ಹಾಥಿ ಮೇರೆ ಸಾಥಿ ಚಿತ್ರದ ಫಸ್ಟ್ ಲುಕ್ ಹಂಚಿಕೊಂಡ ರಾಣಾ ದಗ್ಗುಬಾಟಿ
ರಾಣ ದಗ್ಗುಬಾಟಿ ತಮ್ಮ ಮುಂದಿನ ಚಿತ್ರ ಹಾಥಿ ಮೇರೆ ಸಾಥಿ ಚಿತ್ರದ ಫಸ್ಟ್ ಲುಕ್ ನ್ನು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದ್ದಾರೆ.
ಮುಂಬೈ: ರಾಣ ದಗ್ಗುಬಾಟಿ ತಮ್ಮ ಮುಂದಿನ ಚಿತ್ರ ಹಾಥಿ ಮೇರೆ ಸಾಥಿ ಚಿತ್ರದ ಫಸ್ಟ್ ಲುಕ್ ನ್ನು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದ್ದಾರೆ.
ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿರುವ ರಾಣ ದಗ್ಗುಬಾಟಿ, ಬನ್ ದೇವ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ 1971 ರಲ್ಲಿ ರಾಜೇಶ್ ಖನ್ನಾ ನಟಿಸಿದ್ದ ಹಾಥಿ ಮೇರೆ ಸಾಥಿ ಚಿತ್ರದ ರೀಮೇಕ್ ಆಗಿದ್ದು, ಫಸ್ಟ್ ಲುಕ್ ನಲ್ಲಿ ರಾಣ ದಗ್ಗುಬಾಟಿ ಆನೆಯ ಸೊಂಡಿಲಿಗೆ ಒರಗಿ ನಿಂತಿರುವ ಫೋಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಹೊಸ ವರ್ಷಕ್ಕೆ ಅತ್ಯುತ್ತಮ ಕಥೆಯ ಮೂಲಕ ಮನರಂಜನೆ ದೊರೆಯಲಿದೆ, ಹಾಥಿ ಮೇರೆ ಸಾಥಿಯಿಂದ ಬನ್ ದೇವ್ ನ್ನು ಪರಿಚಯಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ರಾಣ ದಗ್ಗುಬಾಟಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಹಾಥಿ ಮೇರೆ ಸಾಥಿ ಚಿತ್ರ ಹಿಂದಿ, ತೆಲುಗು, ತಮಿಳು ಭಾಷೆಯಲ್ಲೂ ತೆರೆ ಕಾಣಲಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.