ಬೆಂಗಳೂರು: ದ್ವಾರಕೀಶ್ ಚಿತ್ರ ನಿರ್ಮಾಣ ಸಂಸ್ಥೆಯ ೫೦ನೆಯ ಚಿತ್ರ ನಿರ್ದೇಶನದ ಯಶಸ್ಸಿನಲ್ಲಿ ತೇಲುತ್ತಿರುವ ನಿರ್ದೇಶಕ ತರುಣ್ ಸುಧೀರ್ ತೆಕ್ಕೆಗೆ ಮತ್ತೊಂದು ದೊಡ್ಡ ಚಿತ್ರ ಸಿಕ್ಕಿದೆ. ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ೫೦ ನೆಯ ಚಿತ್ರವನ್ನು ನಿರ್ದೇಶಿಸಲಿದ್ದಾರೆ.
ಒಂದೂವರೆ ತಿಂಗಳಿಂದಲೇ ಈ ಯೋಜನೆ ಮಾತುಕತೆಯಲ್ಲಿತ್ತು ಎಂದು ತಿಳಿಸುವ ತರುಣ್ "ಜನವರಿಯಲ್ಲಿ ದರ್ಶನ್ ಅವರ ೫೦ ನೆಯ ಚಿತ್ರವನ್ನು ನಿರ್ದೇಶಿಸಲು ಸಾಧ್ಯವೇ ಎಂದು ಕೇಳಿದ್ದರು. ನಾನು ಎರಡನೇ ಮಾತಿಲ್ಲದೆ ಒಪ್ಪಿಕೊಂಡೆ. ಅವರ ೫೦ನೆಯ ಚಿತ್ರ ಮತ್ತೊಂದು ಕಾರಣಕ್ಕೆ ನನಗೆ ವಿಶೇಷ ಚಿತ್ರ. ಈ ಚಿತ್ರದ ಲಾಭವನ್ನು ಅವರು ತಮ್ಮ ಮೈಸೂರಿನ ೪೦-೪೫ ಗೆಳೆಯರೊಂದಿಗೆ ಹಂಚಿಕೊಳ್ಳಲು ನಿರ್ಧರಿಸಿದ್ದಾರೆ ಮತ್ತು ಅದು ನಿರ್ಮಾಪಕ ಸಿದ್ಧಾಂತ್ ಅವರ ಈ ಸಿನೆಮಾದಿಂದ ಅವರಿಗೆ ದೊರೆಯಲಿರುವ ಪರಿಹಾರವು ಸೇರುತ್ತದೆ. ಅವರ ಗೆಳೆಯರ ಮಕ್ಕಳ ಭವಿಷ್ಯ ಸುಗಮವಾಗಿರಬೇಕು ಎಂದು ದರ್ಶನ್ ಆಶಿಸುತ್ತಾರೆ. ಅವರ ಹೃದಯವಂತಿಕೆ ಈ ಸಿನೆಮಾವನ್ನು ಒಪ್ಪಿಕೊಳ್ಳಲು ನನಗೆ ಸ್ಫೂರ್ತಿ ನೀಡಿತು" ಎನ್ನುತ್ತಾರೆ ತರುಣ್.
'ಚೌಕ' ಬಿಡುಗಡೆಗೆ ಮುಂಚಿತವಾಗಿಯೇ ದರ್ಶನ್ ತಮ್ಮ ೫೦ ನೇ ಸಿನೆಮಾ ನಿರ್ದೇಶನಕ್ಕೆ ಅವಕಾಶ ನೀಡಿದ್ದಾಗಿ ತಿಳಿಸುವ ತರುಣ್ "ನನ್ನ ಚೊಚ್ಚಲ ಸಿನೆಮಾದ ಫಲಿತಾಂಶ ತಿಳಿಯಲು ಅವರು ಕಾಯಲಿಲ್ಲ. ನಾವಿಬ್ಬರು ದೀರ್ಘ ಕಾಲದಿಂದ ಬಲ್ಲೆವಾದರೂ, 'ಚೌಕ'ದಲ್ಲಿನ ನನ್ನ ಕೆಲಸ ಅವರಿಗೆ ಹೆಚ್ಚು ಭರವಸೆ ನೀಡಿರುವ ಸಾಧ್ಯತೆ ಇದೆ" ಎನ್ನುತ್ತಾರೆ.
"ನಾನು 'ಮೆಜೆಸ್ಟಿಕ್' ಸಿನೆಮಾಗಳ ದಿನಗಳಿಂದಲೂ ದರ್ಶನ್ ಅವರನ್ನು ನೋಡುತ್ತಾ ಬಂದಿದ್ದೇನೆ ಮತ್ತು ಆಗಿಲಿಂದಲೂ ನಾವಿಬ್ಬರು ಜೊತೆಗಿದ್ದೇವೆ. ಅಲ್ಲದೆ ಕನ್ನಡ ಸಿನೆಮಾರಂಗದ ಖಳನಾಯಕರಾದ ತೂಗುದೀಪ ಶ್ರೀನಿವಾಸ್ ಮತ್ತು ಸುಧೀರ್ ಅವರ ಮಕ್ಕಳಾಗಿಯೂ ನಾವು ಚಿರಪರಿಚಿತ. ಈ ಅಂಶ ಕೂಡ ನಮ್ಮ ಆತ್ಮೀಯತೆಗೆ ಸಹಕರಿಸಿದೆ" ಎನ್ನುತ್ತಾರೆ ತರುಣ್.
ಈಮಧ್ಯೆ ದರ್ಶನ್ ತಮ್ಮ ೪೮ನೇ ಚಿತ್ರ 'ಚಕ್ರವರ್ತಿ' ಬಿಡುಗಡೆಗೆ ಸಿದ್ಧರಾಗುತ್ತಿದ್ದು, ಮಾರ್ಚ್ ನಿಂದ ತಮ್ಮ ೪೯ ನೇ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇದು ಪ್ರಕಾಶ್ ಜಯರಾಮ್ ನಿರ್ದೇಶನದ ಚಿತ್ರ. "ಒಂದು ತಿಂಗಳು ವಿಶ್ರಾಂತಿ ಪಡೆಯುವಂತೆ ದರ್ಶನ್ ಅವರೇ ಸೂಚಿಸಿದ್ದಾರೆ. ನಂತರ ಅವರ ೫೦ ನೆಯ ಚಿತ್ರದ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡಲಿದ್ದೇನೆ. ಜುಲೈನಿಂದ ಚಿತ್ರೀಕರಣ ಪ್ರಾರಂಭ ಸಾಧ್ಯತೆ ಇದೆ" ಎನ್ನುತ್ತಾರೆ ತರುಣ್.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos