ಬೆಂಗಳೂರು: ತಮಿಳಿನ 'ವಿಐಪಿ' (ವೇಲೈಯಿಲ್ಲ ಪಟ್ಟಥಾರಿ) ಸಿನೆಮಾವನ್ನು ಕನ್ನಡಕ್ಕೆ ರಿಮೇಕ್ ಮಾಡುತ್ತಿರುವ ನಿರ್ದೇಶಕ ನಂದ ಕಿಶೋರ್ ಕನ್ನಡದ ಶೀರ್ಷಿಕೆಯ ಬಗ್ಗೆ ಸುದೀರ್ಘ ಚಿಂತನೆ ನಡೆಸಿದ್ದರು. ಮನೋರಂಜನ್ ನಾಯಕನಟನಾಗಿ ನಟಿಸುತ್ತಿರುವ ಈ ಸಿನೆಮಾದ ಶೀರ್ಷಿಕೆಯನ್ನು ಅದೇ ಅರ್ಥದಲ್ಲಿ ಉಳಿಸಿಕೊಳ್ಳಲು ನಿರ್ದೇಶಕ ಈಗ ನಿಶ್ಚಯಿಸಿದ್ದಾರೆ. ಈಗ ಕನ್ನಡ ಶೀರ್ಷಿಕೆ 'ವೃತ್ತಿ ಇಲ್ಲದ ಪದವೀಧರ'ನಾಗಿ ಅಂತಿಮವಾಗಿದೆ.
ಈ ಶೀರ್ಷಿಕೆ ಹೊಳೆದದ್ದು ಹೇಗೆ ಎಂಬ ಪ್ರಶ್ನೆಗೆ "ನಾವು ಹಲವಾರು ಶೀರ್ಷಿಕೆಗಳ ಬಗ್ಗೆ ಚಿಂತಿಸಿದೆವು. ಅದನ್ನು ನಾಲಾಯಕ್ ಎಂದು ಕರೆಯಲು ಕೂಡ ನಿಶ್ಚಯಿಸಿದ್ದೆವು. ಆದರೆ ಕೊನೆಗೆ ಮೂಲ ಶೀರ್ಷಿಕೆಯನ್ನು ಹೋಲುವಂತಹ 'ವೃತ್ತಿ ಇಲ್ಲದ ಪದವೀಧರ'ಕ್ಕೆ ಸೀಮಿತವಾದೆವು" ಎನ್ನುತ್ತಾರೆ ನಂದ ಕಿಶೋರ್.
ಮನೋರಂಜನ್ ಅವರಿಗೆ 'ವಿಐಪಿ' ಎರಡನೇ ಚಿತ್ರವಾಗಲಿದೆ. ಅವರ ಮೊದಲ ಚಿತ್ರ 'ಸಾಹೇಬ' ಶೀಘ್ರದಲ್ಲೇ ಬಿಡುಗಡೆಯಾಗಬೇಕಿದೆ. 'ವಿಐಪಿ' ಮೂಲಕ ಮಿಸ್ತಿ ಚಕ್ರವರ್ತಿ ಕನ್ನಡದಲ್ಲಿ ಪಾದಾರ್ಪಣೆ ಮಾಡಲಿದ್ದಾರೆ. ಅವರು ಸುಭಾಷ್ ಘಾಯ್ ನಿರ್ದೇಶನದ ಬಾಲಿವುಡ್ ಚಿತ್ರ 'ಕಾಂಚಿ' ಮೂಲಕ ವೃತ್ತಿಜೀವನ ಪ್ರಾರಂಭಿಸಿದ್ದರು.
ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರದಲ್ಲಿ ಸಾಯಿಕುಮಾರ್, ಸಿತಾರಾ, ಅವಿನಾಶ್, ಸಾಧುಕೋಕಿಲ, ಪ್ರಕಾಶ್ ಬೆಳವಾಡಿ ಮತ್ತು ತಾರಕ್ ಪೊನ್ನಪ್ಪ ನಟಿಸುತ್ತಿದ್ದಾರೆ. ವಿ ಹರಿಕೃಷ್ಣ ಸಂಗೀತ ನೀಡಿದ್ದು, ಸತ್ಯ ಹೆಗಡೆ ಸಿನೆಮ್ಯಾಟೋಗ್ರಾಫರ್. ಕೆ ಎಂ ಪ್ರಕಾಶ್ ಸಿನೆಮಾದ ಸಂಕಲನಕಾರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics