ಸಿನಿಮಾ ಸುದ್ದಿ

'ಸಿಲಿಕಾನ್ ಸಿಟಿ'ಗೆ ಸ್ವತಃ ಬೈಕ್ ಸ್ಟಂಟ್ ಗಳನ್ನು ಮಾಡಿದ ಸೂರಜ್ ಗೌಡ

Guruprasad Narayana
ಬೆಂಗಳೂರು: ಕವಿರಾಜ್ ನಿರ್ದೇಶನದ 'ಮದುವೆಯ ಮಮತೆಯ ಕರೆಯೋಲೆ' ಸಿನೆಮಾದ ಮೂಲಕ ಸಿನೆಮಾ ವೃತ್ತಿ ಜೀವನ ಆರಂಭಿಸಿ, ಅರವಿಂದ್ ಶಾಸ್ತ್ರಿ ಅವರ 'ಕಹಿ' ಸಿನೆಮಾದ ನಟನೆಗಾಗಿ ಮೆಚ್ಚುಗೆ ಗಳಿಸಿದ ನಟ ಸೂರಜ್ ಗೌಡ ತಮ್ಮ ಸಿನೆಮಾಯಾನವನ್ನು ಮುಂದುವರೆಸಿದ್ದಾರೆ. 
ಅವರ ಮುಂದಿನ ಸಿನೆಮಾ 'ಸಿಲಿಕಾನ್ ಸಿಟಿ' ಕ್ರೈಮ್ ಥ್ರಿಲ್ಲರ್ ಆಗಿದ್ದು, ವಿಭಿನ್ನ ಪಾತ್ರದಲ್ಲಿ ಸೂರಜ್ ನಟಿಸಿದ್ದಾರೆ. ಈ ಸಿನೆಮಾ ಸದ್ಯಕ್ಕೆ ಡಬ್ಬಿಂಗ್ ಹಂತದಲ್ಲಿದೆ. 
ಇದು ಮಧ್ಯಮ ವರ್ಗದ ಅಪರಾಧಗಳ ಬಗೆಗಿನ ಸಿನೆಮಾ ಆಗಿದ್ದು ಶ್ರೀನಗರ ಕಿಟ್ಟಿ ಕೂಡ ನಟಿಸಿದ್ದಾರೆ. "ನಾವು ಈ ಸಿನೆಮಾದಲ್ಲಿ ಸಹೋದರರಾಗಿ ನಟಿಸಿದ್ದೇವೆ" ಎನ್ನುತ್ತಾರೆ ಸೂರಜ್. 
'ಸಿಲಿಕಾನ್ ಸಿಟಿ' ಸಿನೆಮಾದಲ್ಲಿ ತಾವು ನಿರ್ವಹಿಸಿರುವ ಬೈಕ್ ಸ್ಟಂಟ್ ಗಳ ಬಗ್ಗೆ ತಿಳಿಸುವ ಸೂರಜ್ "ನಾನು ಮೊದಲಿನಿಂದಲೂ ಹಲವು ಬೈಕ್ ಸ್ಟಂಟ್ ಮಾಡುತ್ತಿದ್ದೆ. ಈಗ ತೆರೆಯ ಮೇಲೆ ಸ್ವತಃ ನಾನೇ ಕೆಲವು ಸ್ಟಂಟ್ ಗಳನ್ನು ಮಾಡಿರುವುದು ಖುಷಿ ತಂದಿದೆ" ಎನ್ನುತ್ತಾರೆ.
ಸಿನೆಮಾದಲ್ಲಿ ಕಾವ್ಯ ಶೆಟ್ಟಿ ಮತ್ತು ಏಕ್ತಾ ರಾಥೋಡ್ ಕೂಡ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದು, ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. 
ಈ ಮಧ್ಯ ಸೂರಜ್ ನಟನೆಯ ಮತ್ತೊಂದು ಚಿತ್ರ 'ಪ್ರದೇಶ ಸಮಾಚಾರ' ಮುಗಿಯುವತ್ತ ದಾಪುಗಾಲು ಹಾಕಿದೆ. 
SCROLL FOR NEXT