ಐಶ್ವರ್ಯಾ ರೈ, ದೀಪಿಕಾ ಪಡುಕೋಣೆ, ಸೋನಂ ಕಪೂರ್
ಮುಂಬೈ: ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಸೋನಮ್ ಕಪೂರ್, ಐಶ್ವರ್ಯಾ ರೈ ಬಚ್ಚನ್ ಮುಂದಿನ ತಿಂಗಳು ನಡೆಯಲಿರುವ 70 ನೇ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗವಹಿಸಲಿದ್ದಾರೆ.
ಐಶ್ವರ್ಯಾ ರೈ ಹಾಗೂ ಸೋನಂ ಕಪೂರ್ ಅನುಕ್ರಮವಾಗಿ 2002, 2011 ರಲ್ಲಿ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗವಹಿಸಿದ್ದರೆ, ದೀಪಿಕಾ ಪಡುಕೋಣೆ ಇದೇ ಮೊದಲ ಬಾರಿಗೆ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗವಹಿಸಲಿದ್ದಾರೆ. ಹಾಲಿವುಡ್ ನ ಸೆಲೆಬ್ರಿಟಿಗಳಾದ ಜುಲಿಯನ್ ಮೂರೆ ಮತ್ತು ಇವಾ ಲೋಂಗೋರಿಯಾ ಸಹ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗವಹಿಸಲಿದ್ದು, ಬ್ರಾಂಡ್ ಲೋರಿಯಲ್ ಪ್ಯಾರಿಸ್ ಕಲೆಕ್ಷನ್ ನಿಂದ ಇತ್ತೀಚಿನ ಟ್ರೆಂಡ್ ಗಳನ್ನು ಪ್ರದರ್ಶಿಸಲಿದ್ದಾರೆ.
ಐಶ್ವರ್ಯಾ ರೈ, ಸೋನಂ ಕಪೂರ್, ದೀಪಿಕಾ ಪಡುಕೋಣೆ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂಬುದನ್ನು ಘೋಷಿಸಲು ಸಂತಸವಾಗುತ್ತಿದೆ ಎಂದು ಲೋರಿಯಲ್ ಪ್ಯಾರಿಸ್ ನ ಜನರಲ್ ಮ್ಯಾನೇಜರ್ ರಾಗ್ಜೀತ್ ಗಾರ್ಗ್ ತಿಳಿಸಿದ್ದಾರೆ. ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ ಮೇ 17 ರಿಂದ 28 ರ ವರೆಗೆ ನಡೆಯಲಿದೆ.