ಪುತ್ರ ವೇದಾಂತ್ ನೊಂದಿಗೆ ನಟ ಮಾಧವನ್ (ಕೃಪೆ: ಮಾಧವನ್ ಟ್ವಿಟ್ಟರ್ ಖಾತೆ)
ಚೆನ್ನೈ: ಈಜು ಸ್ಪರ್ಧೆಯಲ್ಲಿ ಮಗ ಮಾಡಿರುವ ಸಾಧನಗೆ ಹೆಮ್ಮೆಯಾಗಿದೆ ಎಂದಿದ್ದಾರೆ ನಟ ಆರ್ ಮಾಧವನ್.
"ನನ್ನೊಳಗಿರುವ ತಂದೆಗೆ ಹೆಮ್ಮೆಯ ದಿನ ಇಂದು. ಖಾನ್ ಜಿಮ್ ನಲ್ಲಿ ವೇದಾಂತ್ ೪ ಕಿಮಿ ಸ್ವಿಮ್ಮಥಾನ್ ಅನ್ನು ೨೭ ನಿಮಿಷಗಳಲ್ಲಿ ಈಜಿದ. ಇದನ್ನು ನಾನು ಮಾಡಲು ಊಹಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಮಾಧವನ್ ಟ್ವೀಟ್ ಮಾಡಿದ್ದಾರೆ.
ಸರಿತಾ ಅವರನ್ನು ೧೮ ವರ್ಷಗಳಿಂದ ಮದುವೆಯಾಗಿರುವ ನಟ ಮಾಧವನ್ ಅವರಿಗೆ ೧೨ ವರ್ಷದ ಮಗ ಇದ್ದಾನೆ.
ನಟನೆಯ ಭಾಗದಲ್ಲಿ ಈಗ 'ತನು ವೆಡ್ಸ್ ಮನು' ನಟ ತಮಿಳು ಥ್ರಿಲ್ಲರ್ 'ವಿಕ್ರಂ ವೇಧ' ದಲ್ಲಿ ಬ್ಯುಸಿಯಾಗಿದ್ದಾರೆ.
ಬಾಲಿವುಡ್ ನಲ್ಲಿ ನಟ 'ಚಂದ ಮಾಮ ದೂರ್ ಕೆ' ಚಿತ್ರದಲ್ಲಿ ನಟಿಸುತ್ತಿದ್ದಾರೆ.