ಮಲಯಾಳಂ ನಟಿ ಅಪಹರಣ ಹಾಗೂ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಇದೀಗ ತಮಿಳುನಟಿ ವರಲಕ್ಷ್ಮಿ ಪ್ರಮುಖ ಟಿವಿ ಚಾನೆಲ್ ಒಂದರ ಮುಖ್ಯಸ್ಥರು ತಮ್ಮೊಂದಿಗೆ ಅಸಭ್ಯವಾಗಿ ಮಾತನಾಡಿದ್ದರೆಂದು ಗಂಭೀರ ಆರೋಪ ಮಾಡಿದ್ದಾರೆ.
ವರಲಕ್ಷ್ಮಿ ಅವರು ತಮ್ಮ ಟ್ವೀಟರ್ ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಮಹಿಳಾ ಸುರಕ್ಷೆ ಎನ್ನುವುದು ಹಾಸ್ಯದ ವಿಷಯವಾಗಿದೆ. ಕೊಚ್ಚಿಯಲ್ಲಿ ಇತರ ನಟಿಯರಂತೆ ನಾನು ಕೂಡ ಕಿರುಕುಳಕ್ಕೆ ಒಳಗಾಗಿದ್ದೆ. ಟಿವಿ ಚಾನೆಲ್ ಎಕ್ಸಿಕ್ಯೂಟಿವ್ ಒಬ್ಬರು ಕಾರ್ಯಕ್ರಮದ ಬಳಿಕ ನಾವು ಹೊರಗೆ ಎಲ್ಲಾದರೂ ಭೇಟಿಯಾಗೋಣವೇ ಅಂತಾ ಅಸಭ್ಯವಾಗಿ ಕೇಳಿದ್ದರು. ಕೆಲಸದ ವಿಚಾರ ಚರ್ಚಿಸಲು ಭೇಟಿಯಾಗಬೇಕಾ ಎಂದು ನಾನು ಪ್ರಶ್ನಿಸಿದಕ್ಕೆ ಆತ ಅದಕ್ಕಲ್ಲ ಬೇರೆ ವಿಷಯಕ್ಕೆ ಎಂದು ಹೇಳಿದ್ದರು ಎಂದು ಬರೆದುಕೊಂಡಿದ್ದಾರೆ.
ನಾವು ಸುಮ್ಮನೆ ಕುಳಿತರೆ ಪರಿಸ್ಥತಿ ಬದಲಾಗುವುದಿಲ್ಲ. ಎಫ್ಐಆರ್ ದಾಖಲಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಒಂದು ವೇಳೆ ಎಫ್ಐಆರ್ ದಾಖಲಿಸಿದರು ಅದು ಕೆಲ ದಿನಗಳ ಬಳಿಕ ಡಿಲೀಟ್ ಆಗುತ್ತೇ ಎಂದು ಬರೆದುಕೊಂಡಿದ್ದಾರೆ.