ಸಿನಿಮಾ ಸುದ್ದಿ

ಕಾರ್ತಿಕ್ ಸರಗೂರ್ ನಿರ್ದೇಶನದಲ್ಲಿ ನಾಯಕನಟನಾಗಿ ಅರವಿಂದ್ ಅಯ್ಯರ್!

Guruprasad Narayana
ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಸಿನೆಮಾದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಅರವಿಂದ್ ಅಯ್ಯರ್ ಈಗ ಕಾರ್ತಿಕ್ ಸರಗೂರ್ ನಿರ್ದೇಶನದ ಚಿತ್ರದಲ್ಲಿ ನಾಯಕನಟನಾಗಿ ಕಾಣಿಸಿಕೊಳ್ಳಲಿದ್ದಾರೆ. 
ಈ ಸಿನೆಮಾದ ಮುಖ್ಯ ವಸ್ತು ಆಹಾರ ಮತ್ತು ಅದರ ಜೊತೆಗಿನ ಜನರ ಸಂಪರ್ಕ ಆಗಿದ್ದು ಇದು ನಟನನ್ನು ಇನ್ನಷ್ಟು ಉತ್ಸುಕಗೊಳಿಸಿದೆ. ಈ ವಸ್ತು ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗಿ ಬಳಕೆಯಾಗಿಲ್ಲ ಎನ್ನುತ್ತಾರೆ ಅರವಿಂದ್. 
ಆಟೋಮೊಬೈಲ್ ಎಂಜಿನಿಯರಿಂಗ್ ನಲ್ಲಿ ಮಾಸ್ಟರ್ಸ್ ಡಿಗ್ರಿ ಪಡೆದು ಲಂಡನ್ ನಲ್ಲಿ ಐದು ವರ್ಷಗಳ ಕಾಲ ಉದ್ಯೋಗದಲ್ಲಿದ್ದ ಅರವಿಂದ್ ಕುಟುಂಬದ ತುರ್ತಿನ ಸಮಯದಲ್ಲಿ ಭಾರತಕ್ಕೆ ಹಿಂದಿರುಗಿದವರು. "ಇಲ್ಲೇ ನೆಲೆಸಲು ಯೋಜಿಸಿದ್ದೆ ಆದರೆ ಇಲ್ಲಿನ ಉದ್ಯೋಗ ಸಂಸ್ಕೃತಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ನಟನೆ ಯಾವಾಗಲೂ ನನ್ನ ಮನಸ್ಸಿನಲ್ಲಿ ಇತ್ತು. ಆದುದರಿಂದ ಅದರಲ್ಲೇ ತೊಡಗಿಸಿಕೊಳ್ಳಲು ನಿಶ್ಚಯಿಸಿದೆ. ಲಂಡನ್ನಿನ ವಿಥಿಯೇಟರ್ ನಲ್ಲಿ ನಟನೆಯ ಪಾಠಗಳನ್ನು ತೆಗೆದುಕೊಡಿದ್ದೇನೆ" ಎನ್ನುತ್ತಾರೆ ಅರವಿಂದ್. 
೨೦೧೨ರಲ್ಲಿ ನಟನೆಗೆ ಪಾದಾರ್ಪಣೆ ಮಾಡಿದ್ದ ಅರವಿಂದ್ ಅಯ್ಯರ್ ಈಗ ನಾಲ್ಕು ವರ್ಷಗಳ ನಂತರ ನಾಯಕನಟರಾಗಿಟ್ಟಿದ್ದಾರೆ. ಹೇಮಂತ್ ರಾವ್ ಅವರ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾದ ಆಡಿಷನ್ ನಲ್ಲಿ ಭಾಗಿಯಾಗಿದ್ದರು, ಆಯ್ಕೆಯಾಗಿರಲಿಲ್ಲ. "ಈಗ ನನ್ನ ಕಾಯುವಿಕೆ ಫಲ ನೀಡಿದೆ. ಸದ್ಯಕ್ಕೆ ಪುಷ್ಕರ್ ಫಿಲಂಸ್ ಮತ್ತು ಹೇಮಂತ್ ರಾವ್ ಸಹ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೇನೆ" ಎಂದಿದ್ದಾರೆ ಅರವಿಂದ್. 
SCROLL FOR NEXT