ಬೆಂಗಳೂರು: ಸಿನಿಮಾ ರಂಗದಲ್ಲೂ ಸೂಕ್ತ ಅವಕಾಶವಿಲ್ಲದೇ ಕ್ಯಾಬ್ ಚಾಲಕರಾಗಿರುವ ಹಿರಿಯ ನಟ ಶಂಕರ್ ಅಶ್ವಥ್ ಅವರಿಗೆ ಬಿಗ್ ಬಾಸ್ ವಿನ್ನರ್ ಒಳ್ಳೆ ಹುಡ್ಗ ಪ್ರಥಮ್ ಸಿನಿಮಾ ಆಫರ್ ನೀಡಿದ್ದಾರೆ.
ನಿನ್ನೆಯಷ್ಟೇ ನಟ ಶಂಕರ್ ಅಶ್ವತ್ ಅವರು ಕ್ಯಾಬ್ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಈ ಸುದ್ದಿ ಬೆನ್ನಲ್ಲೇ ನಟ ಶಂಕರ್ ಅಪರ ಸ್ಥಿತಿಗೆ ಮರುಕ ವ್ಯಕ್ತಪಡಿಸಿದ್ದ ನಟ ಜಗ್ಗೇಶ್ ಅವರು ಒಂದು ಲಕ್ಷ ನೆರವಿನ ಘೋಷಣೆ ಮಾಡಿದ್ದರು. ಅಲ್ಲದೆ ಶಂಕರ್ ಅಶ್ವಥ್ ಅವರಿಗೆ ಕೆಲಸ ಕೂಡ ನೀಡುವ ಸಂಬಂಧ ಭರವಸೆ ನೀಡಿದ್ದರುಯ. ಈ ಬೆಳವಣಿಗೆ ಬೆನ್ನಲ್ಲೇ ನಟ ಪ್ರಥಮ್ ಶಂಕರ್ ಅಶ್ವಥ್ ಅವರಿಗೆ ಸಿನಿಮಾ ಆಫರ್ ವೊಂದನ್ನು ನೀಡಿದ್ದು, ತಮ್ಮ ಮುಂದಿನ ಚಿತ್ರದಲ್ಲಿ ಶಂಕರ್ ಅಶ್ವಥ್ ಅವರಿಗೆ ಪಾತ್ರವೊಂದನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಕೇವಲ ಘೋಷಣೆ ಮಾತ್ರವಲ್ಲದೇ ನಟ ಶಂಕರ್ ಅಶ್ವಥ್ ಅವರಿಗೆ ಮುಂಗಡ ಹಣವಾಗಿ ಬ್ಲಾಂಕ್ ಚೆಕ್ ಅನ್ನು ಕೂಡ ಪ್ರಥಮ್ ನೀಡಿದ್ದಾರೆ. ಆದರೆ ಈ ಚೆಕ್ ಅನ್ನು ನಟ ಶಂಕರ್ ಅಶ್ವತ್ ಅವರು ನಿರಾಕರಿಸಿದ್ದು, ತಮ್ಮ ಪಾತ್ರಕ್ಕೆ ಎಷ್ಟು ಸಂಭಾವನೆ ನೀಡಲಾಗುತ್ತದೆಯೋ ಅಷ್ಟು ಹಣ ನೀಡಿದರೆ ಸಾಕು ಎಂದು ಹೇಳಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ನಟ ಪ್ರಥಮ್ ತಮ್ಮ ಮುಂದಿನ ಚಿತ್ರ ಪ್ರಥಮ್ ಬಿಲ್ಡಪ್ ಗಾಗಿ ನಟ ಶಂಕರ್ ಅಶ್ವತ್ ಅವರ ಕಾಲ್ ಶೀಟ್ ಪಡೆದಿದ್ದು, ಒಟ್ಟು ಐದು ದಿನಗಳ ಚಿತ್ರೀಕರಣಕ್ಕಾಗಿ ಶಂಕರ್ ಅಶ್ವಥ್ ಅವರನ್ನು ಬುಕ್ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ವತಃ ಪ್ರಥಮ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
"ಅಶ್ವಥ್ ರವರು ಅದ್ಭುತ ಕಲಾವಿದರು.ನೆನ್ನೆ ವಿಷಯ ವಿಷಯ ಕೇಳಿ ಶಂಕರ್ ಅಶ್ವತ್ ರ ಬಗ್ಗೆ ಹೆಮ್ಮೆಯೇನೋ ಆಯಿತು.ಮನಸ್ಸು ಯಾಕೋ ತಡೆಯಲಿಲ್ಲ.ಮೈಸೂರಿಗೆ ಓಡಿದೆ.ದೊಡ್ಡ ನಟರು (ಅದ್ಭುತ ನಟರು) ಮನೆಗೆ ಹೋಗಿ ಕಂಡು ಮಾತಾಡಿ ಮುಂದಿನ ಸಿನಿಮಾ Pratham Buildup ಗೆ ಮುಂಗಡ ಹಣ ಕೊಟ್ಟು ಅವರ dates ಪಡೆದು ಬಂದೆ.ಕೆಲವು ಕೆಲಸ ಆತ್ಮತೃಪ್ತಿಗೆ ಮಾಡಬೇಕಾಗುತ್ತೆ.ಅವರ ಸ್ವಾಭಿಮಾನಕ್ಕೆ salute ಹೊಡೆಯುವುದರ ಜೊತೆಗೆ ಅಶ್ವತ್ ಸರ್ ಜೊತೆ ಕೆಲಸ ಮಾಡ್ಲಿಕ್ಕೆ ಆಗಲಿಲ್ಲ ಎಂಬ ಕೊರಗು ನೀಗಿಸಿಕೊಳ್ಳಲು ನನ್ನ ಸ್ವಾರ್ಥಕ್ಕೆ ಅವರನ್ನ ಆಯ್ಕೆ ಮಾಡಿದ್ದಂತೂ ಹೌದು.ನಿಮ್ಮ ಆಶೀರ್ವಾದ ಹಿರಿಯ ನಟರ ಕುಟುಂಬದ ಮೇಲೆ ಸದಾ ಇರಲಿ ಇನ್ನೊಂದು ಮಾತು. ನಾನು blank cheque ನೀಡಿದ್ದು ನಿಜ.ಆದರೆ ಅವರು ಸ್ವೀಕರಿಸಲಿಲ್ಲ. ನನ್ನ ಏಳು ದಿನದ shoot dates ಗೆ ಸಂಭಾವನೆ ಎಷ್ಟಿದ್ಯೋ ಅಷ್ಟೇ ಪಡೆಯುತ್ತೇನೆ ಎಂದರು" ಎಂದು ಪೋಸ್ಟ್ ಹಾಕಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos