ಹೆಬ್ಬುಲಿ ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ಸುದೀಪ್ ನಟನೆಯ ಹೆಬ್ಬುಲಿ ಹೊಸ ದಾಖಲೆ: ಕರ್ನಾಟಕದಾದ್ಯಂತ 400 ಥಿಯೇಟರ್ ಗಳಲ್ಲಿ ರಿಲೀಸ್

ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಸಿನಿಮಾ ನಾಳೆ ಬಿಡುಗಡೆಯಾಗುತ್ತಿದ್ದು, 400 ಥಿಯೇಟರ್ ಗಳಲ್ಲಿ ...

ಬೆಂಗಳೂರು: ನೆಚ್ಚಿನ ನಟನ ಸಿನಿಮಾದ ಮೊದಲ ದಿನದ ಪ್ರದರ್ಶನ ನೋಡಲು ಸಾಧ್ಯವಾಗಲಿಲ್ಲ ಎಂದು ಅಭಿಮಾನಿಗಳು ನಿರಾಸೆ ಪಡುವಂತಿಲ್ಲ, ಏಕೆಂದರೆ ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಸಿನಿಮಾ ನಾಳೆ ಬಿಡುಗಡೆಯಾಗುತ್ತಿದ್ದು, 400 ಥಿಯೇಟರ್ ಗಳಲ್ಲಿ ರಿಲೀಸ್ ಆಗಲಿದೆ.

ಮಲ್ಟಿಪ್ಲೆಕ್ಸ್ ಸೇರಿದಂತೆ ರಾಜ್ಯಾದ್ಯಂತ 400 ಥಿಯೇಟರ್ ಗಳಲ್ಲಿ ಹೆಬ್ಬುಲಿ ಬಿಡುಗಡೆಯಾಗಲಿದೆ, ಮಧ್ಯರಾತ್ರಿ ಶೋ ನೋಡುವ ಅಭಿಮಾನಿಗಳಿಗೆ ಅಡ್ವಾನ್ಸ್ ಬುಕ್ಕಿಂಗ್ ಸೌಲಭ್ಯ ಕೂಡ ಒದಗಿಸಲಾಗಿದೆ ಎಂದು ಸಿನಿಮಾ ವಿತರಕ ಜಾಕ್ ಮಂಜು ಹೇಳಿದ್ದಾರೆಯ

ಮಲ್ಟಿಪ್ಲೆಕ್ಸ್  ಗಳಲ್ಲಿ ಹೆಬ್ಬುಲಿ ಸಿನಿಮಾ 17 ರಿಂದ 18 ಪ್ರದರ್ಶನ ಗೊಳ್ಳಲಿದೆ. ರಾಜ್ಯದ ಪ್ರತಿ ಥಿಯೇಟರ್ ನಲ್ಲೂ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ ಎಂದು ಮಾಹಿತಿ ನೀಡಿದ್ದಾರೆ.

ಉತ್ತರ ಕರ್ನಾಟಕದ ಬಳ್ಳಾರಿ, ಹೊಸಪೇಟೆ, ದಾವಣಗೆರೆ ಮತ್ತು ಶಿವಮೊಗ್ಗಗಳಲ್ಲಿ ಮಧ್ಯರಾತ್ರಿ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿ ಬೆಳಗ್ಗಿನ ಜಾವ 4 ಗಂಟೆ ಶೋ ವೀಕ್ಷಿಸಬಹುದಾಗಿದೆ.

ಭಾರತದಾದ್ಯಂತ  ಶುಕ್ರವಾರ 30 ಥಿಯೇಟರ್ ಗಳಲ್ಲಿ  ಹೆಬ್ಬುಲಿ ಪ್ರದರ್ಶನಗೊಳ್ಳಲಿದೆ. ಹೈದರಾಬಾದ್, ಚೆನ್ನೈ, ಮುಂಬಯಿ, ದೆಹಲಿ, ಕೊಚ್ಚಿ ಮತ್ತು ಅಹಮದಾಬಾದ್ ಗಳಲ್ಲಿ ಹೆಬ್ಬುಲಿ ರಿಲೀಸ್ ಆಗಲಿದೆ.

ಮೆಜಸ್ಟಿಕ್ ನಲ್ಲಿರುವ ಸಂತೋಷ್ ಥಿಯೇಟರ್ ಬಳಿ ಮಂಗಳೂರಿನ ಹುಲಿ ವೇಷ ತಂಡ ಮೊದಲ ದಿನ ಪ್ರದರ್ಶನ ತೋರಲಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ