ಸಾಂದರ್ಭಿಕ ಚಿತ್ರ 
ಸಿನಿಮಾ ಸುದ್ದಿ

ಮತ್ತೆ ಕೆಲಸ ಪ್ರಾರಂಭಿಸಿದ ಅಪಹರಣಕ್ಕೀಡಾಗಿದ್ದ ಮಲಯಾಳಂ ನಟಿ

ಎರಡು ಘಂಟೆಗಳ ಕಾಲ ಅಪಹರಣ ಪ್ರಹಸನದಲ್ಲಿ ಸಿಲುಕಿ ಬಿಡಿಸಿಕೊಂಡಿದ್ದ ಜನಪ್ರಿಯ ಮಲಯಾಳಂ ನಟಿ ಶನಿವಾರ ಮತ್ತೆ ಅವರ ನೂತನ ಸಿನೆಮಾ 'ಆಡಮ್' ಚಿತ್ರೀಕರಣದಲ್ಲಿ ಭಾಗಿಯಾಗದ್ದಾರೆ.

ಕೊಚ್ಚಿ: ಎರಡು ಘಂಟೆಗಳ ಕಾಲ ಅಪಹರಣ ಪ್ರಹಸನದಲ್ಲಿ ಸಿಲುಕಿ ಬಿಡಿಸಿಕೊಂಡಿದ್ದ ಜನಪ್ರಿಯ ಮಲಯಾಳಂ ನಟಿ ಶನಿವಾರ ಮತ್ತೆ ಅವರ ನೂತನ ಸಿನೆಮಾ 'ಆಡಮ್' ಚಿತ್ರೀಕರಣದಲ್ಲಿ ಭಾಗಿಯಾಗದ್ದಾರೆ. ಇದನ್ನು ಅವರ ಸಹನಟ ಪೃಥ್ವಿರಾಜ್ ಧೃಢೀಕರಿಸಿದ್ದಾರೆ. 
ನಟ ಈ ನಿರ್ಧಾರವನ್ನು 'ಅದ್ಭುತ' ಎಂದು ಕರೆದಿದ್ದಾರೆ. ನಟಿ ಹೊಸ ಸಿನೆಮಾದ ಪೂಜೆಯಲ್ಲಿ ಭಾಗಿಯಾಗಿದ್ದಾರೆ, 
"ಇಂದು (ಶನಿವಾರ) ನನ್ನ ಆತ್ಮೀಯ ಗೆಳತಿ ಸೆಟ್ ಗೆ ಬಂದಿದ್ದಾರೆ... ನನ್ನ ಜೀವನದ ಈ ಅದ್ಭುತ ಮಹಿಳೆಯ ಅದ್ಭುತ ಧೈರ್ಯವನ್ನು ಕಣ್ಣಾರೆ ಕಾಣುತ್ತಿದ್ದೇನೆ" ಎಂದು ಪೃಥ್ವಿರಾಜ್ ಫೇಸ್ಬುಕ್ ನಲ್ಲಿ ಬರೆದಿದ್ದಾರೆ. 
"ಇಂದು ಅವರು ಧೈರ್ಯವಾದ ಹೇಳಿಕೆ ನೀಡಿದ್ದಾರೆ.. ಇದು ಮುಂದಿನ ದಿನಗಳಲ್ಲಿ, ಹಲವು ಪ್ರದೇಶಗಳಲ್ಲಿ, ಲಿಂಗಗಳ ನಡುವೆ ಪ್ರತಿಧ್ವನಿಸಲಿದೆ- ಯಾವುದೇ ಘಟನೆ ನಿಮ್ಮ ಜೀವನವನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಅದನ್ನು ನೀವೇ ನಿಯಂತ್ರಿಸಬೇಕೆಂದು" 
"ವಿಶ್ವದಾದ್ಯಂತ ಈ ಹೇಳಿಕೆ ಇನ್ನು ಮುಂದೆ ಕೌನ್ಸಲ್ಲಿಂಗ್ ಗಳಲ್ಲಿ ಬಳಕೆಯಾಗಲಿದೆ. ನನ್ನ ಗೆಳತಿ ಮಾಡುತ್ತಿರುವ ಈ ಹೇಳಿಕೆ ಕೇಳದ ಲಕ್ಷಾಂತರ ಜನರ ಧ್ವನಿಯಾಗಲಿದೆ" ಎಂದು ಕೂಡ ಅವರು ಬರೆದಿದ್ದಾರೆ. 
ನಂತರ ಹೆಣ್ಣುಗಳನ್ನು ಕೀಳಾಗಿ ಚಿತ್ರಿಸುವ ಸಿನೆಮಾಗಳಲ್ಲಿ ನಟಿಸಿರುವುದಕ್ಕೆ ಅವರು ಕ್ಷಮೆ ಕೇಳಿದ್ದಾರೆ. 
"...ನಾನು ನಿಮ್ಮ ಆತ್ಮಗೌರವಕ್ಕೆ ಕುಂದು ತರುವಂತಹ ಕೆಲವು ಸಂಭಾಷಣೆಯನ್ನು ಹೇಳಿದ್ದೇನೆ. ಇನ್ನೆಂದಿಗೂ ನನ್ನ ಸಿನೆಮಾಗಳಲ್ಲಿ ಮಹಿಳೆಯರನ್ನು ಅಗೌರವಿಸಲು ಬಿಡುವುದಿಲ್ಲ..." ಎಂದು ಕೂಡ ಅವರು ಬರೆದಿದ್ದಾರೆ. 
ಫ್ರಬ್ರವರಿ ೧೭ ರಂದು ನಡೆದ ಈ ಅಪಹರಣದ ಪ್ರಕರಣದಲ್ಲಿ ಆರು ಜನರನ್ನು ಕೇರಳ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

SCROLL FOR NEXT