'ಕಿರಿಕ್ ಪಾರ್ಟಿ' ಸಿನೆಮಾದಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ 
ಸಿನಿಮಾ ಸುದ್ದಿ

೨೫ ದಿನಗಳಲ್ಲಿ ೨೫ ಕೋಟಿ ಗಳಿಕೆ ಕಂಡ 'ಕಿರಿಕ್ ಪಾರ್ಟಿ'

ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಭರ್ಜರಿ ಯಶಸ್ಸು ಮತ್ತು ಲಾಭ ಗಳಿಸುವತ್ತ ಮುನ್ನುಗ್ಗಿದೆ. ಈ ಸಿನೆಮಾ ರಕ್ಷಿತ್ ಶೆಟ್ಟಿ ಅವರನ್ನು ಮುಂದಿನ ಸ್ಟಾರ್ ನಟನನ್ನಾಗಿಸುವತ್ತಲೂ ದಾಪುಗಾಲು

ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಭರ್ಜರಿ ಯಶಸ್ಸು ಮತ್ತು ಲಾಭ ಗಳಿಸುವತ್ತ ಮುನ್ನುಗ್ಗಿದೆ. ಈ ಸಿನೆಮಾ ರಕ್ಷಿತ್ ಶೆಟ್ಟಿ ಅವರನ್ನು ಮುಂದಿನ ಸ್ಟಾರ್ ನಟನನ್ನಾಗಿಸುವತ್ತಲೂ ದಾಪುಗಾಲು ಹಾಕಿದ್ದು, ಇದರ ಬಾಕ್ಸ್ ಆಫಿಸ್ ಗಳಿಕೆ ನಿಬ್ಬೆರಗಾಗುವಂತೆ ಮಾಡಿದೆ. 
ರಕ್ಷಿತ್ ಶೆಟ್ಟಿ ಒಡೆತನದ ಪರಾಂವಹ್ ಸ್ಟುಡಿಯೋಸ್ ನಿರ್ಮಾಣದ 'ಕಿರಿಕ್ ಪಾರ್ಟಿ' ೨೫ ದಿನಗಳ ಪ್ರದರ್ಶನ ಪೂರೈಸಿದ್ದು, ಆ ಅವಧಿಯಲ್ಲಿ ೨೫ ಕೋಟಿ ಗಳಿಕೆ ಕಂಡಿದೆಯಂತೆ. 
ಈ ಬ್ಲಾಕ್ ಬಸ್ಟರ್ ಸಿನೆಮಾ ಜಾಗತಿಕ ಗಮನವನ್ನು ಕೂಡ ಸೆಳೆದಿದ್ದು, ಅಮೆರಿಕಾದಲ್ಲಿ ಫೆಬ್ರವರಿ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ ಮತ್ತು ೧೦೦ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆಯಂತೆ. ಕನ್ನಡ ಸಿನೆಮಾವೊಂದು ಅಮೆರಿಕಾದಲ್ಲಿ ಇಷ್ಟು ದೊಡ್ಡ ಮಟ್ಟದ ಬಿಡುಗಡೆ ಕಾಣುತ್ತಿರುವುದು ಇದೆ ಮೊದಲು. 
ಈ ಕಾಲೇಜು ಕಥಾನಕದಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ರಶ್ಮಿಕಾ ಮಂದಣ್ಣ, ಸಂಯುಕ್ತ ಹೆಗ್ಡೆ ನಟಿಸಿದ್ದು, ರಿಷಬ್ ಶೆಟ್ಟಿ ನಿರ್ದೇಶಕ. ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಕರಮ್ ಚಾವ್ಲಾ ಅವರ ಸಿನೆಮ್ಯಾಟೋಗ್ರಫಿ ಕೂಡ ಪ್ರೇಕ್ಷಕರ ಮನಸೂರೆಗೊಂಡಿರುವುದು ವಿಶೇಷ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!