ನಟಿ ರಚಿತಾ ರಾಮ್ 
ಸಿನಿಮಾ ಸುದ್ದಿ

'ಜಿಲ್ಕಾ ಜಿಲ್ಕಾ' ರಿಮಿಕ್ಸ್ ಹಾಡಿಗೆ ಹೆಜ್ಜೆ ಹಾಕಿದ ರಚಿತಾ ರಾಮ್

ಜೂಹಿ ಚಾವ್ಲಾ ರೆಟ್ರೋ ಅವತಾರದಲ್ಲಿ ಕಾಣಿಸಿಕೊಂಡಿದ್ದ 'ಪುಷ್ಪಕ ವಿಮಾನ' ಸಿನೆಮಾದ ಹಾಡು 'ಜಿಲ್ಕಾ ಜಿಲ್ಕಾ'. ಈಗ ಅದರ ರಿಮಿಕ್ಸ್ ಅವತಾರಕ್ಕೆ ನಟಿ ರಚಿತಾ ರಾಮ್ ಹೆಜ್ಜೆ ಹಾಕಿದ್ದಾರೆ...

ಬೆಂಗಳೂರು: ಜೂಹಿ ಚಾವ್ಲಾ ರೆಟ್ರೋ ಅವತಾರದಲ್ಲಿ ಕಾಣಿಸಿಕೊಂಡಿದ್ದ 'ಪುಷ್ಪಕ ವಿಮಾನ' ಸಿನೆಮಾದ ಹಾಡು 'ಜಿಲ್ಕಾ ಜಿಲ್ಕಾ'. ಈಗ ಅದರ ರಿಮಿಕ್ಸ್ ಅವತಾರಕ್ಕೆ ನಟಿ ರಚಿತಾ ರಾಮ್ ಹೆಜ್ಜೆ ಹಾಕಿದ್ದಾರೆ. ಆರ್ ಜೆ ಪ್ರದೀಪ್ ಅಭಿಯಾನದ ಸಕತ್ ಸ್ಟುಡಿಯೋ ಈ ಹಾಡನ್ನು ನಿರ್ಮಿಸಿ ಸಾಮಾಜಿಕ ಜಾಲತಾಣದಲ್ಲಿ ಇಂದು ಬಿಡುಗಡೆ ಮಾಡಲಿದೆ.

"ನಾನು ಮೊದಲು 'ಕಿರಿಕ್ ಪಾರ್ಟಿ' ಸಿನೆಮಾದ ಹಲ್ಲೋ ಹೂ ಆರ್ ಯು ಹಾಡಿನಿಂದ ಪ್ರಾರಂಭಿಸಿದೆ. ಅದು ಬಹಳ ಪ್ರಖ್ಯಾತವಾಗಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ೧.೫ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಗೊಂಡಿತು. ಈಗ ಚರಣ್ ರಾಜ್ ಸಂಗೀತದ 'ಪುಷ್ಪಕ ವಿಮಾನ' ಸಿನೆಮಾದ ಜಿಲ್ಕಾ ಜಿಲ್ಕಾ ರಿಮಿಕ್ಸ್ ಮಾಡಿದ್ದೇನೆ. ಹಾಡುಗಳಲ್ಲದೆ ಪ್ರೇಕ್ಷಕರ ನಡುವೆ ಪ್ರಖ್ಯಾತವಾಗಿರವ ದೃಶ್ಯಗಳು, ಸಂಭಾಷಣೆ ಇತ್ಯಾದಿಯನ್ನು ಕೂಡ ರಿಮಿಕ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡುತ್ತಿದ್ದೇನೆ" ಎನ್ನುತ್ತಾರೆ ಪ್ರದೀಪ್.

"ಇದು ಪ್ರಾರಂಭ ಮಾತ್ರ, ಸಕತ್ ಸ್ಟುಡಿಯೊಸ್ ಗಾಗಿ ಇನ್ನು ಹೆಚ್ಚಿನ ಯೋಜನೆಗಳಿವೆ" ಎನ್ನುವ ಅವರು "ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡುವ ಸರಣಿಯೊಂದನ್ನು ಪ್ರಾರಂಭಿಸುವ ಬಗ್ಗೆಯೂ ಚಿಂತನೆಯಿದೆ" ಎನ್ನುತ್ತಾರೆ.

ಜಿಲ್ಕಾ ಜಿಲ್ಕಾ ರಾಕ್ ಅವತರಿಣಿಕೆಯ ಬಗ್ಗೆ ಉತ್ಸುಕರಾಗಿರುವ ರಚಿತಾ "ನಾನು ಜಿಲ್ಕಾ ಜಿಲ್ಕಾ ಹಾಡನ್ನು ಮೊದಲ ಬಾರಿ ಕೇಳಿದಾಕ್ಷಣ ಅದರ ಭಾಗವಾಗಲು ಸಾಧ್ಯವಾಗಲಿಲ್ಲವೆಲ್ಲ ಎಂದು ದುಃಖವಾಗಿತ್ತು. ಕಳೆದ ಸೈಮಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಈ ಹಾಡಿಗೆ ಹೆಜ್ಜೆ ಹಾಕಿದ್ದೆ. ಈಗ ಅದರ ರಿಮಿಕ್ಸ್ ಅವತಾರಿಣಿಕೆಯಲ್ಲಿ ಕಾಣಿಸಿಕೊಳ್ಳಲು ಪ್ರದೀಪ ಕೇಳಿಕೊಂಡಾಗ ನಾನು ಕೂಡಲೇ ಒಪ್ಪಿಕೊಂಡೆ" ಎನ್ನುತ್ತಾರೆ.

ಈ ರಿಮಿಕ್ಸ್ ವಿಡಿಯೋ ಇಂದು ಬಿಡುಗಡೆಯಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್