ದಿಗಂತ್ 
ಸಿನಿಮಾ ಸುದ್ದಿ

ದಿಗಂತ್ ಮುಂದಿನ ಚಿತ್ರಕ್ಕೆ ನವ ನಿರ್ದೇಶಕ ಮಂಜುನಾಥ್ ನಿರ್ದೇಶನ

ಚೌಕ ಚಿತ್ರದ ಯಶಸ್ಸು ಮತ್ತು ಅದರಲ್ಲಿ ತಮ್ಮ ಪಾತ್ರಕ್ಕೆ ಸಿಕ್ಕಿದ ಪ್ರಶಂಸೆ ನಂತರ ನಟ ...

ಚೌಕ ಚಿತ್ರದ ಯಶಸ್ಸು ಮತ್ತು ಅದರಲ್ಲಿ ತಮ್ಮ  ಪಾತ್ರಕ್ಕೆ ಸಿಕ್ಕಿದ ಪ್ರಶಂಸೆ ನಂತರ ನಟ ದಿಗಂತ್ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಜಾಗೃತರಾಗಿದ್ದಾರೆ. ಇದೀಗ ದಿಗಂತ್ ಹೊಸ ನಿರ್ದೇಶಕ ಜೆ.ಮಂಜುನಾಥ್ ಅವರ ಚಿತ್ರದಲ್ಲಿ ನಟಿಸಲು ನಿರ್ಧರಿಸಿದ್ದಾರೆ.
ಇನ್ನೂ ಹೆಸರಿಡದ ಚಿತ್ರ ಸೆಪ್ಟೆಂಬರ್ 15ಕ್ಕೆ ಆರಂಭವಾಗಲಿದೆ. ಸಂಪೂರ್ಣ ಹೊಸಬರ ತಂಡವಾಗಿರುವ ಚಿತ್ರಕ್ಕೆ ರಾಜೇಶ್ ಕುಮಾರ್ ಗುಲೆಚ ಬಂಡವಾಳ ಹಾಕುತ್ತಿದ್ದಾರೆ.
ಚಿತ್ರದ ಕಥೆ ಕೇಳಿದಾಗ ಖುಷಿಯಾಯಿತು. ಇದರಲ್ಲಿ ಡ್ರಾಮಾ, ಮನರಂಜನೆ ಇದೆ. ಈ ಪಾತ್ರಕ್ಕೆ ನಾನು ಸುಲಭವಾಗಿ ಹೊಂದಿಕೆಯಾಗಬಹುದು. ಬೇರೆ ಚಿತ್ರ ನಿರ್ಮಾಪಕರ ಜೊತೆಗೆ ಮಂಜುನಾಥ್ ಅವರ ಕೆಲಸದ ಶೈಲಿಯನ್ನು ನೋಡಿದ್ದೇನೆ. ಈ ಚಿತ್ರಕ್ಕೆ ಅವರು ನಿರ್ದೇಶಕರಾಗಿ ನ್ಯಾಯ ಒದಗಿಸಬಹುದು ಎಂಬ ನಿರೀಕ್ಷೆಯಿದೆ ಎಂದು ದಿಗಂತ್ ಹೇಳಿದರು.
 ಇಂದು ಚಿತ್ರಗಳು ಶೂಟಿಂಗ್ ಆರಂಭವಾಗಿ ಅರ್ಧಕ್ಕೆ ನಿಂತುಹೋಗುವುದು ಸಾಮಾನ್ಯವಾಗಿದೆ. ಇದಕ್ಕೆ ನಟರು ಸಜ್ಜಾಗಿರಬೇಕು. ಉತ್ಸವ್ ಎಂಬ ಚಿತ್ರ ಆರಂಭವಾಗಿ ಅರ್ಧಕ್ಕೆ ನಿಂತ ಅನುಭವ ದಿಗಂತ್ ಅವರಿಗಿದೆ. 
 ಈ ಹೊಸ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿಯವರು ಸಂಗೀತ ನೀಡಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!