ಸಿನಿಮಾ ಸುದ್ದಿ

'ಚೌಕ'ದ ಕಿರೀಟಕ್ಕೆ ಐವರು ಸಂಗೀತ ನಿರ್ದೇಶಕರ ಸಂಗೀತದ ಗರಿ

Guruprasad Narayana
ಬೆಂಗಳೂರು: ತರುಣ್ ಸುಧೀರ್ ಅವರ ಚೊಚ್ಚಲ ನಿರ್ದೇಶನದ ಚಿತ್ರದಲ್ಲಿ ಸಂಭಾಷಣಕಾರರು, ನೃತ್ಯ ನಿರ್ದೇಶಕರು, ಛಾಯಾಗ್ರಹಣಕಾರರು, ಸಂಗೀತ ನಿರ್ದೇಶಕರು ಮತ್ತು ಕಲಾ ನಿರ್ದೇಶಕರು ಸೇರಿದಂತೆ ೨೫ ಜನ ತಂತ್ರಜ್ಞರನ್ನು ಒಗ್ಗೂಡಿಸಿದ್ದಾರೆ. 
ಈ ಸಿನೆಮಾದ ಹಾಡುಗಳಿಗೆ ಐವರು ಖ್ಯಾತ ಸಂಗೀತ ನಿರ್ದೇಶಕರು ಸಂಗೀತ ಒದಗಿಸಿರುವುದು ವಿಶೇಷ. ಗುರುಕಿರಣ್, ವಿ ಹರಿಕೃಷ್ಣ, ಅರ್ಜುನ್ ಜನ್ಯ, ವಿ ಶ್ರೀಧರ್, ಅನೂಪ್ ಸೀಳಿನ್ ತಮ್ಮ ಅತ್ಯುತ್ತಮ ಪ್ರತಿಭಯನ್ನು ಹರಿದುಬಿಟ್ಟಿದ್ದಾರೆ. ಯೋಗರಾಜ್ ಭಟ್ ಸಾಹಿತ್ಯ ಬರೆದು ಹರಿಕೃಷ್ಣ ಸಂಗೀತವಿರುವ 'ಅಲ್ಲಾಡ್ಸು ಅಲ್ಲಾಡ್ಸು' ಹಾಡು ಈಗಾಗಲೇ ಭಾರಿ ಜನಪ್ರಿಯತೆ ಪಡೆದಿದೆ. ಅರ್ಜುನ್ ಜನ್ಯ ಸಂಗೀತದ 'ಅಪ್ಪ ಐ ಲವ್ ಯು' ಕೂಡ ಸಂಚಲನ ಮೂಡಿಸುವತ್ತ ಮುಂದುವರೆದಿದೆ. 
'ತುರ್ತಿನಲ್ಲಿ ಗೀಚಿದ' ಹಾಡಿಗೆ ವಿ ಶ್ರೀಧರ್ ಸಂಗೀತ ನೀಡಿದ್ದಾರೆ. ಗುರುಕಿರಣ್ ಸಂಗೀತದ ಹಾಡು ನಟ ದ್ವಾರಕೀಶ್ ಅವರಿಗೆ ಗೌರವ ಸಮಪರ್ಪಿಸುತ್ತದೆ ಎನ್ನುವ ತರುಣ್, ಅನೂಪ್ ಸೀಳಿನ್ ಅವರ ಹಾಡು ಮನರಂಜನೆಯಿಂದ ಕೂಡಿದ್ದು ನಾಲ್ಕು ವಿಭಿನ್ನ ಶೈಲಿಯ ಸಂಗೀತವನ್ನು ಒಳಗೊಳ್ಳಲಿದೆ ಎಂದಿದ್ದಾರೆ. 
ಅರ್ಜುನ್ ಜನ್ಯ ಅವರು ಹಿನ್ನಲೆ ಸಂಗೀತ ಕೂಡ ನೀಡಿದ್ದು "ವಿಭಿನ್ನ ಕಾಲಘಟ್ಟಗಳಲ್ಲಿ  ನಡೆಯುವ ಈ ಕಥೆಗೆ ಹಿನ್ನಲೆ ಸಂಗೀತ ಅತಿ ಮುಖ್ಯ" ಎನ್ನುತ್ತಾರೆ ನಿರ್ದೇಶಕ. ಹಾಗೆಯೇ ಅವರ 'ವಂದೇ ಮಾತರಂ ' ಹಾಡು ಕೂಡ ಸಿನೆಮಾ ಒಳಗೊಳ್ಳಲಿದೆಯಂತೆ. 
SCROLL FOR NEXT