ ಸೆಟ್ ಸೇರಲಿದ್ದಾರೆ. ಶಿವರಾಜ್ ಕುಮಾರ್ ಸ್ಕ್ರಿಪ್ಟ್ ಇಷ್ಟಪಟ್ಟಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.