IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

Rajasthan Royals ತಂಡದ ಯುವ ಆರಂಭಿಕ ಬ್ಯಾಟರ್ ಸೂರ್ಯವಂಶಿ ಕೇವಲ 28 ಎಸೆತಗಳಲ್ಲಿ 97 ರನ್ ಸಿಡಿಸಿ, ಕೇವಲ 3 ರನ್‌ಗಳ ಅಂತರದಲ್ಲಿ ಶತಕ ತಪ್ಪಿಸಿಕೊಂಡರು.
Vaibhav Sooryavanshi
ವೈಭವ್ ಸೂರ್ಯವಂಶಿ
Updated on

ನ್ಯೂ ಚಂಡೀಗಢ: ಭಾರತದ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಐಪಿಎಲ್ ಟೂರ್ನಿಯ ಇಂದಿನ ಎಲಿಮಿನೇಟರ್ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಹೊರತಾಗಿಯೂ ಕೇವಲ 3 ರನ್ ಗಳ ಅಂತರದಲ್ಲಿ ವಿಶ್ವದಾಖಲೆಯೊಂದನ್ನು ಮಿಸ್ ಮಾಡಿಕೊಂಡರು.

ಬುಧವಾರ ಮುಲ್ಲನ್ ಪುರದ ನ್ಯೂ PCA ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ IPL 2026 ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಸ್ಫೋಟಕ ಇನ್ನಿಂಗ್ಸ್ ಆಡಿದ ವೈಭವ್ ಸೂರ್ಯವಂಶಿ ಕೇವಲ 3 ರನ್ ಗಳ ಅಂತರದಲ್ಲಿ ಭಾರೀ ದಾಖಲೆಯನ್ನು ಕೈಚೆಲ್ಲಿದರು.

Rajasthan Royals ತಂಡದ ಯುವ ಆರಂಭಿಕ ಬ್ಯಾಟರ್ ಸೂರ್ಯವಂಶಿ ಕೇವಲ 28 ಎಸೆತಗಳಲ್ಲಿ 97 ರನ್ ಸಿಡಿಸಿ, ಕೇವಲ 3 ರನ್‌ಗಳ ಅಂತರದಲ್ಲಿ ಶತಕ ತಪ್ಪಿಸಿಕೊಂಡರು. ಮಾತ್ರವಲ್ಲದೇ ಐಪಿಎಲ್ ಇತಿಹಾಸದ ವೇಗದ ಶತಕ ದಾಖಲೆಯನ್ನು ಮುರಿಯುವ ಸದಾವಕಾಶವನ್ನೂ ಕೈ ಚೆಲ್ಲಿದರು.

ಕೇವಲ 29 ಎಸೆತಗಳನ್ನು ಎದುರಿಸಿದ ವೈಭವ್ ಸೂರ್ಯವಂಶಿ ಬರೊಬ್ಬರಿ 12 ಸಿಕ್ಸರ್ ಮತ್ತು 5 ಬೌಂಡರಿ ಸಹಿತ 97 ರನ್ ಸಿಡಿಸಿದ್ದರು. ಆದರೆ ಪ್ರಫುಲ್ ಹಿಂಗೆ ಬೌಲಿಂಗ್ ನಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಸ್ಮರಣ್ ರವಿಚಂದ್ರನ್ ಗೆ ಕ್ಯಾಚ್ ನೀಡಿ ಔಟಾದರು. ಔಟಾಗುವ ಮೊದಲು ಕೊನೆಯ ಎರಡು ಅಥವಾ ಮೂರು ಎಸೆತಗಳಲ್ಲಿ ವೈಭವ್ 3 ರನ್ ಸಿಡಿಸಿದ್ದರೆ, IPL ಇತಿಹಾಸದ ಅತಿ ವೇಗದ ಶತಕ ಸಿಡಿಸಿದ ದಾಖಲೆಯನ್ನು ಮುರಿಯುತ್ತಿದ್ದರು.

ಪ್ರಸ್ತುತ ಈ ದಾಖಲೆ “ಯೂನಿವರ್ಸಲ್ ಬಾಸ್” Chris Gayle ಹೆಸರಿನಲ್ಲಿ ಇದೆ. ಗೇಲ್ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿ ಈ ಸಾಧನೆ ಮಾಡಿದ್ದರು. ವೈಭವ್ ಸೂರ್ಯವಂಶಿ ಆ ದೀರ್ಘಕಾಲದ ದಾಖಲೆಯನ್ನು ಮುರಿಯುವ ಅಂಚಿನಲ್ಲಿದ್ದರಾದರೂ 3 ರನ್ ಗಳ ಅಂತರದಲ್ಲಿ ಈ ದಾಖಲೆ ಮಿಸ್ ಮಾಡಿಕೊಂಡರು.

Vaibhav Sooryavanshi
IPL 2026 Eliminator: SRH ವಿರುದ್ಧ ವೈಭವ್ ಸೂರ್ಯವಂಶಿ ಸಿಕ್ಸರ್ ಸುರಿಮಳೆ, 14 ವರ್ಷ ಹಳೆಯ Chris gayle ದಾಖಲೆ ಧೂಳಿಪಟ

ಸ್ಫೋಟಕ ಆರಂಭ

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಮಹತ್ವದ ನಾಕೌಟ್ ಪಂದ್ಯದಲ್ಲಿ ಸೂರ್ಯವಂಶಿ ರಾಜಸ್ಥಾನ ರಾಯಲ್ಸ್‌ಗೆ ಕನಸಿನ ಆರಂಭ ಒದಗಿಸಿದರು. 8ನೇ ಓವರ್‌ನ ಕೊನೆಯ ಎಸೆತದಲ್ಲಿ ಪ್ರಫುಲ್ ಹಿಂಗೆ ಬೌಲಿಂಗ್‌ನಲ್ಲಿ ಸೂರ್ಯವಂಶಿ ಔಟಾಗುವಷ್ಟರಲ್ಲಿ RR ತಂಡ ಕೇವಲ 8 ಓವರ್‌ಗಳಲ್ಲಿ 125/1 ರನ್‌ಗಳ ಭರ್ಜರಿ ಸ್ಥಿತಿಯಲ್ಲಿ ಇತ್ತು.

ವೈಭವ್ ಸೂರ್ಯವಂಶಿ 334.48ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ 5 ಬೌಂಡರಿ ಹಾಗೂ 12 ಸಿಕ್ಸರ್‌ಗಳನ್ನು ಸಿಡಿಸಿದರು. ಈ ಯುವ ಬ್ಯಾಟರ್ ತೋರಿದ ಅದ್ಭುತ ಬ್ಯಾಟಿಂಗ್ ಪ್ರತಿಭೆಗೆ ಇಂಟರ್ನೆಟ್ ಬಳಕೆದಾರರು ಭಾರೀ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com