ರಾಜರಥದ ಸ್ಟಿಲ್ 
ಸಿನಿಮಾ ಸುದ್ದಿ

'ರಾಜರಥ' ಬೆಳಗಿಸಿದ ಪುನೀತ್ ರಾಜ್ ಕುಮಾರ್

ರಂಗಿತರಂಗ ನಂತರ ರಾಜರಥ ಚಿತ್ರ ನಿರ್ದೇಶಿಸುತ್ತಿರುವ ನಿರ್ದೇಶಕ ಅನೂಪ್ ಭಂಡಾರಿ ....

ರಂಗಿತರಂಗ ನಂತರ ರಾಜರಥ ಚಿತ್ರ ನಿರ್ದೇಶಿಸುತ್ತಿರುವ ನಿರ್ದೇಶಕ ಅನೂಪ್ ಭಂಡಾರಿ ಪುನೀತ್ ರಾಜ್ ಕುಮಾರ್ ಅವರನ್ನು ಕನ್ನಡಕ್ಕೆ ಮತ್ತು ತೆಲುಗಿನಲ್ಲಿ ರಾಜರಥಮ್ ಗೆ ರಾಣಾ ದಗ್ಗುಬಾಟಿ ಅವರನ್ನು ಕರೆಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ತಿಳಿದುಕೊಂಡಿದ್ದೆವು. ಆದರೆ ಈ ನಟರು ಯಾವ ಪಾತ್ರ ನಿರ್ವಹಿಸುತ್ತಾರೆ ಎಂದು ಇದುವರೆಗೆ ಗೊತ್ತಿರಲಿಲ್ಲ.
ಮೊನ್ನೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ನೋಡಿದ ಎಲ್ಲರಿಗೂ ಅಚ್ಚರಿಯುಂಟಾಗಿದೆ. ಪುನೀತ್ ಮತ್ತು ರಾಣಾ ಅವರು ಶೀರ್ಷಿಕೆ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಗೊತ್ತಾಗಿದೆ.
ತಮ್ಮ ಎಂದಿನ ನಟನಾ ಶೈಲಿ ಮತ್ತು ಧ್ವನಿಯಿಂದ ಪುನೀತ್ ಟ್ರೇಲರ್ ನಲ್ಲಿ ಮಿಂಚುತ್ತಾರೆ. ರಾಜರಥ ಎಂದರೆ ಬಸ್ಸಿನ ಮೂಲಕ ಕಥೆಯ ಸಂದೇಶ ಹೇಳಲಾಗುತ್ತದೆ. ಕಲಾವಿದರ ಮುಖಗಳನ್ನು ವೈವಿಧ್ಯಮಯ ಬಣ್ಣಗಳಲ್ಲಿ ಗುರುತಿಸಲಾಗಿದ್ದು ಬಸ್ಸಿನ ಅರ್ಧಭಾಗ ತುಂಬುತ್ತದೆ. ಕಲಾವಿದರದ್ದು ಬಸ್ಸಿನಲ್ಲಿ ಜಾಲಿ ರೈಡ್. 2018ರಲ್ಲಿ ಅನೂಪ್ ಭಂಡಾರಿಯವರ ರಾಜರಥ ಸಿನಿಮಾ ಬಹುನಿರೀಕ್ಷಿತ ಚಿತ್ರ.
ಜಾಲಿ ಹಿಟ್ಸ್ ಇದನ್ನು ನಿರ್ಮಿಸುತ್ತಿದ್ದು, ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿದೆ. ನಾಯಕ, ನಾಯಕಿ ಪಾತ್ರಗಳಲ್ಲಿ ನಿರೂಪ್ ಭಂಡಾರಿ ಮತ್ತು ಆವಂತಿಕಾ ಶೆಟ್ಟಿ ಇದ್ದಾರೆ. ರವಿಶಂಕರ್ ಅವರಿಗೆ ಕೂಡ ಮುಖ್ಯ ಪಾತ್ರವಿದೆ. ಅನೂಪ್ ಭಂಡಾರಿ ಸಂಗೀತ ಒದಗಿಸಿದ್ದು ಹಿನ್ನೆಲೆ ಸಂಗೀತ ಅಜನೀಶ್ ಲೋಕನಾಥ್ ಅವರದ್ದು. ಸಿನಿಮಾಕ್ಕೆ ವಿಲಿಯಮ್ ಡೇವಿಡ್ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT