ರಜನಿಕಾಂತ್ 
ಸಿನಿಮಾ ಸುದ್ದಿ

ನಾನು ಉತ್ತಮ ನಟ ಎಂದು ಭಾರತೀರಾಜಾ ಯಾವತ್ತೂ ಒಪ್ಪುವುದಿಲ್ಲ: ರಜನಿಕಾಂತ್

ಹಿರಿಯ ನಿರ್ದೇಶಕ ಭಾರತೀರಾಜಾ ನನ್ನನ್ನು ಒಬ್ಬ ಉತ್ತಮ ನಟ ಎಂದು ಯಾವತ್ತೂ ಒಪ್ಪಿಕೊಂಡಿಲ್ಲ ಎಂದು ರಜನಿಕಾಂತ್ ಹೇಳಿದ್ದಾರೆ. ..

ಚೆನ್ನೈ: ಹಿರಿಯ ನಿರ್ದೇಶಕ ಭಾರತೀರಾಜಾ ನನ್ನನ್ನು ಒಬ್ಬ ಉತ್ತಮ ನಟ  ಎಂದು ಯಾವತ್ತೂ ಒಪ್ಪಿಕೊಂಡಿಲ್ಲ ಎಂದು ರಜನಿಕಾಂತ್ ಹೇಳಿದ್ದಾರೆ. 
ನಾನು ಭಾರತೀರಾಜಾ ಅವರನ್ನು ತುಂಬಾ ಇಷ್ಟ ಪಡುತ್ತೇನೆ, ಅವರಿಗೂ ಕೂಡ ನಾನೆಂದರೇ ಅಚ್ಚು ಮೆಚ್ಚು, ಅವರ ಹಿಂದಿನ ಸಂದರ್ಶನಗಳಲ್ಲಿ ಪತ್ರಕರ್ತರು ನನ್ನ ಬಗ್ಗೆ ಭಾರತೀರಾಜಾ ಅವರ ಅಭಿಪ್ರಾಯ ಕೇಳಿದಾಗ, ಅವರೊಬ್ಬ ಉತ್ತಮ ಮನುಷ್ಯ ಎಂದು ಹೇಳಿದ್ದಾರೆ. ನಿರ್ದೇಶಕ ಭಾರತೀರಾಜಾ ಅವರ ಮುಂದಿನ 16 ವಯದಿನಿಲೆ ಸಿನಿಮಾದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸುತ್ತಿದ್ದಾರೆ. 
ಭಾರತಾರಾಜಾ ಅವರ ಬಿಐಸಿಸಿ (ಭಾರತೀರಾಜಾ ಇಂಟರ್ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫಅ ಸಿನಿಮಾ) ಸಂಸ್ಥೆ ಉದ್ಘಾಟಿಸಿ ಮಾತನಾಡಿದ ರಜನಿಕಾಂತ್, ನಾನೊಬ್ಬ ಉತ್ತಮ ಕಲಾವಿದ ಎಂಬುದನ್ನು ಭಾರತೀರಾಜಾ ಒಪ್ಪಿಕೊಂಡಿಲ್ಲ, ನಾನು ಯಾವಾಗಲೂ ಇದನ್ನು ತಲೆಯಲ್ಲಿಟ್ಟುಕೊಂಡು, ಜನ ಹೇಗೆ ನನ್ನನ್ನು ನಟ ಎಂದು ಒಪ್ಪಿಕೊಳ್ಳುತ್ತಾರೆ ಎಂದು ಪ್ರಶ್ನಿಸಿಕೊಳ್ಳುತ್ತಿದ್ದೆ ಎಂದು ಹೇಳಿದ್ದಾರೆ.
40 ದಶಕಗಳ ಸುದೀರ್ಘ ಸಿನಿಮಾ ವೃತ್ತಿ ಜೀವನದಲ್ಲಿ ಭಾರತೀರಾಜಾ ಕೇವಲ ಎರಡು ಬಾರಿ ಮಾತ್ರ ನನ್ನ ಸಮಯ ಕೇಳಿದ್ದಾರೆ. ಮೊದಲಯನೆಯದು 16 ವಯದಿನಿಲೆ ಸಿನಿಮಾಗಾಗಿ, 2ನೇ ಯದು ಸಿನಿಮಾ ಸಂಸ್ಥೆ ಉದ್ಘಾಟನೆಗೆ ಬರುವಂತೆ ಆಹ್ವಾನಿಸಿದ್ದರು ಎಂದು ರಜನಿ ಹೇಳಿದ್ದಾರೆ.
ನಾನು ಇದೇ ಸಂಸ್ಥೆಯ ವಿದ್ಯಾರ್ಥಿ, ಜೊತೆಗೆ ನಾನು ನನ್ನ ಗುರು ದಿವಂಗತ ಕೆ.ಬಾಲಚಂದರ್ ಅವರಿಂದ ಬಹಳಷ್ಟು ಕಲಿತಿದ್ದೇನೆ ಎಂದು ರಜನಿಕಾಂತ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್