ನಿರ್ದೇಶಕ ಹರ್ಷ ಹಾಗೂ ಅಂಜನೀಪುತ್ರ ಚಿತ್ರ ತಂಡ 
ಸಿನಿಮಾ ಸುದ್ದಿ

ಕಮರ್ಷಿಯಲ್ ಚಿತ್ರಗಳಿಂದಲೇ ಚಿತ್ರೋದ್ಯಮ ಅಸ್ತಿತ್ವದಲ್ಲಿದೆ: ನಿರ್ದೇಶಕ ಹರ್ಷ

ಕಮರ್ಷಿಯಲ್ ಚಿತ್ರಗಳಿಂದಲೇ ಚಿತ್ರೋದ್ಯಮ ಅಸ್ತಿತ್ವದಲ್ಲಿದ್ದು, ನನ್ನನ್ನು ಯಾರಾದರೂ ಕಮರ್ಷಿಯಲ್ ಚಿತ್ರ ನಿರ್ದೇಶಕ ಎಂದರೆ ನನಗೇನೂ ಅನ್ನಿಸುವುದಿಲ್ಲ ಎಂದು ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಅಂಜನೀಪುತ್ರ ಚಿತ್ರದ ನಿರ್ದೇಶಕ ಹರ್ಷ ಹೇಳಿದ್ದಾರೆ.

ಬೆಂಗಳೂರು: ಕಮರ್ಷಿಯಲ್ ಚಿತ್ರಗಳಿಂದಲೇ ಚಿತ್ರೋದ್ಯಮ ಅಸ್ತಿತ್ವದಲ್ಲಿದ್ದು, ನನ್ನನ್ನು ಯಾರಾದರೂ ಕಮರ್ಷಿಯಲ್ ಚಿತ್ರ ನಿರ್ದೇಶಕ ಎಂದರೆ ನನಗೇನೂ ಅನ್ನಿಸುವುದಿಲ್ಲ ಎಂದು ಪುನೀತ್ ರಾಜ್ ಕುಮಾರ್ ಅಭಿನಯದ ಬಹು  ನಿರೀಕ್ಷಿತ ಚಿತ್ರ ಅಂಜನೀಪುತ್ರ ಚಿತ್ರದ ನಿರ್ದೇಶಕ ಹರ್ಷ ಹೇಳಿದ್ದಾರೆ.
ಪುನೀತ್ ರಾಜ್ ಕುಮಾರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ ಚಿತ್ರ 
ಅಂಜನೀಪುತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕ ಹರ್ಷ, ಜನ ನನ್ನನ್ನು ಕಮರ್ಷಿಯಲ್ ಚಿತ್ರ ನಿರ್ದೇಶಕ  ಎಂದರೆ ನನಗೇನೂ ಅನ್ನಿಸುವುದಿಲ್ಲ. ಇಂದು ಕಮರ್ಶಿಯಲ್ ಚಿತ್ರಗಳಿಂದಲೇ ಚಿತ್ರೋದ್ಯಮ ಅಸ್ತಿತ್ವದಲ್ಲಿದೆ. ನನಗೆ ಕಲಾ ಚಿತ್ರಗಳೆಂದರೆ ಇಷ್ಟ. ಆದರೆ ಇಂದು ಜನ ಕಲಾ ಚಿತ್ರಗಳಲ್ಲೂ ಕಮರ್ಷಿಯಲ್ ಅಂಶಗಳನ್ನು  ಇಷ್ಟಪಡುತ್ತಾರೆ. ಇದೇ ಕಾರಣಕ್ಕೆ ಇಂದು ಚಿತ್ರರಂಗದ ಬಹುತೇಕ ನಿರ್ದೇಶಕರು ಕಮರ್ಷಿಯಲ್ ಚಿತ್ರ ನಿರ್ದೇಶಕರಾಗಿದ್ದಾರೆ.
ಸಾಮಾನ್ಯವಾಗಿ ನಿರ್ದೇಶಕರು ಕೆಲಸ ಮಾಡುವಾಗ ಪ್ರೇಕ್ಷಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲಸ ಮಾಡುತ್ತಾರೆ. ನಾವು ಯಾರಿಗಾಗಿ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ, ನಮ್ಮ ಗುರಿ ಯಾರು ಎಂಬುದನ್ನು ಮನದಲ್ಲಿಟ್ಟುಕೊಂಡು ಕೆಲಸ  ಮಾಡಬೇಕಿರುತ್ತದೆ. ಚಿತ್ರದ ಯಾವ ಅಂಶ ಪ್ರೇಕ್ಷಕರನ್ನು ಸೆಳೆಯಬಹುದು. ಯಾವ ಅಂಶಕ್ಕೆ ಪ್ರೇಕ್ಷಕರು ಹೆಚ್ಚು ಗಮನ ನೀಡುತ್ತಾರೆ. ಇವೆಲ್ಲಾ ಪರಿಗಣನೆಗೆ ಬರುತ್ತದೆ ಎಂದು ಹರ್ಷ ಹೇಳಿದ್ದಾರೆ. ಇನ್ನು ನಟರ ಕುರಿತು ಮಾತನಾಡಿದ  ನಿರ್ದೇಶಕ ಹರ್ಷ ನಾವು ನಿರ್ದೇಶನ ಮಾಡುವ ನಟನ ಬಾಡಿ ಲ್ಯಾಂಗ್ವೇಜ್ ಕೂಡ ಮುಖ್ಯವಾಗುತ್ತದೆ ಎಂದು ಹೇಳಿದರು.
ಇನ್ನು ಅಂಜನೀಪುತ್ರ ಚಿತ್ರದ ಕುರಿತು ಮಾತನಾಡಿದ ಹರ್ಷ, ನಾನು ಅಂಜನೀಪುತ್ರ ಚಿತ್ರವನ್ನು ಓರ್ವ ನಿರ್ದೇಶಕನಾಗಿ ಚಿತ್ರ ನಿರ್ಮಾಣ ಮಾಡಿಲ್ಲ..ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಯಾಗಿ ಚಿತ್ರ ನಿರ್ದೇಶನ  ಮಾಡಿದ್ದೇನೆ. ಪ್ರತಿಯೊಬ್ಬ ನಿರ್ದೇಶಕನೂ ತನ್ನ ಚಿತ್ರದ ನಾಯಕನ ದೊಡ್ಡ ಅಭಿಮಾನಿಯಾಗಿರಬೇಕು. ಆಗ ಮಾತ್ರ ಉತ್ತಮ ಚಿತ್ರ ಹೊರಬರುತ್ತದೆ ಎಂದು ಹರ್ಷ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

SC/ST ಮೀಸಲಾತಿ ಹೆಚ್ಚಳ ರದ್ದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬಿಗ್ ಶಾಕ್, ಭಾರೀ ಹಿನ್ನಡೆ..!

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!

ಸ್ಥಳೀಯ ಸಂಸ್ಥೆ ಚುನಾವಣೆ: ಕಾಂಗ್ರೆಸ್ ಭದ್ರಕೋಟೆ ಮುರಿಯಲು BJP-JDS ರಣತಂತ್ರ; HDK ನೇತೃತ್ವದಲ್ಲಿ ಮಹತ್ವದ ಸಭೆ..!