ಚೆನ್ನೈ: ರಜನಿಕಾಂತ್ ಅಭಿನಯದ ಬಹುನಿರೀಕ್ಷೆಯ '2.0' ಚಿತ್ರದ ಮೇಕಿಂಗ್ ವಿಡಿಯೋವನ್ನು ನಿರ್ದೇಶಕ ಶಂಕರ್ ತಮ್ಮ ಅಧಿಕೃತ ಟ್ವಟರ್ ಖಾತೆಯಲ್ಲಿ ಭಿಡುಗಡೆ ಮಾಡಿದ್ದಾರೆ.
1 ನಿಮಿಷ 47 ಸೆಕೆಂಡುಗಳ ಈ ವೀಡಿಯೋ ರಜನಿಕಾಂತ್ ಅಭಿಮಾನಿಗಳು ಸೇರಿ ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.
2010 ರಲ್ಲಿ ತೆರೆಕಂಡ 'ಎಂದಿರನ್' ಚಿತ್ರದ ಮುಂದುವರಿದ ಭಾಗ ಇದಾಗಿದ್ದು ರಜನಿಕಾಂತ್, ಅಕ್ಷಯ್ ಕುಮಾರ್, ಆ್ಯಮ್ಮಿ ಜಾಕ್ಸನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಈ ಚಿತ್ರಕ್ಕೆ ಭಾರತದ ಖ್ಯಾತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ.
ಈ ಚಿತ್ರವು ಮುಂದಿನ ವರ್ಷ ಜನವರಿ 25 ರಂದು ಬಿಡುಗಡೆಯಾಗುವ ನಿರೀಕ್ಷೆಯಿದ್ದು ನಿರ್ಮಾಪಕರು ಈಗಾಗಲೆ ಅಮೇರಿಕಾದಲ್ಲಿ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ.