ಪೂರಿ ಜಗನ್ನಾಥ್ ನಿರ್ದೇಶನದ 'ರೋಗ್' ಸಿನೆಮಾ ಪೋಸ್ಟರ್ 
ಸಿನಿಮಾ ಸುದ್ದಿ

ಆರ್ ಜಿ ವಿ ಗಮನ ಸೆಳೆದ ಇಶಾನ್ ಅವರ 'ರೋಗ್' ಸಿನೆಮಾ ಪೋಸ್ಟರ್

ಪೂರಿ ಜಗನ್ನಾಥ್ ನಿರ್ದೇಶನದ ಮುಂದಿನ ಕನ್ನಡ ಸಿನೆಮಾ 'ರೋಗ್' ನ ಪೋಸ್ಟರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು.

ಬೆಂಗಳೂರು: ಪೂರಿ ಜಗನ್ನಾಥ್ ನಿರ್ದೇಶನದ ಮುಂದಿನ ಕನ್ನಡ ಸಿನೆಮಾ 'ರೋಗ್' ನ ಪೋಸ್ಟರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. 
ಹಗ್ಗಕ್ಕೆ ಕಟ್ಟಿ ತಲೆಕೆಳಕಾಗಿ ನೇತಾಡುತ್ತಿರುವ ಹೀರೊ ಚಿತ್ರ ಇರುವ ಈ ಪೋಸ್ಟರ್ ಚಿತ್ರರಂಗದಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಈಗ ಖ್ಯಾತ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಗಮನ ಸೆಳೆಯಲು ಸಫಲವಾಗಿದ್ದು, ಅವರು ಕೂಡ ಇದರ ಬಗ್ಗೆ ಟ್ವೀಟ್ ಮಾಡಿದ್ದಾರೆ. 
"ಸೂಪರ್ ಆಗಿದ್ದ 'ಈಡಿಯಟ್' ನಂತರ ಈಗ 'ರೋಗ್' ಅದ್ಭುತವಾಗಿ ಕಾಣುತ್ತಿದೆ... @ಪೂರಿಜಗನ್, ಇಂತಹ ಜನರನ್ನೇ ನೀವು ಇಷ್ಟ ಪಡುವುದೇಕೆ ಸರ್?" ಎಂದು ಆರ್ ಜಿ ವಿ ಬರೆದಿದ್ದಾರೆ. 
ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಮೂಲಕ ನಿರ್ದೇಶಕ ಪೂರಿ ಜಗನ್ನಾಥ್ ೧೬ ವರ್ಷಗಳ ನಂತರ ಸ್ಯಾಂಡಲ್ವುಡ್ ಗೆ ಹಿಂದಿರುಗುತ್ತಿದ್ದಾರೆ. ಅವರು ೨೦೦೨ ರಲ್ಲಿ ಪುನೀತ್ ರಾಜಕುಮಾರ್ ಅವರ 'ಅಪ್ಪು' ಚಿತ್ರವನ್ನು ನಿರ್ದೇಶಿಸಿದ್ದರು. 
ಈ ಸಿನೆಮಾ ನಾಯಕನಟ ಇಶಾನ್ ಅವರಿಗೂ ಇದು ಚೊಚ್ಚಲ ಚಿತ್ರ. ಈ ಸಿನೆಮಾದ ಪೋಸ್ಟರ್ ಗೆ ಅಭೂತಪೂರ್ವ ಪ್ರತಿಕ್ರಿಯೆ ಬಂದಿರುವ ಹಿನ್ನಲೆಯಲ್ಲಿ ಸಂತಸದಿಂದಿರುವ ನಟ "ನಿಮ್ಮೆಲ್ಲರ ಪ್ರೀತಿಗೆ, #ರೋಗ್ ಮೊದಲ ನೋಟಕ್ಕೆ ನೀಡುರುವ ಪ್ರತಿಕ್ರಿಯೆಗೆ ಧನ್ಯವಾದಗಳು. ಬಹಳ ಸಂತಸವಾಗಿದೆ! ನನ್ನ ಜೀವನದ ವ್ಯಾಲೆಂಟೈನ್ ಗೆ ವಿಶೇಷ ಧನ್ಯವಾದಗಳು @ಪೂರಿಜಗನ್ ಸರ್ ನಿಮ್ಮನ್ನು ಎಂದೆಂದಿಗೂ ಪ್ರೀತಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.
ನಿರ್ಮಾಪಕ ಸಿ ಆರ್ ಮನೋಹರ್ ಅವರ ಸೋದರಳಿಯ ಇಶಾನ್ ಎರಡೂ ಭಾಷೆಗಳಲ್ಲಿ ನಾಯಕನಟನಾಗಿ ಅಭಿನಯಿಸುತ್ತಿದ್ದಾರೆ, ಈ ಸಿನೆಮಾದ ಆಡಿಯೋ ಮಾರ್ಚ್ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಕಡಿವಾಣ: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ