ಬಾಹುಬಲಿ೨ ಬಿಡುಗಡೆಗೆ ಮುಂಚೆಯೇ ಅಮೆರಿಕಾದಲ್ಲಿ ೩ ಮಿಲಿಯನ್ ಡಾಲರ್ ಮೊತ್ತದ ಟಿಕೆಟ್ ಮಾರಾಟ
ಎಸ್ ಎಸ್ ರಾಜಮೌಳಿ ನಿರ್ದೇಶನದ ಅದ್ದೂರಿ ಚಿತ್ರ "ಬಾಹುಬಲಿ೨: ಅಂತ್ಯ" ಬಿಡುಗಡೆಗೆ ಮುಂಚಿತವಾಗಿಯೇ ಬಾಕ್ಸ್ ಆಫಿಸ್ ನಲ್ಲಿ ಧೂಳಿಪಟ ಎಬ್ಬಿಸಿದೆ. ಟಿಕೆಟ್ ಮುಂಗಡ ಕಾಯ್ದಿರಿಸುವಿಕೆಯಲ್ಲಿಯೇ
ಚೆನ್ನೈ: ಎಸ್ ಎಸ್ ರಾಜಮೌಳಿ ನಿರ್ದೇಶನದ ಅದ್ದೂರಿ ಚಿತ್ರ "ಬಾಹುಬಲಿ೨: ಅಂತ್ಯ" ಬಿಡುಗಡೆಗೆ ಮುಂಚಿತವಾಗಿಯೇ ಬಾಕ್ಸ್ ಆಫಿಸ್ ನಲ್ಲಿ ಧೂಳಿಪಟ ಎಬ್ಬಿಸಿದೆ. ಟಿಕೆಟ್ ಮುಂಗಡ ಕಾಯ್ದಿರಿಸುವಿಕೆಯಲ್ಲಿಯೇ ಅಮೆರಿಕಾದಲ್ಲಿ ಈ ಸಿನೆಮಾ ೩ ಮಿಲಿಯನ್ ಡಾಲರ್ ಗಳಿಸಿರುವುದಾಗಿ ಗ್ರೇಟ್ ಇಂಡಿಯಾ ಫಿಲಂಸ್ ವಿತರಣಾ ಸಂಸ್ಥೆ ಹೇಳಿದೆ.
"ಬಿಡುಗಡೆಗೆ ಮುಂಚಿತವಾಗಿಯೇ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯಿಂದ ನಾವು ೩ ಮಿಲಿಯನ್ ಡಾಲರ್ ಗಿಂತಲೂ ಹೆಚ್ಚು ಗಳಿಸಿದ್ದೇವೆ. ಇದು ಯಾವುದೇ ಭಾರತೀಯ ಸಿನೆಮಾ ಬಿಡುಗಡೆಗೆ ಮುಂಚಿತವಾಗಿ ಇಷ್ಟು ದೊಡ್ಡ ಮಟ್ಟದ ಟಿಕೆಟ್ ಮಾರಾಟ ಮಾಡಿರುವುದು ಇದೆ ಮೊದಲು" ಎಂದು ಗ್ರೇಟ್ ಇಂಡಿಯಾ ಫಿಲಂಸ್ ಹೇಳಿಕೆಯಲ್ಲಿ ತಿಳಿಸಿದೆ.
ಅಮೆರಿಕಾದಲ್ಲಿಯೇ 'ಬಾಹುಬಲಿ೨' ೧೧೦೦ ತೆರೆಗಳಲ್ಲಿ ಬಿಡುಗಡೆ ಕಾಣುತ್ತಿದೆ.
ಪ್ರಭಾಸ್, ರಾಣಾ ದಗ್ಗುಬಾಟಿ ಮುಖ್ಯ ಪಾತ್ರದಲ್ಲಿರುವ ಈ ಸಿನೆಮಾ ವಿಶ್ವದಾದ್ಯಂತ ನಾಳೆ ಬಿಡುಗಡೆಯಾಗಲಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.