ನಿರ್ದೇಶಕ ಎ.ಪಿ.ಅರ್ಜುನ್ ಅವರ ಕಿಸ್ ಚಿತ್ರದಲ್ಲಿ ವಿರಾಟ್ ಎಂಬ ಹೊಸ ನಾಯಕ ನಟನ ಆಗಮನ ಸ್ಯಾಂಡಲ್ ವುಡ್ ನಲ್ಲಿ ಆಗಿದೆ. ಈ ಚಿತ್ರದ ಮೂಲಕ ವಿರಾಟ್ ಕಿರುತೆರೆಯಿಂದ ಹಿರಿತೆರೆಗೆ ಬಡ್ತಿ ಪಡೆದಿದ್ದಾರೆ. ಶ್ರೀಲೀಲಾ ಕೂಡ ಸಿನಿಮಾಕ್ಕೆ ಈ ಚಿತ್ರದ ಮೂಲಕ ಎಂಟ್ರಿ ಪಡೆಯಲಿದ್ದಾರೆ.
ಚಿತ್ರದ ನಿರ್ದೇಶಕರು ಇತ್ತೀಚೆಗೆ ಕ್ಲೈಮ್ಯಾಕ್ಸ್ ಫೈಟಿಂಗ್ ದೃಶ್ಯವನ್ನು ಸ್ಟಂಟ್ ಮಾಸ್ಟರ್ ರವಿ ವರ್ಮ ಸಾರಥ್ಯದಲ್ಲಿ ಸಂಯೋಜನೆ ಮಾಡಲಾಯಿತು. ಚಿತ್ರದ ಸಂಭಾಷಣೆ ಭಾಗ ಪೂರ್ಣಗೊಂಡಿದ್ದು ಚಿತ್ರತಂಡ ಹಾಡಿನ ಭಾಗದ ಚಿತ್ರೀಕರಣಕ್ಕೆ ಸಜ್ಜಾಗಿದೆ. ಇದಕ್ಕಾಗಿ ಹೊರದೇಶಗಳಲ್ಲಿ ಚಿತ್ರತಂಡ ಉತ್ತಮ ಸ್ಥಳದ ಆಯ್ಕೆಗಾಗಿ ಜಾಗಗಳನ್ನು ಹುಡುಕುತ್ತಿದೆ.
ಈ ಮಧ್ಯೆ ಚಿತ್ರದ ಒಂದು ಆಸಕ್ತಿಕರ ಫೋಟೋ ಸಿಟಿ ಎಕ್ಸ್ ಪ್ರೆಸ್ ಗೆ ಲಭ್ಯವಾಗಿದ್ದು ಚಿತ್ರದ ನಾಯಕ ವಿರಾಟ್ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ರೀತಿಯಲ್ಲಿಯೇ ಭಂಗಿ ನೀಡಿದ ದೃಶ್ಯವಿದೆ. ವಿರಾಟ್ ಕೊಹ್ಲಿ ಯವರ ಚಿಸೆಲ್ ಫಿಟ್ ನೆಸ್ ಕೇಂದ್ರದಲ್ಲಿಯೇ ಚಿತ್ರದ ದೃಶ್ಯವನ್ನು ಸೆರೆಹಿಡಿಯಲಾಗಿದೆ.
ನಿರ್ದೇಶಕರು ಚಿತ್ರದಲ್ಲಿ ವಿರಾಟ್ ಅವರ ನೋಟವನ್ನು ಬಹಿರಂಗಪಡಿಸಿದರೂ ಕೂಡ ಆ ಭಂಗಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಲು ನಿರಾಕರಿಸಿದರು. ಅದನ್ನು ಅಚ್ಚರಿಯಾಗಿಡಲು ಅವರು ಬಯಸಿದ್ದಾರೆ. ಚಿತ್ರಕಥೆಯನ್ನು ಅರ್ಜುನ್ ಬರೆದಿದ್ದು, ಚಿತ್ರದಲ್ಲಿ ಬಹುತೇಕರು ಹೊಸಬರು ಇದ್ದಾರೆ. ರಾಷ್ಟ್ರಕೂಟ ಪಿಕ್ಚರ್ಸ್ ಅಡಿ ಚಿತ್ರ ನಿರ್ಮಿಸಲಾಗಿದ್ದು ವಿ.ರವಿಕುಮಾರ್ ಬಂಡವಾಳ ಹಾಕಿದ್ದಾರೆ. ಚಿತ್ರದಲ್ಲಿ ಅನಂತ್ ನಾಗ್ ಮತ್ತು ಸಾಧು ಕೋಕಿಲಾ ಪ್ರಮುಖ ಪಾತ್ರ ವಹಿಸಿದ್ದಾರೆ. ವಿ.ಹರಿಕೃಷ್ಣ ಅವರ ಸಂಗೀತ ಮತ್ತು ಗಿರೀಶ್ ಗೌಡ ಅವರ ಛಾಯಾಗ್ರಹಣವಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos