ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

'ಅಯೋಗ್ಯ'ನಿಗೆ ರಚಿತಾ ರಾಮ್ ನಾಯಕಿ!

ಸದ್ಯ ಅಯೋಗ್ಯನಿಗೆ ನಾಯಕಿ ಯಾರು ಎಂಬ ಬಗ್ಗೆ ಹಲವು ಮಾತುಗಳು ಕೇಳಿ ಬಂದಿದ್ದವು. ಮೊದಲಿಗೆ ಐಂದ್ರಿತಾ ರೈ ಮತ್ತು ಕಾವ್ಯಾ ಗೌಡ ಹೆಸರುಗಳು ಕೇಳಿ ಬಂದಿದ್ದವು...

ರಚಿತಾ ರಾಮ್
Shilpa D
Updated On : 22 Aug 2017, 1:16 am
ಬೆಂಗಳೂರು: ಎಸ್ ಮಹೇಶ್ ಕುಮಾರ್ ನಿರ್ದೇಶನದ ಸತೀಶ್ ನಿನಾಸಂ ಅಭಿನಯದ ಅಯೋಗ್ಯ ಸಿನಿಮಾ ಆರಂಭದಿಂದಲೂ ಸುದ್ದಿ ಮಾಡುತ್ತಿದೆ. ಸಿನಿಮಾಗೆ ಕಿಚ್ಚ ಸುದೀಪ್ ಕ್ಲಾಪ್ ಮಾಡಿದ್ದ ವಿಷಯ ಬಹು ದೊಡ್ಡ ಸುದ್ದಿಯಾಗಿತ್ತು.
ಸದ್ಯ ಅಯೋಗ್ಯನಿಗೆ ನಾಯಕಿ ಯಾರು ಎಂಬ ಬಗ್ಗೆ ಹಲವು ಮಾತುಗಳು ಕೇಳಿ ಬಂದಿದ್ದವು. ಮೊದಲಿಗೆ ಐಂದ್ರಿತಾ ರೈ ಮತ್ತು ಕಾವ್ಯಾ ಗೌಡ ಹೆಸರುಗಳು ಕೇಳಿ ಬಂದಿದ್ದವು. ಆದರೆ ಸದ್ಯ ರಚಿತಾರಾಮ್ ಹೆಸರು ಕೇಳಿ ಬರುತ್ತಿದ್ದು, ಸಿನಿಮಾ ಗೆ ರಚಿತಾ ಸಹಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೇ ಅಧಿಕೃತವಾದ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
ರಚಿತಾ ರಾಮ್ ಒಂದೇ ರೀತಿಯ ಪಾತ್ರಗಳನ್ನು  ಅಭಿನಯ ಮಾಡುವುದಿಲ್ಲ ಎಂದು ಇತ್ತೀಚೆಗೆ ವರದಿಯಾಗಿತ್ತು. ಮಹೇಶ್ ಕುಮಾರ್ ನಿರ್ದೇಶನದಲ್ಲಿ ರಚಿತಾ ಅವರದ್ದು ಇದು ಮೊದಲ ಸಿನಿಮಾವಾಗಲಿದೆ. ಹೊಸ ನಿರ್ದೇಶಕರ ಜೊತೆ ಕೆಲಸ ಮಾಡಲು ರಚಿತಾ ಬಯಸಿದ್ದರು. ಕಥೆ ಕೇಳಿದ ಮೇಲೆ ಸಿನಿಮಾದಲ್ಲಿ ನಟಿಸಲು ರಚಿತಾ ಒಪ್ಪಿಕೊಂಡಿದ್ದಾರೆ. ಈ ಮೊದಲು ರಚಿತಾ ಈ ರೀತಿ ಪಾತ್ರದಲ್ಲಿ ನಟಿಸಿರಲಿಲ್ಲವಂತೆ.

Advertisement

Advertisement

ಸ್ಥಳೀಯ ಸನ್ನಿವೇಶಗಳಿಗೆ ಹೊಂದಿಕೆಯಾಗುವಂತ ನಟಿ ಅವಶ್ಯಕತೆ ಪಾತ್ರಕ್ಕಿತ್ತು. ಮಂಡ್ಯದ ಸಾಂಪ್ರಾದಾಯಿಕ ಹುಡುಗಿಯ ಪಾತ್ರಕ್ಕೆ ನನ್ನ ಮನಸ್ಸಿನಲ್ಲಿ ಮೂಡಿದ್ದು ರಚಿತಾ ರಾಮ್, ಹಾಗಾಗಿ ಮೊದಲ ಸಲ ಭೇಟಿ ಮಾಡಿದ ವೇಳೆ ನಾನು ಅವರಿಗೆ ಈ ವಿಷಯ ತಿಳಿಸಿದ್ದೆ ಎಂದು ಮಹೇಶ್ ಕುಮಾರ್ ಹೇಳಿದ್ದಾರೆ.
ರಚಿತಾ ರಾಮ್  ಮತ್ತು ಸತೀಶ್ ಮೊದಲ ಬಾರಿಗೆ ಒಟ್ಟಿಗೆ ಸಿನಿಮಾದಲ್ಲಿ  ನಟಿಸುತ್ತಿದ್ದಾರೆ. ಸೆಪ್ಟಂಬರ್ 10 ರಂದು ಸಿನಿಮಾ ಸೆಟ್ಟೇರಲಿದೆ. ಹಿರಿಯ ನಟಿ ಸರಿತಾ ಕೂಡ ಸಿನಿಮಾದಲ್ಲಿ ನಟಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments