ನಟಿ ಪ್ರಿಯಾಂಕಾ ಉಪೇಂದ್ರ 
ಸಿನಿಮಾ ಸುದ್ದಿ

ಲೋಹಿತ್ ನಿರ್ದೇಶನದ ಎರಡು ಸಿನೆಮಾಗಳಲ್ಲಿ ಪ್ರಿಯಾಂಕಾ ಉಪೇಂದ್ರ ನಟನೆ

೨೦೧೭, ನಟಿ ಪ್ರಿಯಾಂಕಾ ಉಪೇಂದ್ರ ಅವರಿಗೆ ಬಹಳ ಕಾರ್ಯನಿರತವಾದ ವರ್ಷ. ಅವರು ಸದ್ಯಕ್ಕೆ ಯೋಗಿ ದೇವಗಂಗೆ ನಿರ್ದೇಶನದ ಇನ್ನು ಹೆಸರಿಡದ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

ಬೆಂಗಳೂರು: ೨೦೧೭, ನಟಿ ಪ್ರಿಯಾಂಕಾ ಉಪೇಂದ್ರ ಅವರಿಗೆ ಬಹಳ ಕಾರ್ಯನಿರತವಾದ ವರ್ಷ. ಅವರು ಸದ್ಯಕ್ಕೆ ಯೋಗಿ ದೇವಗಂಗೆ ನಿರ್ದೇಶನದ ಇನ್ನು ಹೆಸರಿಡದ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಸಿನೆಮಾದಲ್ಲಿ ಉಪೇಂದ್ರ ಅವರ ಸೋದರಳಿಯ ನಿರಂಜನ್ ಪಾದಾರ್ಪಣೆ ಮಾಡಲಿದ್ದಾರೆ ಮತ್ತು ಪ್ರಿಯಾಂಕಾ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 
ಇದರ ನಂತರ ನಟಿ, 'ಮಮ್ಮಿ ಸೇವ್ ಮಿ' ಸಿನೆಮಾದ ನಿರ್ದೇಶಕ ಲೋಹಿತ್ ಅವರೊಂದಿಗೆ ೨ ಸಿನೆಮಾಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. "ನನ್ನ ಮುಂದಿನ ಸಿನೆಮಾ ಲೋಹಿತ್ ಅವರದ್ದು. ಇದು ಸಾಮಾಜಿಕ ಕಥೆ. ಈ ವರ್ಷದ ಅಂತ್ಯಕ್ಕೆ ಅವರದ್ದೇ ನಿರ್ದೇಶನದಲ್ಲಿ 'ಮಮ್ಮಿ..' ಎರಡನೇ ಭಾಗ ಪ್ರಾರಂಭವಾಗಲಿದೆ" ಎಂದು ತಿಳಿಸುತ್ತಾರೆ ಪ್ರಿಯಾಂಕಾ. 
ಲೋಹಿತ್ ನಿರ್ದೇಶನದ 'ಮಮ್ಮಿ ಸೇವ್ ಮಿ' ಸಿನೆಮಾ ಮೂಲಕ ಪ್ರಿಯಾಂಕಾ ಚಿತ್ರರಂಗಕ್ಕೆ ಹಲವು ವರ್ಷಗಳ ನಂತರ ಹಿಂದಿರುಗಿದ್ದರು. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ಈ ಸಿನೆಮಾ ತೆಲುಗಿನಲ್ಲಿ 'ಚಿನ್ನಾರಿ'ಯಾಗಿಯೂ ಬಿಡುಗಡೆಯಾಗಿತ್ತು. 
ಇತ್ತ ಉಪೇಂದ್ರ ಅವರ ೫೦ನೆಯ ಚಿತ್ರಕ್ಕೆ ಅವರ ಹುಟ್ಟುಹಬ್ಬದಂದು ಚಾಲನೆ ಸಿಗಲಿದೆ. ಈ ಸಿನೆಮಾದ ನಿರ್ಮಾಣ ಕಾರ್ಯದಲ್ಲಿಯೂ ಪ್ರಿಯಾಂಕಾ ಬ್ಯುಸಿಯಾಗಿದ್ದಾರೆ. "ನಾವು ಉಪ್ಪಿ ಅವರ ಹುಟ್ಟುಹಬ್ಬದ ದಿನ ಅವರ ೫೦ ನೇ ಚಿತ್ರಕ್ಕೆ ಚಾಲನೆ ನೀಡಲು ಸಿದ್ಧರಾಗುತ್ತಿದ್ದೇವೆ. ಆ ನಿಟ್ಟಿನಲ್ಲಿ ಸಾಕಷ್ಟು ಕೆಲಸಗಳು ನಡೆಯುತ್ತಿವೆ" ಎನ್ನುತ್ತಾರೆ ಪ್ರಿಯಾಂಕಾ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

IPL 2026: MI vs RCB; ವಾಂಖೆಡೆ ಕ್ರೀಡಾಂಗಣದಲ್ಲಿ ಇತಿಹಾಸ ಬರೆದ ಬೆಂಗಳೂರು, ಅತ್ಯಧಿಕ ಮೊತ್ತ!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

SCROLL FOR NEXT