ಹೊಸಬರ ಜತೆ ಸಿನಿಮಾ ಮಾಡಲು ಯೋಗರಾಜ್ ಭಟ್ ಪ್ಲಾನ್!
ಸ್ಯಾಂಡಲ್ವುಡ್ ನ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ 2018ರಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಜತೆ ಸಿನಿಮಾ ನಿರ್ದೇಶನ ಮಾಡಲಿದ್ದು ಈ ನಡುವೆ ಸುಮ್ಮನೆ ಕೂರಲು...
ಸ್ಯಾಂಡಲ್ವುಡ್ ನ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ 2018ರಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಜತೆ ಸಿನಿಮಾ ನಿರ್ದೇಶನ ಮಾಡಲಿದ್ದು ಈ ನಡುವೆ ಸುಮ್ಮನೆ ಕೂರಲು ಮನಸ್ಸಾಗದ ಭಟ್ರು ಹೊಸ ಯೋಜನೆಗೆ ಕೈಹಾಕಿದ್ದಾರೆ.
ಹೊಸ ಯೋಜನೆಗೆ ಭಟ್ರು ನಾಳೆ ಸಿಂಪಲ್ ಆಗಿ ಮುಹೂರ್ತ ನೆರವೇರಿಸಲಿದ್ದು ಇದೇ ಡಿಸೆಂಬರ್ 18ರಿಂದ ಚಿತ್ರದ ಕೆಲಸಗಳು ಪ್ರಾರಂಭವಾಗಲಿದೆ. ಯೋಗರಾಜ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು ಇನ್ನು ಶೀರ್ಷಿಕೆ ಪಕ್ಕಾ ಆಗಿಲ್ಲ.
ಭಟ್ರ ಹೊಸ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸಲಿದ್ದು ಸುಘ್ನಾನ್ ಅವರ ಛಾಯಾಗ್ರಹಣವಿರಲಿದೆ. ಸುಘ್ನಾನ್ ಭಟ್ರು ಜೋಡಿಗೆ ಇದು ಮೂರನೇ ಚಿತ್ರ ಇದಕ್ಕೂ ಮುನ್ನ ದನ ಕಾಯೋನು ಮತ್ತು ಮುಗುಳು ನಗೆ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದರು.
ನವ ಪ್ರತಿಭೆಗಳೊಂದಿಗೆ ಚಿತ್ರ ಮಾಡಲು ಭಟ್ರು ರೆಡಿಯಾಗಿದ್ದು ಅದಕ್ಕಾಗಿ ಆಡಿಷನ್ ನಡೆಸಿದ್ದಾರೆ. ಒಂದು ರೀತಿಯಲ್ಲಿ ಈ ಚಿತ್ರ ಭಟ್ರ ಹಳೆಯ ಸ್ಟೈಲ್ ನೆನಪಾಗಲಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.