ಪಾರುಲ್ ಯಾದವ್ 
ಸಿನಿಮಾ ಸುದ್ದಿ

ಕಂಗನಾ 'ಕ್ವೀನ್' ಕನ್ನಡ, ತೆಲುಗಿಗೆ ರಿಮೇಕ್; ರಮೇಶ್ ನಿರ್ದೇಶನ

ಬಾಲಿವುಡ್ ನಟಿ ಕಂಗನಾ ರಣಾವತ್ ನಟಿಸಿದ್ದ 'ಕ್ವೀನ್' ಸಿನೆಮಾ ಭಾರಿ ಯಶಸ್ಸು ಕಂಡಿತ್ತು. ಈಗ ನಾಲ್ಕು ದಕ್ಷಿಣ ಭಾರತ ಭಾಷೆಗಳಿಗೆ ರಿಮೇಕ್ ಆಗಲು ಸಿದ್ಧವಾಗಿದೆ. ಕನ್ನಡದಲ್ಲಿ ಈ ಸಿನೆಮಾ ನಟ-ನಿರ್ದೇಶಕ

ಬೆಂಗಳೂರು: ಬಾಲಿವುಡ್ ನಟಿ ಕಂಗನಾ ರಣಾವತ್ ನಟಿಸಿದ್ದ 'ಕ್ವೀನ್' ಸಿನೆಮಾ ಭಾರಿ ಯಶಸ್ಸು ಕಂಡಿತ್ತು. ಈಗ ನಾಲ್ಕು ದಕ್ಷಿಣ ಭಾರತ ಭಾಷೆಗಳಿಗೆ ರಿಮೇಕ್ ಆಗಲು ಸಿದ್ಧವಾಗಿದೆ. ಕನ್ನಡದಲ್ಲಿ ಈ ಸಿನೆಮಾ ನಟ-ನಿರ್ದೇಶಕ ರಮೇಶ್ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ. 
ಮೂಲಗಳ ಪ್ರಕಾರ ಲಂಡನ್ ಮೂಲದ ನಿರ್ಮಾಪಕರು ಈ ರಿಮೇಕ್ ನಿರ್ದೇಶಕನಕ್ಕೆ ರಮೇಶ್ ಅರವಿಂದ್ ಅವರನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ. 
ರಮೇಶ್ ತೆಲುಗು ಅವತರಿಣಿಕೆಯನ್ನು ಕೂಡ ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಕನ್ನಡದಲ್ಲಿ 'ಕ್ವೀನ್' ಪಾತ್ರವನ್ನು ಪಾರುಲ್ ಯಾದವ್ ಪೋಷಿಸಲಿದ್ದಾರೆ, ತೆಲುಗು ರಿಮೇಕ್ ನಲ್ಲಿ ಈ ಪಾತ್ರವನ್ನು ತಮನ್ನಾ ಮಾಡಲಿದ್ದಾರಂತೆ. 
ರಮೇಶ್ ಈಗಾಗಲೇ ಹಲವು ರಿಮೇಕ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. 'ರಾಮ ಶಾಮ ಭಾಮಾ', 'ಸತ್ಯವಾನ್ ಸಾವಿತ್ರಿ', 'ಆಕ್ಸಿಡೆಂಟ್' ಮತ್ತು ಇತ್ತೀಚಿನ 'ಸುಂದರಾಂಗ ಜಾಣ' ಹಾಗು ಕಮಲಾ ಹಾಸನ್ ಅವರ ತಮಿಳು ಸಿನೆಮಾ 'ಉತ್ತಮ ವಿಲನ್' ಕೂಡ ರಮೇಶ್ ನಿರ್ದೇಶಿಸಿದ್ದಾರೆ. 
೧೨ ತೆಲುಗು ಸಿನೆಮಾಗಳಲ್ಲಿ ನಟಿಸಿರುವ ರಮೇಶ್ ಅವರಿಗೆ ಇದು ಅವರ ನಿರ್ದೇಶನದ ಚೊಚ್ಚಲ ತೆಲುಗು ಚಿತ್ರವಾಗಲಿದೆ. ಫೆಬ್ರವರಿ ಅಂತ್ಯಕ್ಕೆ ಅಥವಾ ಮಾರ್ಚ್ ನಲ್ಲಿ ಅಧಿಕೃತ ಘೋಷಣೆಯಾಗಲಿದ್ದು, ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನಲಾಗಿದೆ. 
ತಮಿಳು ಮತ್ತು ಮಲಯಾಳಂ ರಿಮೇಕ್ ಗಳನ್ನು ರೇವತಿ ನಿರ್ದೇಶಿಸಲಿದ್ದು, ತಮಿಳಿನಲ್ಲಿ ರಾಣಿ ಪಾತ್ರವನ್ನು ತಮನ್ನಾ ಮತ್ತು ಮಲಯಾಳಂ ನಲ್ಲಿ ಅಮಲಾ ಪೌಲ್ ನಿರ್ವಹಿಸಲಿದ್ದಾರೆ ಎನ್ನಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!