ಗಗನ್ ಕಾಂಜ್ ಮತ್ತು ಅರ್ಜಿತ್ ಲವಾಣಿಯಾ
ಮುಂಬಯಿ: ಖಾಸಗಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಪೌರಾಣಿಕ ಧಾರಾವಾಹಿ ಮಹಾಕಾಳಿಯ ಕಲಾವಿದರಾದ ಗಗನ್ ಕಾಂಗ್ ಮತ್ತು ಅರ್ಜಿತ್ ಲವಾಣಿಯ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಶನಿವಾರ ರಾತ್ರಿ ಶೂಟಿಂಗ್ ಮುಗಿಸಿ ಮನೆಗೆ ವಾಪಸಾಗುವ ವೇಳೆ ಸಂಭವಿಸಿದ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ. ಅಂಬರ್ ಗಾನ್ ನಿಂದ ಮುಂಬೈಗೆ ಹೊರಟ್ಟಿದ್ದ ಕಾರು ಕಂಟೈನರ್ ವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಕಲಾವಿದರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ,
ಗಗನ್ ಮತ್ತು ಅರ್ಜಿತ್ ಉತ್ತಮ ಗೆಳೆಯರಾಗಿದ್ದು, ಹನುಮಾನ್ ಧಾರಾವಾಹಿಯಲ್ಲಿ ಗಗನ್ ಹನುಮಂತನ ತಂದೆ ಕೇಸರಿ ಪಾತ್ರದಲ್ಲಿ ನಟಿಸಿದ್ದರು, ಮಹಾಕಾಳಿ ಧಾರಾವಾಹಿಯಲ್ಲಿ ಗಗನ್ ದೇವೇಂದ್ರ ಹಾಗೂ ಅರ್ಜಿತ್ ನಂದಿ ಪಾತ್ರದಲ್ಲಿ ನಟಿಸುತ್ತಿದ್ದರು.
ಕಳೆದ ಎರಡು ವಾರಗಳ ಹಿಂದಷ್ಟೇ ಧಾರಾವಾಹಿ ಆರಂಭವಾಗಿತ್ತು. ಇನ್ನೂ ಈ ಇಬ್ಬರು ಕಲಾವಿದರ ಸಾವಿನ ಬಗ್ಗೆ ಧಾರಾವಾಹಿ ತಂಡ ತೀವ್ರ ಆಘಾತ ವ್ಯಕ್ತ ಪಡಿಸಿದೆ.