ಬೆಂಗಳೂರು: ಕನ್ನಡ ಚಿತ್ರೋದ್ಯಮದಲ್ಲಿ ಚಿಕ್ಕಣ್ಣ ಅತ್ಯಂತ ಬ್ಯುಸಿ ನಟರಲ್ಲಿ ಒಬ್ಬರು. ಅವರು ಸದ್ಯಕ್ಕೆ ಬಿಎಂಡಬ್ಲ್ಯೂ, ಬಿಲ್ ಗೇಟ್ಸ್ ಮತ್ತು ಡಬಲ್ ಎಂಜಿನ್ ಮೂರು ಸಿನೆಮಾಗಳ ಚಿತ್ರೀಕರಣದಲ್ಲಿ ಸಮಾನಾಂತರವಾಗಿ ಪಾಲ್ಗೊಂಡಿದ್ದಾರೆ. ಇದರಲ್ಲಿ ಕೊನೆಯ ಸಿನೆಮಾದ ಬಗ್ಗೆ ಅತಿ ಹೆಚ್ಚು ಉತ್ಸಾಹದಿಂದಿದ್ದಾರೆ ನಟ.
ಈ ಸಂತಸಕ್ಕೆ ಕಾರಣ ನಟಿ ಸುಮನ್ ರಂಗನಾಥನ್ ಎದುರು ನಟಿಸಲು ಅವಕಾಶ ಸಿಕ್ಕಿರುವುದು. ಸುಮನ್ ಅವರ ಅತಿ ದೊಡ್ಡ ಅಭಿಮಾನಿ ತಾನೆಂದು ತಿಳಿಸುವ ಚಿಕ್ಕಣ್ಣ "ಅವರ ನಟನಾ ಪ್ರತಿಭೆ ಅವರನ್ನು ಇತರ ಭಾಷೆಯಲ್ಲಿ ಕೂಡ ನಟಿಸಲು ಅವಕಾಶ ನೀಡಿದೆ. ಅವರು ಕ್ಯಾಮಾ ಎದುರು ನಿಂತಿರುವಾಗ ಅದನ್ನು ನೋಡಲು ನನಗೆ ಎಷ್ಟು ಖುಷಿಯಾಗುತ್ತದೆ ಎಂದು ತಿಳಿಸಲು ನನಗೆ ಪದಗಳೇ ಸಿಗುವುದಿಲ್ಲ. ಅವರ ನಟನ ಕೌಶಲಕ್ಕೆ ನಾನು ಅವಾಕ್ಕಾದೆ" ಎನ್ನುತ್ತಾರೆ.
'ಬಾಂಬೆ ಮಿಠ್ಠಾಯ್' ಸಿನೆಮಾದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ ಚಂದ್ರ ಮೋಹನ್ 'ಡಬಲ್ ಎಂಜಿನ್' ಸಿನೆಮಾ ನಿರ್ದೇಶಿಸುತ್ತಿದ್ದಾರೆ. ಇನ್ನು ಸುಮನ್ ರಂಗನಾಥನ್ ಮತ್ತು ಚಿಕ್ಕಣ್ಣ ಜೊತೆಗಿನ ಹಾಂಡೊದು ಮಾತ್ರ ಬಾಕಿ ಉಳಿದಿದ್ದು, ಇನ್ನೆರಡು ದಿನಗಳಲ್ಲಿ ಅದು ಸಂಪೂರ್ಣಗೊಳ್ಳಲಿದೆಯಂತೆ.
ಈಮಧ್ಯೆ ಚಿಕ್ಕಣ್ಣ 'ಚೌಕ' ಬಿಡುಗಡೆಯನ್ನು ಕೂಡ ಎದುರುನೋಡುತ್ತಿದ್ದಾರೆ. "ತರುಣ್ ಈ ಸಿನೆಮಾದಲ್ಲಿ ನನಗೆ ಹೊಸತನವನ್ನು ನೀಡಿದ್ದಾರೆ" ಎನ್ನುತ್ತಾರೆ ಹಾಸ್ಯನಟ. ಹರ್ಷ ನಿರ್ದೇಶಿಸುತ್ತಿರುವ ಪುನೀತ್ ರಾಜಕುಮಾರ್ ಅವರ ಹೊಸ ಸಿನೆಮಾ, ಎ ಪಿ ಅರ್ಜುನ್ ಅವರ 'ಕಿಸ್', ಮಫ್ತಿ, ಮಾಂಜಾ, ಕನ್ನಡಕ್ಕಾಗಿ ಒಂದು ಒತ್ತಿ... ಸಿನಿಮಾಗಳಲ್ಲೂ ನಾನು ನಟಿಸುತ್ತಿದ್ದೇನೆ ಎಂದು ಉದ್ದದ ಪಟ್ಟಿ ನೀಡುತ್ತಾರೆ ನಟ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos