ಬೆಂಗಳೂರು: 'ಮಾಸ್ತಿ ಗುಡಿ' ಚಿತ್ರೀಕರಣದ ವೇಳೆ ಸಂಭವಿಸಿದ ದುರ್ಘಟನೆಯಿಂದ ಇಬ್ಬರು ನಟರು ಸಾವನಪ್ಪಿದ ಕಾರಣ ಹೀರೊ ದುನಿಯಾ ವಿಜಯ್ ಅವರಿಗೆ ಮುಂದಿನ ನಿರ್ದೇಶನ ನೀಡುವವರೆಗೂ ನಟನೆಯಿಂದ ದೂರವುಳಿಯುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೂಚಿಸಿತ್ತು. ಈಗ ನಟಿಸಲು ಅನುಮತಿ ನೀಡಲಾಗಿದೆ ಎಂಬ ಸುದ್ದಿ ತಿಳಿದು ನಿರ್ದೇಶಕ ಆರ್ ಚಂದ್ರು, ವಿಜಯ್ ನಟನೆಯ 'ಕನಕ' ಚಿತ್ರೀಕರಿಸಲು ಮುಂದಾಗಿದ್ದಾರೆ.
ಕನಕದಾಸರ ಹುಟ್ಟಿದ ಭಾಗದ ಚಿತ್ರೀಕರಣ ಇಂದು ನಡೆಯಲಿದೆಯಂತೆ. ಇದರ ಚಿತ್ರೀಕರಣಕ್ಕಾಗಿ ಲಾರಿಗಳಲ್ಲಿ ಮಹಾರಾಷ್ಟ್ರದಿಂದ ಎಮ್ಮೆಗಳನ್ನು ಬೆಂಗಳೂರಿಗೆ ತರಲಾಗುತ್ತಿದೆಯಂತೆ. "ಈ ಸಿನೆಮಾ ಸಂತ ಕನಕದಾಸರ ಬಗ್ಗೆ ಅಲ್ಲವಾದರೂ, ಅವರಿಗೆ ಗೌರವ ಸಮರ್ಪಿಸಲು ಚಿತ್ರತಂಡ ಮುಂದಾಗಿದೆ" ಎಂದು ತಿಳಿಸುತ್ತಾರೆ ಚಂದ್ರು.
ಈ ಸಿನೆಮಾಗೆ ನವೀನ್ ಸಜ್ಜು ಸಂಗೀತ ನೀಡಲಿದ್ದು, ಸತ್ಯ ಹೆಗಡೆ ಸಿನೆಮ್ಯಾಟೋಗ್ರಾಫರ್. ಇನ್ನೊಂದು ವಾರದಲ್ಲಿ ನಾಯಕನಟಿಯ ಆಯ್ಕೆ ಅಂತಿಮಗೊಳ್ಳಲಿದೆ ಎನ್ನುತ್ತಾರೆ ಚಂದ್ರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics