ಸ್ಯಾಂಡಲ್ ವುಡ್ ಸ್ವೀಟ್ ಕಪಲ್ ಯಶ್-ರಾಧಿಕಾ ಜೋಡಿಗೆ ವಿವಾಹ ವಾರ್ಷಿಕೋತ್ಸವ ಸಂಭ್ರಮ
ಬೆಂಗಳೂರು: ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಇಂದು ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಕೆಜಿಎಫ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಯಶ್ ಈ ಸಂಭ್ರಮಕ್ಕಾಗಿ 3 ಹೊಸ ಕಾರುಗಳನ್ನು ಖರೀದಿಸಿ ರಾಧಿಕಾ ಹಾಗೂ ಅವರ ತಂದೆ, ತಾಯಿಗೆ ಉಡುಗೊರೆ ನೀಡಿದ್ದಾರೆ.
ರಾಧಿಕಾ ಮದುವೆ ವಾರ್ಷಿಕೋತ್ಸವದ ಸಂಭ್ರಮವನ್ನು ಅಭಿಮಾನಿಗಳ ಜೊತೆ ಹಂಚಿಕೊಡರು. ಮದುವೆ ತಯಾರಿ ಹಾಗೂ ಮದುವೆಯ ಎಕ್ಸ್ ಕ್ಲೂಸಿವ್ ಫೋಟೋ ಮತ್ತು ವಿಡಿಯೋಗಳನ್ನು ಫೇಸ್ ಬುಕ್ ನಲ್ಲಿ ಅಪ್ ಮಾಡಿದ್ದಾರೆ. ಇಂದು ವಿವಾಹದ ದಿನದ ವಿಶೇಷ ಚಿತ್ರವನ್ನು ಅಪ್ ಮಾಡಿದ ರಾಧಿಕಾ "ಮಿಸ್‌ನಿಂದ ಮಿಸಸ್ ಆದ ದಿನವಿದು, ಜೀವನದ ಅಮೂಲ್ಯ ಘಳಿಗೆ" ಎಂದು ಬರೆದುಕೊಂಡಿದ್ದಾರೆ.
ತೆರೆಯ ಮೇಲೆ ಸೂಪರ್ ಹಿಟ್ ಆಗಿದ್ದ ಜೋಡಿ ತೆರೆಯಾಚೆಗೂ ಸೂಪರ್ ಡೂಪರ್ ಹಿಟ್ ಆಗಿದ್ದು ಅಭಿಮಾನಿಗಳು ಇವರಿಬ್ಬರ ವಿವಾಹ ವಾರ್ಷಿಕೋತ್ಸವಕ್ಕೆ ಶುಭಾಶಯಗಳ ಸುರಿಮಳೆಗೆರೆಯುತ್ತಿದ್ದಾರೆ.