ನಟ ಅರ್ಜುನ್ ಸರ್ಜಾ 
ಸಿನಿಮಾ ಸುದ್ದಿ

ಏಳು ವರ್ಷಗಳ ನಂತರ ತೆಲುಗು ಚಿತ್ರರಂಗಕ್ಕೆ ಹಿಂದಿರುಗಿದ ಅರ್ಜುನ್ ಸರ್ಜಾ

ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಏಳು ವರ್ಷಗಳ ನಂತರ ಮತ್ತೆ ಟಾಲಿವುಡ್ ಪ್ರವೇಶಿಸುತ್ತಿದ್ದಾರೆ. ನಿರ್ದೇಶಕ ಹನು ರಾಘವಪುಡಿ ನಿರ್ದೇಶನದ ಇನ್ನು ಹೆಸರಿಡದ ಈ ಚಿತ್ರದಲ್ಲಿ ಅರ್ಜುನ್

ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಏಳು ವರ್ಷಗಳ ನಂತರ ಮತ್ತೆ ಟಾಲಿವುಡ್ ಪ್ರವೇಶಿಸುತ್ತಿದ್ದಾರೆ. ನಿರ್ದೇಶಕ ಹನು ರಾಘವಪುಡಿ ನಿರ್ದೇಶನದ ಇನ್ನು ಹೆಸರಿಡದ ಈ ಚಿತ್ರದಲ್ಲಿ ಅರ್ಜುನ್ ನಿತಿನ್ ಜೊತೆಗೆ ನಟಿಸಲಿದ್ದಾರೆ. 
"ಅವರು ವಿಶೇಷ ಖಳನಾಯಕನ ಪಾತ್ರದಲ್ಲಿ ನಟಿಸಲಿದ್ದಾರೆ ಮತ್ತು ಪಾತ್ರ ಕೇವಲ ಶೈಲಿಯದ್ದಲ್ಲ ಬದಲಾಗಿ ಒಳ್ಳೆಯ ವಿಷಯ ಇದೆ" ಎಂದು ನಿರ್ದೇಶಕ ಹೇಳಿದ್ದು, "ಅಮೆರಿಕಾದಲ್ಲಿ ನಡೆಯಲಿರುವ ಮುಂದಿನ ಹಂತದ ಚಿತ್ರೀಕರಣದಲ್ಲಿ ಅರ್ಜುನ್ ಸೆಟ್ ಸೇರಲಿದ್ದಾರೆ" ಎಂದಿದ್ದಾರೆ. 
ಇತರ ನಟರ ಬದಲು ಆಕ್ಷನ್ ಕಿಂಗ್ ಅವರಣೆ ಆಯ್ಕೆ ಮಾಡಿದ್ದೇಕೆ ಎಂಬ ಪ್ರಶ್ನೆಗೆ, ಈ ಪಾತ್ರಕ್ಕೆ ಬೇರೆ ಯಾರ ಹೆಸರು ನನ್ನ ಮನಸ್ಸಿನಲ್ಲಿರಲಿಲ್ಲ ಎಂದಿದ್ದಾರೆ. ಮೊದಲಿಗೆ ಅವರನ್ನು ಕೇಳಲು ಆತಂಕಗೊಂಡಿದ್ದೆ ಎನ್ನುವ ಹನು "ನಾನು ಅವರಿಗೆ ಕಥೆ ಹೇಳುವ ಧೈರ್ಯ ಕೂಡ ಹೊಂದಿರಲಿಲ್ಲ. ಖಳನಾಯಕನ ಪಾತ್ರಕ್ಕೆ ಅವರು ಹೇಗೆ ಪ್ರತಿಕ್ರಿಯಿಸಬಹುದು ಎಂದು ಚಿಂತಿಸುತ್ತಾ ಕುಳಿತಿದ್ದೆ. ಆದರೆ ಅವರು ಕಥೆ ಕೇಳಿದ ತಕ್ಷಣ ಪಾತ್ರ ಇಷ್ಟಪಟ್ಟರು" ಎಂದು ತಿಳಿಸುತ್ತಾರೆ. 
ಈಮಧ್ಯೆ ಅರುಣ್ ವೈದ್ಯನಾಥನ್ ನಿರ್ದೇಶನದ ಕನ್ನಡ ತಮಿಳು ದ್ವಿಭಾಷಾ ಚಿತ್ರ ವಿಸ್ಮಯ/ನಿಭುನನ್ ಬಿಡುಗಡೆಯನ್ನು ಅರ್ಜುನ್ ಸರ್ಜಾ ಎದುರು ನೋಡುತ್ತಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

SCROLL FOR NEXT