ಶ್ರೀಮುರಳಿ 
ಸಿನಿಮಾ ಸುದ್ದಿ

ಮಫ್ತಿ-2 ಗೆ ಶ್ರೀಮುರಳಿ ಒಲವು!

2017ರ ಅಂತ್ಯ ನಟ ಶ್ರೀಮುರಳಿಗೆ ಉತ್ತಮವಾಗಿದೆ ಎನಿಸುತ್ತದೆ...

2017ರ ಅಂತ್ಯ ನಟ ಶ್ರೀಮುರಳಿಗೆ ಉತ್ತಮವಾಗಿದೆ ಎನಿಸುತ್ತದೆ. ಮಫ್ತಿ ಸಿನಿಮಾಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಕಳೆದ ಶುಕ್ರವಾರ ತೆರೆಕಂಡ ಶಿವರಾಜ್ ಕುಮಾರ್ ಮತ್ತು ಶ್ರೀಮುರಳಿ ಅಭಿನಯದ ಮಫ್ತಿ ಚಿತ್ರ ನಿನ್ನೆಗೆ 15 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಕಂಡಿದೆ. ರಾಜ್ಯದ 250 ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದ್ದು ಸ್ಯಾಂಡಲ್ ವುಡ್ ನ ಹಿಂದಿನ ಚಿತ್ರಗಳ ಗಳಿಕೆಯ ದಾಖಲೆಗಳೆಲ್ಲವನ್ನೂ ಮುರಿಯುವ ಲಕ್ಷಣ ಕಾಣುತ್ತಿದೆ ಎಂದು ನಿರ್ಮಾಪಕ ಜಯಣ್ಣ ಹೇಳುತ್ತಾರೆ.
ಥಿಯೇಟರ್ ಗಳಿಗೆ ಭೇಟಿ ನೀಡಿ ಜನರ ಪ್ರತಿಕ್ರಿಯೆ ನೋಡುತ್ತಿರುವ ನಟ ಶ್ರೀಮುರಳಿ ಎಲ್ಲಾ ಕಡೆ ಹೌಸ್ ಫುಲ್ ಕಂಡು ಗೆದ್ದ ಸಂಭ್ರಮದಲ್ಲಿದ್ದಾರೆ. ಮಫ್ತಿಗೆ ಜನರಿಂದ ಸಿಕ್ಕ ಪ್ರತಿಕ್ರಿಯೆ ಕಂಡು ಅದರ ಮುಂದಿನ ಭಾಗ ಮಾಡುವ ಯೋಚನೆಯಲ್ಲಿ ಶ್ರೀಮುರಳಿ ಇದ್ದಾರೆ.
ಚಿತ್ರವನ್ನು ಸದ್ಯದಲ್ಲಿಯೇ  ಮಾಡುವ ಆಲೋಚನೆಯಿಲ್ಲ. ತಮ್ಮ ಹಿಂದಿನ ಬದ್ಧತೆಗಳನ್ನು ಮುಗಿಸಿದ ನಂತರ ಮಫ್ತಿಯ ಮುಂದುವರಿದ ಭಾಗವನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದ್ದಾರೆ. ಈ ಯುಗದ ಜನರು ಇಷ್ಟಪಡುವ ಚಿತ್ರ ಮಫ್ತಿಯಾಗಿದೆ. ಜನರ ನಿರೀಕ್ಷೆಗೆ ತಕ್ಕಂತೆ ಎರಡನೇ ಭಾಗವನ್ನು ಮಾಡುವ ಯೋಜನೆಯಿದೆ ಎಂದು ಹೇಳಿದರು.
ನರ್ತನ್ ನಿರ್ದೇಶನದ ಚಿತ್ರ ಮಫ್ತಿಯಲ್ಲಿ ವಸಿಷ್ಟ ಸಿಂಹ ಮತ್ತು ಶಾನ್ವಿ ಶ್ರೀವಾಸ್ತವ್ ಕೂಡ ಅಭಿನಯಿಸಿದ್ದಾರೆ. ರವಿ ಬಸ್ರೂರು ಅವರ ಸಂಗೀತ ಮತ್ತು ನವೀನ್ ಕುಮಾರ್ ಅವರ ಛಾಯಾಗ್ರಹಣ ಮಫ್ತಿ ಚಿತ್ರಕ್ಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

ವಿದೇಶಿ ಮಹಿಳೆಗೆ ಪತ್ರ ಬರೆದು ಅಂಬೇಡ್ಕರ್ ಸೋಲನ್ನು ನೆಹರು ಸಂಭ್ರಮಿಸಿದ್ದು ನಿಜವಲ್ಲವೇ? 'ಗೂಗಲ್ ಬೇಬಿ'ಯಂತೆ ವರ್ತಿಸಬೇಡಿ!

SCROLL FOR NEXT