'ಮಾಸ್ತಿ ಗುಡಿ' ಸಿನೆಮಾದಲ್ಲಿ ದುನಿಯಾ ವಿಜಯ್
ಬೆಂಗಳೂರು: ನಾಗಶೇಖರ್ ನಿರ್ದೇಶನದ 'ಮಾಸ್ತಿ ಗುಡಿ' ಚಿತ್ರ ಹಲವು ಕಾರಣಗಳಿಗೆ ಕುತೂಹಲ ಮೂಡಿಸಿ, ನಂತರ ಚಿತ್ರೀಕರಣದ ವೇಳೆಯಲ್ಲಿ ನಡೆದ ದುರಂತಕ್ಕೆ ಹಿನ್ನಲೆಗೆ ಸರಿದಿತ್ತು. ಈಗ ವಿತರಕ ಜ್ಯಾಕ್ ಮಂಜು ಈ ಸಿನೆಮಾದ ವಿತರಣಾ ಹಕ್ಕುಗಳನ್ನು ಖರೀದಿಸಿರುವುದಾಗಿ ತಿಳಿದಿದೆ.
ಮಂಜು ಈ ಸಿನೆಮಾದ ಹಕ್ಕುಗಳನ್ನು ಭರ್ಜರಿ ೧೦.೫೦ ಕೋಟಿ ರೂಗಳಿಗೆ ಕೊಂಡಿದ್ದಾರೆ. ಈ ಸಿನೆಮಾ ನೋಡಿ ಇದರ ಮೌಲ್ಯವನ್ನು ಗೊತ್ತು ಮಾಡಿದೆ ಎನ್ನುತ್ತಾರೆ ವಿತರಕ. ದುನಿಯಾ ವಿಜಯ್ ನಟನೆಯ ಸಿನೆಮಾಗಳಲ್ಲೆಲ್ಲಾ ಅತಿ ಹೆಚ್ಚು ಮೌಲ್ಯಕ್ಕೆ ಮಾರಾಟವಾಗಿರುವ ಸಿನೆಮಾ ಇದು.
ನಾಗಶೇಖರ್ ನಿರ್ದೇಶನದ ಹಿಂದಿನ ಚಿತ್ರಗಳಾದ 'ಅರಮನೆ', 'ಸಂಜು ವೆಡ್ಸ್ ಗೀತಾ', 'ಮೈನಾ' ಇವೆಲ್ಲವೂ ಎಲ್ಲ ರೀತಿಯ ವೀಕ್ಷಕರನ್ನು ಸೆಳೆಯುವುದರಲ್ಲಿ ಯಶಸ್ವಿಯಾಗಿರುವುದರಿಂದ 'ಮಾಸ್ತಿ ಗುಡಿ' ಸಿನೆಮಾ ಕೂಡ ಒಳ್ಳೆಯ ಮೌಲ್ಯಕ್ಕೆ ಮಾರಾಟವಾಗಿದೆ ಎನ್ನಲಾಗಿದೆ.
ಹಾಗೆಯೇ 'ಮಾಸ್ತಿ ಗುಡಿ' ಹುಲಿ ಸಂರಕ್ಷಣೆಯ ಬಗ್ಗೆಯೂ ಚರ್ಚಿಸಲಿದೆಯಂತೆ. ಈ ಸಿನೆಮಾವನ್ನು ವೀಕ್ಷಿಸಿರುವ ಕೆಲವು ಇದನ್ನು ಮಲಯಾಳಂ ಸೂಪರ್ ಹಿಟ್ ಸಿನೆಮಾ 'ಪುಲಿ ಮುರಗನ್'ಗೆ ಕೂಡ ಹೋಲಿಸಿದ್ದಾರೆ.
ಸಾಧು ಕೋಕಿಲಾ ಸಂಗೀತ ನೀಡಿದ್ದು, ಸತ್ಯ ಹೆಗಡೆ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ. ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಈ ಸಿನೆಮಾದ ಚಿತ್ರೀಕರಣದ ವೇಳೆ ಉದಯೋನ್ಮಖ ಕಲಾವಿದರಾದ ಅನಿಲ್ ಮತ್ತು ಉದಯ್ ಅಸುನೀಗಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos