ಪುನೀತ್ ರಾಜಕುಮಾರ್, ರಶ್ಮಿಕಾ ಮಂದಣ್ಣ
ಸ್ಯಾಂಡಲ್ವುಡ್ ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತಮ್ಮ ರಾಜಕುಮಾರ ಚಿತ್ರದ ಶೂಟಿಂಗ್ ಮುಗಿಸಿದ್ದು ಇದೀಗ ಮುಂದಿನ ಪ್ರಾಜೆಕ್ಟ್ ಅಂಜನಿಪುತ್ರದ ಚಿತ್ರದ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ.
ಅಂಜನಿಪುತ್ರದ ಚಿತ್ರೀಕರಣಕ್ಕೆ ನಿನ್ನೆ ಅದ್ಧೂರಿ ಚಾಲನೆ ಸಿಕ್ಕಿತು. ಕ್ರೇಜಿಸ್ಟಾರ್ ರವಿಚಂದ್ರನ್ ಚಿತ್ರಕ್ಕೆ ಕ್ಲಾಪ್ ಮಾಡಿದರು. ಇನ್ನು ಚಿತ್ರವನ್ನು ಎ.ಹರ್ಷ ನಿರ್ದೇಶಿಸುತ್ತಿದ್ದಾರೆ. ಆಂಜನೇಯ ಸ್ವಾಮೀಯ ಪರಮಭಕ್ತನಾಗಿರುವ ಹರ್ಷ ಈ ಹಿಂದಿನ ಚಿತ್ರಗಳಂತೆ ಈ ಚಿತ್ರಕ್ಕೂ ಆಂಜನೇಯನ ಹೆಸರನ್ನೇ ಇಟ್ಟಿದ್ದಾರೆ.
ಚಿತ್ರದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಭರ್ಜರಿ ಯಶಸ್ಸು ರಶ್ಮಿಕಾ ಅವರು ಎರಡನೇ ಚಿತ್ರದಲ್ಲಿ ಪುನೀತ್ ಜತೆ ನಟಿಸುವ ಅವಕಾಶ ತಂದುಕೊಟ್ಟಿದೆ.
ತಮಿಳಿನ ಸೂಪರ್ ಹಿಟ್ ಚಿತ್ರ ವಿಶಾಲ್ ಮತ್ತು ಶೃತಿ ಹಾಸನ್ ನಟಿಸಿದ್ದ ಪೂಜೈ ಚಿತ್ರದ ಕನ್ನಡ ಅವತರಣಿಗೆ ಅಂಜನಿಪುತ್ರ. ಇನ್ನು ಬಾಹುಬಲಿ ಚಿತ್ರದ ಶಿವಗಾಮಿ ರಮ್ಯಕೃಷ್ಣ ಪುನೀತ್ ರ ತಾಯಿಯಾಗಿ ಕಾಣಿಸಿಕೊಳ್ಳಲಿದ್ದಾರೆ.