ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ 'ಬಾಹುಬಲಿ: ಮುಕ್ತಾಯ' ಸಿನೆಮಾದ ಭಾಗವಾಗಿಲ್ಲ ಎಂದು ಚಿತ್ರತಂಡ ಸ್ಪಷ್ಟೀಕರಿಸಿದೆ.
ಈ ಹಿಂದೆ ಹಬ್ಬಿದ ವದಂತಿಗಳ ಪ್ರಕಾರ ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ: ಮುಕ್ತಾಯ' ಸಿನೆಮಾದಲ್ಲಿ ಅತಿಥಿ ಪಾತ್ರದಲ್ಲಿ ಶಾರುಖ್ ಖಾನ್ ನಟಿಸಿದ್ದಾರೆ ಎಂದು ಶಂಕಿಸಲಾಗಿತ್ತು.
"ನಮ್ಮ ಸಿನೆಮಾದಲ್ಲಿ ಎಸ್ ಆರ್ ಕೆ ಅವರನ್ನು ತೊಡಗಿಸಿಕೊಳ್ಳಲು ಬಹಳ ಆಸಕ್ತಿಯಿದೆ! ಯಾರಿಗೆ ಇರುವುದಿಲ್ಲ? ಆದರೆ ದುರದೃಷ್ಟವಶಾತ್ ಇದು ವದಂತಿ! ಇದು ಸತ್ಯಕ್ಕೆ ದೂರ! 'ಬಾಹುಬಲಿ ೨'" ಎಂದು ಸಿನೆಮಾದ ಅಧಿಕೃತ ಟ್ವಿಟ್ಟರ್ ಪುಟದಲ್ಲಿ ಮಂಗಳವಾರ ಘೋಷಿಸಿದ್ದಾರೆ.
'ಬಾಹುಬಲಿ: ಮುಕ್ತಾಯ', 'ಬಾಹುಬಲಿ: ಆರಂಭ'ದ ಮುಂದುವರೆದ ಭಾಗವಾಗಿದ್ದು ಇದರಲ್ಲಿ ಪ್ರಭಾಸ್, ರಾಣಾ ದಗ್ಗುಬಾಟಿ, ಸತ್ಯರಾಜ್, ತಮನ್ನಾ ಭಟಿಯಾ ಮತ್ತು ರಮ್ಯ ಕೃಷ್ಣನ್ ತಾರಾಗಣದಲ್ಲಿದ್ದರು.