IPL 2026 Eliminator: SRH ವಿರುದ್ಧ ವೈಭವ್ ಸೂರ್ಯವಂಶಿ ಸಿಕ್ಸರ್ ಸುರಿಮಳೆ, 14 ವರ್ಷ ಹಳೆಯ Chris gayle ದಾಖಲೆ ಧೂಳಿಪಟ

ಮೊದಲು ಬ್ಯಾಟಿಂಗ್ ಮಾಡುತ್ತಿರುವ ರಾಜಸ್ತಾನ ರಾಯಲ್ಸ್ ತಂಡಕ್ಕೆ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ.
Vaibhav Sooryavanshi
ವೈಭವ್ ಸೂರ್ಯವಂಶಿ ದಾಖಲೆ
Updated on

ಮುಲ್ಲನ್ ಪುರ: ಐಪಿಎಲ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸಿಕ್ಸರ್ ಗಳ ಸುರಿಮಳೆಯನ್ನೇ ಗೈದ ರಾಜಸ್ತಾನ ರಾಯಲ್ಸ್ ತಂಡದ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ 14 ವರ್ಷ ಹಳೆಯ Chris gayle ದಾಖಲೆಯನ್ನೇ ಧೂಳಿಪಟ ಮಾಡಿದ್ದಾರೆ.

ನ್ಯೂ ಚಂಡೀಗಢದ ಮುಲ್ಲನ್ ಪುರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಅದರಂತೆ ಮೊದಲು ಬ್ಯಾಟಿಂಗ್ ಮಾಡುತ್ತಿರುವ ರಾಜಸ್ತಾನ ರಾಯಲ್ಸ್ ತಂಡಕ್ಕೆ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ.

ಯಶಸ್ವಿ ಜೈಸ್ವಾಲ್ ಜೊತೆ ಆರಂಭಿಕರಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ರಾಜಸ್ತಾನ ಪರ ಮೊದಲ ವಿಕೆಟ್ ಗೆ ದಾಖಲೆಯ 125 ರನ್ ಗಳ ಜೊತೆಯಾಟವಾಡಿದರು. ಕೇವಲ 29 ಎಸೆತಗಳನ್ನು ಎದುರಿಸಿದ ವೈಭವ್ ಸೂರ್ಯವಂಶಿ ಬರೊಬ್ಬರಿ 12 ಸಿಕ್ಸರ್ ಮತ್ತು 5 ಬೌಂಡರಿ ಸಹಿತ 97 ರನ್ ಸಿಡಿಸಿದರು. ಆದರೆ ಪ್ರಫುಲ್ ಹಿಂಗೆ ಬೌಲಿಂಗ್ ನಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಸ್ಮರಣ್ ರವಿಚಂದ್ರನ್ ಗೆ ಕ್ಯಾಚ್ ನೀಡಿ ಔಟಾದರು.

Vaibhav Sooryavanshi
IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್..; Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

14 ವರ್ಷ ಹಳೆಯ Chris gayle ದಾಖಲೆ ಧೂಳಿಪಟ

ವೈಭವ್ ಸೂರ್ಯವಂಶಿ IPL 2026ರಲ್ಲಿ ತಮ್ಮ ವೃತ್ತಿ ಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, 15 ವರ್ಷದ ಈ ಯುವ ಆಟಗಾರ ನಿರಂತರವಾಗಿ ದಾಖಲೆಗಳನ್ನು ಮುರಿಯುತ್ತಲೇ ಇದ್ದಾರೆ. ಎಡಗೈ ಬ್ಯಾಟರ್ ಸೂರ್ಯವಂಶಿ ಇಂದಿನ ಪಂದ್ಯದಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದು, ಒಂದು IPL ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು (59) ಬಾರಿಸಿದ ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ (Chris Gayle) ಅವರ ದಾಖಲೆಯನ್ನು ಧೂಳಿಪಟ ಮಾಡಿದರು.

ಸಾಕಿಬ್ ಹುಸೇನ್ ಅವರ ಬೌಲಿಂಗ್‌ನಲ್ಲಿ ಲಾಂಗ್-ಆಫ್ ಮೇಲೆ ಭಾರೀ ಸಿಕ್ಸರ್ ಸಿಡಿಸಿ, ಸೂರ್ಯವಂಶಿ 60ನೇ ಸಿಕ್ಸರ್ ಪೂರೈಸಿ ಕೆರಿಬಿಯನ್ ದಿಗ್ಗಜ ಬ್ಯಾಟರ್ ಗೇಲ್ ಅವರ ಗರಿಷ್ಠ ಸಿಕ್ಸರ್ ದಾಖಲೆ ಮುರಿದರು. ಕ್ರಿಸ್ ಗೇಲ್ ಈ ದಾಖಲೆಯನ್ನು 2012ರಲ್ಲಿ ನಿರ್ಮಿಸಿದ್ದರು.

Most Sixes in an IPL Season

  • 62 Sixes: Vaibhav Sooryavanshi (2026)

  • 59 Sixes: Chris Gayle (2012)

  • 52 Sixes: Andre Russell (2019)

  • 51 Sixes: Chris Gayle (2013)

  • 45 Sixes: Jos Buttler (2022)

ವೇಗದ ಅರ್ಧಶತಕ

ಇದೇ ವೇಳೆ ವೈಭವ್ ಸೂರ್ಯವಂಶಿ IPL ನಾಕೌಟ್/ಪ್ಲೇಆಫ್ ಇತಿಹಾಸದಲ್ಲಿನ ಜಂಟಿ ವೇಗದ ಅರ್ಧಶತಕ ಸಿಡಿಸಿದ ದಾಖಲೆಯನ್ನೂ ನಿರ್ಮಿಸಿದರು. ಯುವ ಬ್ಯಾಟರ್ ಸೂರ್ಯವಂಶಿ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆ ಮೂಲಕ ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಆ್ಯಡಂ ಗಿಲ್ ಕ್ರಿಸ್ಟ್ (Adam Gilchrist) ಅವರ ದಾಖಲೆಯನ್ನು ಮೀರಿಸಿದರು. ಈ ಹಿಂದೆ ಗಿಲ್‌ಕ್ರಿಸ್ಟ್ 17 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು.

ಇದೇ ವೇಳೆ, 2014ರಲ್ಲಿ ವಾಂಖೆಡೆ ಮೈದಾನದಲ್ಲಿ Punjab Kings ವಿರುದ್ಧ 16 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದ ಮಾಜಿ ಭಾರತೀಯ ಬ್ಯಾಟರ್ ಸುರೇಶ್ ರೈನಾ (Suresh Raina) ಅವರ ದಾಖಲೆಯನ್ನು ಸೂರ್ಯವಂಶಿ ಸರಿಗಟ್ಟಿದರು.

Fastest 50s in IPL knockouts/Playoffs (by balls)

  • 16 - S Raina vs PBKS, Wankhede, 2014

  • 16 - V Sooryavanshi vs SRH, Mullanpur, 2026*

  • 17 - A Gilchrist vs DC, Centurion, 2009

  • 20 - MS Dhoni vs MI, Bengaluru, 2012

  • 21 - Dwayne Smith vs CSK, Delhi, 2013

ಅಂತೆಯೇ ಸೂರ್ಯವಂಶಿ IPL ಸೀಸನ್‌ನಲ್ಲಿ 600 ರನ್ ಪೂರೈಸಿದ ಅತಿ ಕಿರಿಯ ಬ್ಯಾಟರ್ ಎಂಬ ಕೀರ್ತಿಗೂ ಭಾಜನರಾಗಿದ್ದು, ಈ ಮೊದಲು ಈ ದಾಖಲೆ ರಿಷಬ್ ಪಂತ್ (Rishabh Pant) ಅವರ ಹೆಸರಿನಲ್ಲಿ ಇತ್ತು. ಅವರು 2019ರಲ್ಲಿ Delhi Daredevils ಪರವಾಗಿ ಈ ಸಾಧನೆ ಮಾಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com