ಸೂಪರ್ ಸ್ಟಾರ್ ರಜನಿಕಾಂತ್ 
ಸಿನಿಮಾ ಸುದ್ದಿ

ಕನ್ನಡಿಗನ ಚಿತ್ರಕ್ಕೆ ಮೆಚ್ಚುಗೆ: ರಾಜಮೌಳಿ 'ದೇವರ ಮಗು' ಎಂದ ರಜನಿಕಾಂತ್

ಮೂಲತಃ ಕನ್ನಡಿಗನೇ ಆಗಿದ್ದರೂ ಟಾಲಿವುಡ್ ನಲ್ಲಿ ಹೆಸರಾಂತ ನಿರ್ದೇಶನಾಗಿರುವ ಎಸ್ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ-2'ಚಿತ್ರಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ಮೆಚ್ಚುಗೆ...

ನವದೆಹಲಿ: ಮೂಲತಃ ಕನ್ನಡಿಗನೇ ಆಗಿದ್ದರೂ ಟಾಲಿವುಡ್ ನಲ್ಲಿ ಹೆಸರಾಂತ ನಿರ್ದೇಶನಾಗಿರುವ ಎಸ್ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ-2'ಚಿತ್ರಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
ದೇಶದಾದ್ಯಂತ ಭರ್ಜರಿ ಪ್ರದರ್ಶನ ನೀಡುತ್ತಿರುವ ಬಾಹುಬಲಿ-2 ದಿ ಕನ್ ಕ್ಲ್ಯೂಷನ್ ಚಿತ್ರಕ್ಕೆ ರಜನಿಕಾಂತ್ ಅವರು ಮಾರುಹೋಗಿದ್ದಾರೆ. ಚಿತ್ರ ವೀಕ್ಷಿಸಿದ ಬಳಿಕ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬಾಹುಬಲಿ-2 ಚಿತ್ರವನ್ನು ಕೊಂಡಾಡಿದ್ದಾರೆ. 
ಬಾಹುಬಲಿ-2 ಸಿನಿಮಾ ಭಾರತದ ಚಿತ್ರಲೋಕಕ್ಕೆ ಹೆಮ್ಮೆಯನ್ನು ತಂದುಕೊಟ್ಟಿದೆ. ನಿರ್ದೇಶಖ ಎಸ್ಎಸ್ ರಾಜಮೌಳಿ ದೇವರು ಕೊಟ್ಟ ಮಗುವಾಗಿದ್ದು, ರಾಜಮೌಳಿ ಮತ್ತು ಅವರ ತಂಡಕ್ಕೆ ಸಲ್ಯೂಟ್ ಎಂದು ಹೇಳಿದ್ದಾರೆ.
  ರಜನಿಕಾಂತ್ ಅವರ ಈ ಪ್ರತಿಕ್ರಿಯೆ ರಾಜಮೌಳಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ತಲೈವಾ...ದೇವರೆಂದು ಪರಿಗಣಿಸುವವರೇ ನಮ್ಮನ್ನು ಆಶೀರ್ವದಿಸಿದ್ದಾರೆ. ಇದಕ್ಕಿಂದ ದೊಡ್ಡದು ಬೇರಿಲ್ಲ ಎಂದು ನಮಸ್ಕರಿಸಿದ್ದಾರೆ.
ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ದಗ್ಗುಬಾಟಿ ರಾಣಾ ಕೂಡ ರಜನಿಕಾಂತ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel